ಬ್ರೇಕಿಂಗ್ ನ್ಯೂಸ್
23-10-21 12:14 pm Mangalore Reporter ಕರಾವಳಿ
ಶಿವಮೊಗ್ಗ, ಅ.22 : ರಾಹುಲ್ ಗಾಂಧಿ ಬಗ್ಗೆ ನಳಿನ್ ಕುಮಾರ್ ನೀಡಿರುವ ಹೇಳಿಕೆಗೆ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ. ಈ ನಳೀನ್ ಕುಮಾರ್ ಗೆ ಸೀರೆ ಉಡಿಸಿದರೆ, ಅವರು ಗಂಡಸೂ ಅಲ್ಲ, ಹೆಂಗಸು ಅಲ್ಲ. ಅಂಥ ವ್ಯಕ್ತಿ ನಳಿನ್ ಕುಮಾರ್. ಹಿಂದೊಮ್ಮೆ ಇಡೀ ಮಂಗಳೂರಿಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನ ಪಟ್ಟಿದ್ದರು ಎಂದು ಮೂದಲಿಸಿದ್ದಾರೆ.
ಅವರದೇ ಪಕ್ಷದ ನಾಯಕರೆನ್ನಿಸಿಕೊಂಡವರು, ವಿಧಾನಸಭೆಯಲ್ಲಿ ಬ್ಲೂ ಫಿಲಂ ನೋಡಿದ್ದಾರೆ. ಬಿಜೆಪಿಯಲ್ಲೇ ಅತ್ಯಾಚಾರಿಗಳಿದ್ದಾರೆ. ಅವರ ಪಕ್ಷದವರೇ ಹಲವು ಸೆಕ್ಸ್ ಸ್ಕ್ಯಾಂಡಲ್ ಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಂಥವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ.
ಇವೆಲ್ಲ ಹುಳುಕುಗಳ ಬಗ್ಗೆ ತಿಳಿದಿರುವ ಕಟೀಲು, ನಮ್ಮ ಕೇಂದ್ರ ನಾಯಕರ ಬಗ್ಗೆ ಟೀಕೆ ಮಾಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಅವರ ಹೇಳಿಕೆ, ಸರಿಯಲ್ಲ. ಇವರ ಪಕ್ಷದಲ್ಲೇ ಎಲ್ಲ ಕೊಳೆತು ನಾರುತ್ತಿದೆ. ತಮ್ಮ ತಟ್ಟೆಯಲ್ಲಿ ನೊಣ ಬಿದ್ದುಕೊಂಡು ಇನ್ನೊಬ್ಬರ ಬಗ್ಗೆ ಹೇಳುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ಟಾಂಗ್ ಕೊಟ್ಟಿದ್ದಾರೆ.
ಸಚಿವ ಈಶ್ವರಪ್ಪ ಹಿರಿಯರಿದ್ದಾರೆ. ಅವರು ಕೂಡ ನಮ್ಮ ನಾಯಕರ ವಿರುದ್ಧ ಅವಾಚ್ಯ ಭಾಷೆಗಳನ್ನು ಬಳಸುತ್ತಿದ್ದಾರೆ. ಆದರೆ ಈ ಬೇಳೂರು ಗೋಪಾಲಕೃಷ್ಣ ನಿಮಗೆ ಬೈದರೇ, ನೀವು ತಡೆದುಕೊಳ್ಳಲು ಆಗಲ್ಲ. ಕಾಂಗ್ರೆಸ್ ಇರುವುದಿಲ್ಲ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವವರೇ ಮುಂದಿನ ಚುನಾವಣೆಯಲ್ಲಿ ಇರುವುದಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯವರು ನೈತಿಕ ಪೊಲೀಸ್ಗಿರಿ ಬಗ್ಗೆ ಮಾತನಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಹಗುರವಾಗಿ ಮಾತನಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಬೇಳೂರು ಗೋಪಾಲಕೃಷ್ಣ , ಅವರ ಪಕ್ಷವೇ ಸರಿಯಾದ ರೀತಿಯಲ್ಲಿ ಇಲ್ಲ. ಅವರ ಪಕ್ಷದಲ್ಲೇ ಸಂಘಟನೆ ಇಲ್ಲ. ಇವರು ನಮ್ಮಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಸರಿ ಕಾಣೋದಿಲ್ಲ. ಕುಮಾರಸ್ವಾಮಿಯವರು ಬಹಳ ಎಚ್ಚರದಿಂದ ಹೇಳಿಕೆ ನೀಡಲಿ. ಮುಸ್ಲಿಮರ ಓಟು ಸೆಳೆಯಲು ಕುಮಾರಸ್ವಾಮಿ ಆರ್.ಎಸ್.ಎಸ್ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಅವರು ಕಾಂಗ್ರೆಸನ್ನ ಸೋಲಿಸಲು ಈ ರೀತಿ ಮಾಡುತ್ತಿದ್ದಾರೆ. ಅವರು ಮತ್ತು ಬಿಜೆಪಿ ಎರಡೂ ಒಂದೇ ಇದ್ದು ಕಾಂಗ್ರೆಸ್ ಸೋಲಿಸಲು ಹುನ್ನಾರ ನಡೆಸಿದ್ದಾರೆ.
ಯಡಿಯೂರಪ್ಪ ಅವರ ಪಿಎಗಳ ಮನೆಗಳನ್ನು ರೈಡ್ ಮಾಡಲಾಗಿದೆ. ಆದರೆ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮನೆ ಮೇಲೆ ದಾಳಿ ಮಾಡಲಿ. ನೂರಾರು ಕೋಟಿ ರೂ. ಲೂಟಿ ಮಾಡಿರುವ ದುಡ್ಡು ಷಡಾಕ್ಷರಿ ಬಳಿಯೇ ಇದೆ. ಸಂಸದ ಬಿ.ವೈ. ರಾಘವೇಂದ್ರ ಮತ್ತು ವಿಜಯೇಂದ್ರ ಅವರ ಹಣವೆಲ್ಲವೂ ಷಡಕ್ಷರಿ ಬಳಿ ಇದೆ. ಷಡಕ್ಷರಿ ಯಡಿಯೂರಪ್ಪ ಅವರ ಪಿಎನೂ ಆಗಿದ್ದವರು. ಯಡಿಯೂರಪ್ಪ ಅವರ ವ್ಯವಹಾರವೆಲ್ಲವೂ ಅವರೇ ನೋಡಿಕೊಂಡಿದ್ದಾರೆ. ಹಾಗಾಗಿ ಷಡಕ್ಷರಿ ಮನೆ ಮೇಲೆ ರೈಡ್ ಮಾಡಿದರೆ ಎಲ್ಲವೂ ಹೊರಬರ್ತದೆ ಎಂದು ಹೇಳಿದರು.
Kpcc Spokesperson Belur Gopalakrishna slams Nalin Kateel says he's a transgender. He also added that BJP party leaders are more interested in watching BLU film in the assembly.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm