ಬ್ರೇಕಿಂಗ್ ನ್ಯೂಸ್
26-10-21 04:44 pm Mangalore Reporter ಕರಾವಳಿ
ಮಂಗಳೂರು, ಅ.26: ಭಾರೀ ಗಾತ್ರದ ವೇಲ್ ಶಾರ್ಕ್ ಮೀನೊಂದು ಬಲೆಗೆ ಬಿದ್ದಿದ್ದು, ಅದನ್ನು ಮೀನುಗಾರರು ಮರಳಿ ಸುರಕ್ಷಿತವಾಗಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಸಾಗರ್ ಎನ್ನುವ ಬೋಟಿನಲ್ಲಿ 1500 ಕೇಜಿ ತೂಕದ ಮೀನು ಬಲೆಗೆ ಬಿದ್ದಿತ್ತು.
ವೇಲ್ ಶಾರ್ಕ್ ಮೀನುಗಳನ್ನು ಹಿಡಿಯುವುದು ನಿಷೇಧವಿದ್ದು, ಅಕಸ್ಮಾತ್ತಾಗಿ ಬಲೆಗೆ ಭಾರೀ ಗಾತ್ರದ ಮೀನು ಬಿದ್ದಿತ್ತು. ಆನಂತರ, ಮೀನನ್ನು ಬೋಟಿಗೆ ಎಳೆದು ಅದರಲ್ಲಿ ಹಿಡಿದಿದ್ದ ಬಲೆಗಳನ್ನು ಕಟ್ ಮಾಡಿ, ಮತ್ತೆ ಸಮುದ್ರಕ್ಕೆ ಬಿಡಲಾಗಿದೆ. ಎರಡು ಬೋಟ್ ಗಳ ಮೂಲಕ ಮೀನನ್ನು ಮರಳಿ ಸಮುದ್ರಕ್ಕೆ ಬಿಡುವ ಕಾರ್ಯಾಚರಣೆ ನಡೆಸಲಾಯಿತು.
ಮಂಗಳೂರಿನಿಂದ 50 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯೆ ಎರಡು ಬೋಟ್ ಗಳನ್ನು ಅಕ್ಕಪಕ್ಕ ನಿಲ್ಲಿಸಿ, ಯಶಸ್ವಿಯಾಗಿ ಮೀನನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಒಂದು ಬೋಟಿನಲ್ಲಿ ಕ್ರೇನ್ ನಿಲ್ಲಿಸಿ, ಅದನ್ನು ಹೊರಕ್ಕೆ ಎಳೆದು ಹಾಕುವ ದೃಶ್ಯವನ್ನು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಅದೀಗ ವೈರಲ್ ಆಗಿದೆ.
ಶಾರ್ಕ್ ಮತ್ತು ವೇಲ್ ನಲ್ಲಿ ವಿವಿಧ ರೀತಿಯ ಪ್ರಭೇದಗಳಿದ್ದು, ಆ ಪೈಕಿ ವೇಲ್ ಶಾರ್ಕ್ ಅನ್ನುವುದು ಕೂಡ ಒಂದು. ಈ ರೀತಿಯ ಮೀನುಗಳು ಬೃಹತ್ ಗಾತ್ರವನ್ನು ಹೊಂದಿರುತ್ತವೆ. ಈ ಮೀನುಗಳ ಸಂತತಿ ಕಡಿಮೆಯಾಗುತ್ತಿರುವುದರಿಂದ ಇದನ್ನು ಹಿಡಿಯುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮೀನುಗಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
A huge fish got caught in a fishnet that was spread out by the fishermen in the Arabian Sea. The video of the fish has become viral on social media sites. This fish was caught by the fishermen of a boat titled Sagar. This boat had left for deep sea fishing from the fishing port here.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm