ಬ್ರೇಕಿಂಗ್ ನ್ಯೂಸ್
06-11-21 10:48 am Mangaluru Correspondent ಕರಾವಳಿ
ಮಂಗಳೂರು, ನ.6: ಕರಾವಳಿ ಜನರ ಮನೆಮಾತಾಗಿರುವ ಮಂಗಳೂರಿನ ಹೆಸರಾಂತ ಐಸ್ ಕ್ರೀಂ ಬ್ರಾಂಡ್ ಐಡಿಯಲ್ ಐಸ್ ಕ್ರೀಂ ಸಂಸ್ಥೆಯ ಸ್ಥಾಪಕ ಎಸ್. ಪ್ರಭಾಕರ ಕಾಮತ್ ನಿಧನರಾಗಿದ್ದಾರೆ. ವಾರದ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಕಾಮತ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆತ್ಮೀಯರ ವಲಯದಲ್ಲಿ ಪಬ್ಬಾ ಮಾಮ್ ಎಂದೇ ಹೆಸರಾಗಿದ್ದ ಪ್ರಭಾಕರ ಕಾಮತ್ 1970 ರಲ್ಲಿಯೇ ಮಂಗಳೂರಿನಲ್ಲಿ ವ್ಯವಹಾರ ಆರಂಭಿಸಿದ್ದರು. ಮೊದಲಿಗೆ, ಜೀನಸು ಇನ್ನಿತರ ವಹಿವಾಟು ಹೊಂದಿದ್ದ ಕಾಮತ್ ಆಬಳಿಕ ಜನರಿಗೆ ವರ್ಷ ಪೂರ್ತಿ ಬೇಡಿಕೆ ಇರುವ ವ್ಯವಹಾರ ಆರಂಭಿಸಲು ಮುಂದಾಗಿದ್ದರು. ಐಸ್ ಕ್ರೀಂ ಪಾರ್ಲರ್ ಮಾಡಬೇಕೆಂದು ನಿರ್ಧರಿಸಿದ ಕಾಮತ್, ಅದಕ್ಕಾಗಿ ತನ್ನ ಮನೆಯಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ್ದರು. ಮನೆ ಪರಿಸರದ ನಿವಾಸಿಗಳ ಟೀಕೆಯ ಮಧ್ಯೆಯೂ ತಮ್ಮದೇ ಚಿಂತನೆಯಲ್ಲಿ ಐಸ್ ಕ್ರೀಂ ತಯಾರಿಸಲು ಆರಂಭಿಸಿದ್ದರು.
ಮೂರು ತಿಂಗಳ ನಂತರ 1975ರ ಮೇ 1 ರಂದು ನಗರದ ಹಂಪನಕಟ್ಟೆಯ ಮಾರ್ಕೆಟ್ ರಸ್ತೆಯಲ್ಲಿ 14 ವಿಭಿನ್ನ ರೀತಿಯ ಫ್ಲೇವರ್ ಗಳ ಜೊತೆ ಐಸ್ ಕ್ರೀಂ ಪಾರ್ಲರ್ ಆರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಐಡಿಯಲ್ ಐಸ್ ಕ್ರೀಂ ಮಂಗಳೂರಿನ ಜನರ ಆಕರ್ಷಣೆ ಗಳಿಸಿತ್ತು. ಆನಂತರದ ದಿನಗಳಲ್ಲಿ ಐಸ್ ಕ್ರೀಂ ಪಾರ್ಲರ್ ಎಷ್ಟತ ಮಟ್ಟಿಗೆ ಬೇಡಿಕೆ ಪಡೆದಿತ್ತು ಎಂದರೆ, ಜನರು ಕ್ಯೂ ನಿಲ್ಲುತ್ತಿದ್ದರು.
ಆನಂತರ ಹಂಪನಕಟ್ಟೆಯಲ್ಲಿ ಎರಡು ಕಡೆ ಪಾರ್ಲರ್ ಆರಂಭಗೊಂಡರೆ, ಬೇಡಿಕೆ ಹೆಚ್ಚಿದಂತೆ ಲಾಲ್ ಬಾಗ್ ನಲ್ಲಿ ಪಬ್ಬಾಸ್ ಹೆಸರಲ್ಲಿ ಮತ್ತೊಂದು ಪಾರ್ಲರ್ ಆರಂಭಿಸಲಾಗಿತ್ತು. ಇಂದು ಮಂಗಳೂರಿನಲ್ಲಿ ಐದು ಕಡೆ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಇದ್ದು ಅದರಲ್ಲಿ ಒಂದು ದೇಶದಲ್ಲೇ ಅತಿದೊಡ್ಡ ಐಸ್ ಕ್ರೀಂ ಪಾರ್ಲರ್ ಎನ್ನುವ ಹೆಗ್ಗಳಿಕೆ ಪಡೆದಿದೆ. ಇದಲ್ಲದೆ, 1500 ಕ್ಕೂ ಹೆಚ್ಚು ಐಡಿಯಲ್ ಐಸ್ ಕ್ರೀಂ ಡೀಲರ್ ಗಳನ್ನು ಹೊಂದಿದೆ. ಕರಾವಳಿ ಕರ್ನಾಟಕ, ಉತ್ತರ ಕೇರಳ ಮತ್ತು ಗೋವಾದಲ್ಲಿ ರಿಟೇಲ್ ನೆಟ್ವರ್ಕ್ ಅನ್ನೂ ಹೊಂದಿದ್ದು ನೂರಕ್ಕೂ ಹೆಚ್ಚು ಫ್ಲೇವರ್ ಗಳಲ್ಲಿ ತನ್ನದೇ ಆದ ವಿಶಿಷ್ಟ ರುಚಿಯೊಂದಿಗೆ ಐಸ್ ಕ್ರೀಂ ತಯಾರಿಸುತ್ತಿದ್ದಾರೆ. ಅದರಲ್ಲೂ ಐಡಿಯಲ್ ಗಡ್ ಬಡ್ ಅಂದರೆ, ಅದಕ್ಕೆ ಬೇರೆ ಸಾಟಿಯಿಲ್ಲ.
ಇಂಥ ಮೇರು ಸಂಸ್ಥೆಯನ್ನು ಹುಟ್ಟು ಹಾಕಿರುವ ಪ್ರಭಾಕರ ಕಾಮತ್, ಇನ್ನು ನೆನಪು ಮಾತ್ರ. ಅವರು ಪತ್ನಿ , ಪುತ್ರ ಐಡಿಯಲ್ ಸಂಸ್ಥೆಯ ಮಾಲಕ ಮುಕುಂದ ಕಾಮತ್ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
Founder of Mangaluru's favourite ice cream brand S Prabhakar Kamath passed away in the wee hours of Saturday November 6. Founder of Ideal Ice Cream, Prabhakar Kamath breathed his last at around 3.30 am.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm