ಬ್ರೇಕಿಂಗ್ ನ್ಯೂಸ್
31-10-21 01:43 pm Mangaluru Correspondent ಕರಾವಳಿ
ಉಳ್ಳಾಲ, ಅ.31 : ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ, ಪಿಲಾರು ಪಳ್ಳ ಪ್ರದೇಶದಲ್ಲಿ ಚಿರತೆ ಸಂಚರಿಸುವುದನ್ನ ವ್ಯಕ್ತಿಯೋರ್ವರು ಪ್ರತ್ಯಕ್ಷ ಕಂಡಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಕುಂಪಲ ಬಾಲಕೃಷ್ಣ ಮಂದಿರ, ಸರಳಾಯ ಕಾಲನಿಯಲ್ಲಿ ಎರಡು ದಿವಸಗಳ ಹಿಂದೆಯೇ ಚಿರತೆ ಸಂಚರಿಸುತ್ತಿದ್ದ ಬಗ್ಗೆ ಸುದ್ದಿಯಾಗಿದ್ದು ಸ್ಥಳೀಯರಲ್ಲಿ ಚಿರತೆಯ ಗುಮ್ಮ ಮನೆ ಮಾಡಿತ್ತು. ಕುಂಪಲ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಜಾಸ್ತಿಯಾಗಿದ್ದು ನಾಯಿಗಳ ಮಾಂಸ ಅರಸಿ ಚಿರತೆ ಬಂದಿದೆಯೋ ಎಂದು ಕುಂಪಲದ ಜನರು ಹೇಳುತ್ತಿದ್ದರು.
ನಿನ್ನೆ ರಾತ್ರಿ ಕುಂಪಲ ಸಮೀಪದ ಪಿಲಾರು ಪಳ್ಳ ಎಂಬ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೋರ್ವರು ಚಿರತೆಯನ್ನ ಕಣ್ಣಾರೆ ಕಂಡಿದ್ದು ಸ್ಥಳೀಯರಲ್ಲಿ ಆತಂಕ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಪಿಲಾರು ಪಳ್ಳ ನಿವಾಸಿ ಶಿವರಾಜ್ ಪೊಣ್ಣು ಸ್ವಾಮಿ ಎಂಬವರು ನಿನ್ನೆ ರಾತ್ರಿ 9.30 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಗಳ ಮನೆಗೆ ತೆರಳುತ್ತಿದ್ದ ವೇಳೆ ಮನೆಯ ಬಳಿಯೇ ಚಿರತೆಯೊಂದು ರಸ್ತೆ ದಾಟಿ ಪೊದೆಯೊಳಗೆ ನುಗ್ಗಿದನ್ನ ಕಣ್ಣಾರೆ ಕಂಡಿದ್ದಾರೆ. ಮೊದಲಿಗೆ ಶಿವರಾಜ್ ಅವರು ಬೆಕ್ಕೆಂದು ಗ್ರಹಿಸಿದರೂ ಅದರ ಉದ್ದನೆಯ ಬಾಲ ಮತ್ತು ಬಣ್ಣವನ್ನ ಕಂಡು ಸಣ್ಣ ಗಾತ್ರದ ಚಿರತೆಯೆಂದು ಮನದಟ್ಟು ಮಾಡಿದ್ದಾರೆ. ನಿನ್ನೆ ರಾತ್ರಿ ಮಳೆ ಸುರಿದುದರಿಂದ ಚಿರತೆಯ ಹೆಜ್ಜೆ ಗುರುತು ಮಾಸಿದೆ.






ಕುಂಪಲದಲ್ಲಿ ಚಿರತೆ ಇರುವ ಗುಮ್ಮಕ್ಕೆ ಇದೀಗ ಪ್ರತ್ಯಕ್ಷ ಸಾಕ್ಷಿ ದೊರೆತ್ತಿದ್ದು ಸ್ಥಳೀಯರಲ್ಲಿ ಇನ್ನಷ್ಟು ಆತಂಕ ಹೆಚ್ಚಿದೆ. ಪಿಲಾರು ಪಳ್ಳದ ಸರಳಾಯ ಕಾಲನಿ ಹತ್ತಿರ ವಿಶಾಲ ಗುಡ್ಡ ಪ್ರದೇಶವಿದ್ದು ಕಾಡು ಇದೆ. ಇಲ್ಲಿ ಕಾಡು ಹಂದಿ, ಮುಳ್ಳು ಹಂದಿ, ನವಿಲು, ಉಡ ಮುಂತಾದ ವನ್ಯ ಜೀವಿಗಳು ಸಂಚರಿಸುತ್ತಿರುತ್ತವೆ ಎಂದು ಸ್ಥಳೀಯ ಸಮಾಜ ಸೇವಕರಾದ ಉದಯಗಟ್ಟಿ ಪಿಲಾರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯವರಿಗೆ ಕುಂಪಲದಲ್ಲಿ ಚಿರತೆ ಇರುವಿಕೆಯ ಬಗ್ಗೆ ಯಾವುದೇ ದೂರು ಬಂದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
Mangalore Kumpala Resident spots Cheetah near Pillar localities in fear. Two days ago they were rumours that Cheetah was seen by some people but again last night Pillar resident who saw the cheetah has put localities in great fear.
11-07-26 01:48 pm
HK News Staffer
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:12 pm
ರಾಮಮಂದಿರದ ಶ್ರೇಯಸ್ಸು ಪಡೆದವರೇ, ದೇಣಿಗೆ ಕಳ್ಳತನದ ಹ...
10-07-26 07:42 pm
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
11-07-26 06:32 pm
HK News Staffer
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
ಬಾಲಕನಿಗೆ ಛಡಿಯೇಟು ; ಕಾಟಿಪಳ್ಳ ಮದ್ರಸಾ ಶಿಕ್ಷಕ ಉಸ್...
09-07-26 11:09 pm
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
12-07-26 10:13 pm
HK News Staffer
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೊನೆಗೂ ಎನ್ಐ...
12-07-26 02:16 pm
ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ತ್ರಿವಳಿ ಕೊಲೆ ; ತಾ...
11-07-26 08:40 pm
ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ...
11-07-26 08:37 pm
ಮಂಗಳೂರು- ವಿಟ್ಲ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ...
11-07-26 04:28 pm