ಬ್ರೇಕಿಂಗ್ ನ್ಯೂಸ್
11-11-21 01:59 pm Mangaluru Correspondent ಕರಾವಳಿ
ಉಳ್ಳಾಲ, ನ.11: ದೇಶದಲ್ಲಿ ಕಾಂಗ್ರೆಸ್ ನಡೆಸಿದ ಅರ್ವತ್ತು ವರುಷ ಆಡಳಿತದ ಭ್ರಷ್ಟಾಚಾರದ ಕಾಲಘಟ್ಟದಲ್ಲಿ ವಾದ್ರಾ, ಸೋನಿಯಾ, ಖರ್ಗೆ ಕುಟುಂಬಗಳು ಮಾತ್ರ ಬಡತನ ಮುಕ್ತಗೊಂಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಹಕವಾಡಿದ್ದಾರೆ.
ಮುಡಿಪು ಸಮೀಪದ ಕಂಬಳಪದವಿನ ನಿಸರ್ಗದಲ್ಲಿ ಆರಂಭವಾದ ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲ ಇದರ ನೂತನ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅರುವತ್ತು ವರ್ಷದಿಂದ ದೇಶವನ್ನ ಬಡತನ ಮುಕ್ತ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿದ್ದೇ ಬಂತು. ವಾಸ್ತವದಲ್ಲಿ ಅಂದಿನ ಭ್ರಷ್ಟಾಚಾರದ ಕಾಲಘಟ್ಟದಲ್ಲಿ ವಾದ್ರಾ, ಸೋನಿಯಾ, ಖರ್ಗೆ ಕುಟುಂಬ ಮಾತ್ರ ಬಡತನದಿಂದ ಮುಕ್ತವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಿಲ್ಲಿಯಿಂದ ಹಳ್ಳಿಯ ವರೆಗೂ ಬಾಂಬ್ ಗಳದ್ದೇ ಸದ್ದು ಕೇಳಿಸುತ್ತಿತ್ತು. ಆದರೆ ನರೇಂದ್ರ ಮೋದಿ ಆಡಳಿತದಲ್ಲಿ ಬಾಂಬ್ ಗಳ ಸದ್ದಡಗಿದೆ. ಭಾರತವಿಂದು ಜಗತ್ತಿನ ಮೊದಲ ಸ್ಥಾನಕ್ಕೆ ಏರುತ್ತಿದ್ದು, ಪ್ರತಿಯೊಂದರಲ್ಲೂ ಪೈಪೋಟಿ ಕೊಡುವ ದೇಶವಾಗಿ ಪರಿವರ್ತಿತವಾಗುತ್ತಿದೆ. ರಾಜ್ಯ ಕಾಂಗ್ರೆಸಲ್ಲಿ ಈಗ ಮನೆಯೊಂದು ಮೂರು ಬಾಗಿಲಿನ ಪರಿಸ್ಥಿತಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಹೋಲಾಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾತನಾಡಿ ಚುನಾವಣಾ ಕಚೇರಿ ವಾಸ್ತುವಿನಿಂದ ಕೂಡಿದರೆ ರಾಜಕೀಯ ಫಲಿತಾಂಶ ಬರಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಸಾಂಘಿಕ ಶಕ್ತಿ ಬೆರೆತರಷ್ಟೆ ಪಕ್ಷವನ್ನ ಗೆಲ್ಲಿಸಬಹುದಾಗಿದೆ. ಪ್ರತಿ ಕಾರ್ಯಕರ್ತನ ಮನಸ್ಸಲ್ಲೂ ಬಿಜೆಪಿ ಜಯಿಸಬೇಕೆಂದು ಉತ್ಸಾಹ ಇರುತ್ತದೆ. ಅಂತಹ ಕಾರ್ಯಕರ್ತರ ಉತ್ಸಾಹವನ್ನ ಇಮ್ಮಡಿಗೊಳಿಸಲು ಶಕ್ತಿ ತುಂಬಬೇಕಿದೆ. ಕಾಂಗ್ರೆಸ್ ಇತಿಹಾಸದಲ್ಲಿ ಚತುಷ್ಪಥ ರಸ್ತೆ ಎಂಬ ಶಬ್ದ ಕೇಳಲಿಕ್ಕೆ ಸಿಕ್ಕಿರಲಿಲ್ಲ. ಇಂದು ಮುಡಿಪುವಿನಂತಹ ರಸ್ತೆಯೂ ಚತುಷ್ಪಥಗೊಂಡು ಸುಗಮ ಸಂಚಾರ ಸಾಧ್ಯವಾಗಿದೆ ಎಂದರೆ ಅದಕ್ಕೆ ಹಿಂದಿನ ವಾಜಪೇಯಿ ನೇತೃತ್ವದ ಸರಕಾರ ಕಾರಣ ಎಂದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿ ಅಭಿನಂದಿಸಿದರು. ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಲಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಅಲೆಮಾರಿ-ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್ ,ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಮ್, ಉಪಾಧ್ಯಕ್ಷರಾದ ಈಶ್ವರ್ ಕಟೀಲ್, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಬಿಜೆಪಿ ಕ್ಷೇತ್ರ ಪ್ರಭಾರಿಗಳಾದ ಕಸ್ತೂರಿ ಪಂಜ, ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಹಿರಿಯ ಮುಖಂಡರಾದ ಟಿ.ಜಿ.ರಾಜಾರಾಂ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಸ್ವಾಗತಿಸಿ, ಉಪಾಧ್ಯಕ್ಷರಾದ ಯಶವಂತ ಅಮೀನ್ ವಂದಿಸಿದರು.
Ullal Congress has only eliminated poverty from Vadra, Sonia and Kharges house slams Nalin Kumar Kateel.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm