ಬ್ರೇಕಿಂಗ್ ನ್ಯೂಸ್
27-10-21 10:49 am Mangalore Reporter ಕರಾವಳಿ
ಮಂಗಳೂರು, ಅ.26 : ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳನ್ನು ಸತಾಯಿಸುತ್ತಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಆಸ್ಪತ್ರೆ ಅಧೀಕ್ಷಕ ಸದಾಶಿವ ಅವರನ್ನು ಕರೆದು ಯಾವುದೇ ಕಾರಣಕ್ಕೂ ಬಡ ರೋಗಿಗಳ ಅಡ್ಮಿಶನ್ ಅಥವಾ ಇನ್ನಾವುದೇ ವಿಚಾರದಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸಿಬಂದಿ ಸತಾಯಿಸುತ್ತಿರುವ ವಿಚಾರದ ಬಗ್ಗೆ ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ರೆಡ್ ಕ್ರಾಸ್ ಮತ್ತು ವಿಎಚ್ ಪಿ ಕಾರ್ಯಕರ್ತರ ಹೆಲ್ಪ್ ಲೈನ್ ಸಿಬಂದಿ ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮಾಧ್ಯಮದ ಮಂದಿಗೆ ಮಾಹಿತಿ ನೀಡಿದ್ದರು. ಅದರಂತೆ, ಇಂದು ಮಧ್ಯಾಹ್ನ ಅಲ್ಲಿಗೆ ಭೇಟಿ ನೀಡಿದಾಗ, ಆಸ್ಪತ್ರೆ ಸಿಬಂದಿ ತಡಬಡಾಯಿಸಿದ್ದಾರೆ. ಆಸ್ಪತ್ರೆ ಅಧೀಕ್ಷಕ ಸದಾಶಿವ ಮತ್ತು ಅವರ ಕೆಳಗಿನ ಅಧಿಕಾರಿ ಜೆಸಿಂತಾ ಅವರು ಮಾಧ್ಯಮದ ಮಂದಿಗೆ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ.

ಆದರೆ, ಅಲ್ಲಿನ ಅವ್ಯವಸ್ಥೆ ಬಗ್ಗೆ ರೋಗಿಯ ಜೊತೆಗೆ ಉಳಿದುಕೊಳ್ಳುವ ಸಂಬಂಧಿಕರೇ ಆರೋಪ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ಬಂದಿದ್ದರೂ, ಅಡ್ಮಿಟ್ ಮಾಡಿಕೊಂಡಿದ್ದು ಸಂಜೆ 6 ಗಂಟೆಗೆ. ಆದರೆ, ರೋಗಿಯನ್ನು ಪರೀಕ್ಷೆ ಮಾಡಲು ವೈದ್ಯರು ಬಂದಿರಲಿಲ್ಲ. ಯಾರೋ ಒಬ್ಬರು ಬಂದು ನೋಡಿ ತೆರಳುತ್ತಾರೆ ಎಂದು ಕಾರ್ಕಳ ತಾಲೂಕಿನ ವರಂಗ ನಿವಾಸಿ ಮಹಿಳೆ ಹೇಳಿದರು. ಆಕೆಯ ಗಂಡನನ್ನು ಬ್ರೈನ್ ಟ್ಯೂಮರ್ ಎಂದು ಅಡ್ಮಿಟ್ ಮಾಡಲಾಗಿದೆ. ಆದರೆ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಐಸಿಯು ದಾಖಲು ಮಾಡಬೇಕೆಂದು ಹೇಳಿದ್ದರೂ, ಮಾಡಿಲ್ಲ ಎಂದು ಆಕೆ ಆರೋಪಿಸಿದ್ದಾರೆ.
ಈ ನಡುವೆ, ಆಡಳಿತ ವಿಭಾಗದ ಅಧಿಕಾರಿ ಜೆಸಿಂತಾ ಅವರು ವೈದ್ಯರು ಪರೀಕ್ಷೆ ನಡೆಸಿರುವುದನ್ನು ತೋರಿಸಿ, ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿ ಸದಾಶಿವ, ಕೆಲವೊಮ್ಮೆ ಚಿಂತಾಜನಕ ಸ್ಥಿತಿಯಲ್ಲಿ ರೋಗಿ ಬಂದರೆ, ಅವರನ್ನು ಐಸಿಯುಗೆ ದಾಖಲು ಮಾಡಲು ತೊಂದರೆಯಾಗುತ್ತದೆ. ಐಸಿಯು ಭರ್ತಿಯಾಗಿದ್ದ ವೇಳೆ ಬೆಡ್ ಖಾಲಿ ಮಾಡಿಸಿ, ಅಡ್ಮಿಟ್ ಮಾಡಬೇಕು. ಯಾವುದೇ ರೋಗಿ ಬಂದರೂ, ಅಡ್ಮಿಶನ್ ಮಾಡುವಲ್ಲಿ ತೊಂದರೆ ಆಗೋದಿಲ್ಲ. ರಕ್ತ, ಎಕ್ಸ್ ರೇ ಇನ್ನಿತರ ಪರೀಕ್ಷೆ ಮಾಡಿಸಿಯೇ ಅಡ್ಮಿಶನ್ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಸ್ವಲ್ಪ ಲೇಟ್ ಆಗುತ್ತದೆ ಎಂದು ಹೇಳಿದರು.

ಸಮಸ್ಯೆ ಬಗ್ಗೆ ವೈದ್ಯರು ಮತ್ತು ಡಿಎಂಓ ಅವರನ್ನು ಕರೆಸಿ ಮಾತುಕತೆ ನಡೆಸಿದ ಶಾಸಕ ವೇದವ್ಯಾಸ ಕಾಮತ್, ಅವರಿಂದ ಮಾಹಿತಿ ಕೇಳಿ ತಿಳಿದುಕೊಂಡರು. ಆನಂತರ, ರೋಗಿಯ ಸಂಬಂಧಿಕರನ್ನು ಕೂಡ ಸಮಾಧಾನ ಪಡಿಸಿದರು. ರೋಗಿಯ ಅಡ್ಮಿಶನ್ ವೇಳೆ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಈ ಬಗ್ಗೆ ನಾವು ಸದ್ಯದಲ್ಲೇ ಮೀಟಿಂಗ್ ಮಾಡಿ, ಪಿಓರ್ ಓ ನೇಮಕ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
Mla Vedavyas Kamath visits Wenlock hospital after the negligence of Hospital Staffs in admitting non covid patients. Headline Karnataka had exposed how patients were being made to wait for hours in the ambulance without even giving them emergency treatment.
11-06-26 01:53 pm
HK News Staffer
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
10-06-26 10:03 pm
HK News Staffer
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
Mangalore: ಡಿಗ್ರಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿ...
09-06-26 06:15 pm
11-06-26 11:43 am
HK News Staffer
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm