ಬ್ರೇಕಿಂಗ್ ನ್ಯೂಸ್
12-11-21 02:31 pm Mangaluru Correspondent ಕರಾವಳಿ
ಮಂಗಳೂರು, ನ.12: ಸದ್ಯ ಶಾಲೆ, ಕಾಲೇಜು ಆರಂಭಗೊಂಡಿದ್ದು ವಿದ್ಯಾರ್ಥಿಗಳು ಬಸ್ ನಲ್ಲಿ ತೆರಳಲು ಆರಂಭಿಸಿದ್ದಾರೆ. ಆದರೆ, ಗಡಿಜಿಲ್ಲೆಯ ಕಾಸರಗೋಡಿನ ವಿದ್ಯಾರ್ಥಿಗಳು ನೇರ ಬಸ್ ಸಾಗಾಟ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಸರಗೋಡಿನಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಮಂಗಳೂರಿಗೆ ಬರುತ್ತಿದ್ದಾರೆ. ಕೋವಿಡ್ ಕಾರಣದಿಂದಾಗಿ ಇನ್ನೂ ನೇರ ಬಸ್ ಸಾಗಾಟಕ್ಕೆ ದ.ಕ. ಜಿಲ್ಲಾಧಿಕಾರಿ ಅನುಮತಿ ನೀಡದೇ ಇರುವುದು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕಾರಣವಾಗಿದೆ.
ಕೊರೊನಾ ನಿಮಯ ಇದ್ದರೂ ಕಾಸರಗೋಡಿನ ಮಂದಿ ದಕ್ಷಿಣ ಕನ್ನಡ ಪ್ರವೇಶಕ್ಕೆ ಹಿಂದಿನಂತೆ ಸಮಸ್ಯೆ ಇಲ್ಲ. ಖಾಸಗಿ ವಾಹನಗಳಲ್ಲಿ ಬರುವವರನ್ನು ತಲಪಾಡಿ, ಇನ್ನಿತರ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ತಡೆದು ಪರಿಶೀಲಿಸುವುದನ್ನು ನಿಲ್ಲಿಸಲಾಗಿದೆ. ಆದರೆ, ಕಾಸರಗೋಡು – ಮಂಗಳೂರು ನೇರ ಬಸ್ ಸಂಚಾರ ಇನ್ನೂ ಆರಂಭಗೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಈ ಬಗ್ಗೆ ಮೊಂಡು ವಾದ ಮಾಡುತ್ತಿದ್ದಾರೆ ಅನ್ನುವುದು ಕಾಸರಗೋಡು ಭಾಗದ ಜನರ ಅಳಲು.
ಕಾಸರಗೋಡಿನಲ್ಲಿ ಕೊರೊನಾ ಪಾಸಿಟಿವ್ ವರದಿ ಶೇಕಡಾ 3ಕ್ಕಿಂತ ಕಡಿಮೆಯಾದಲ್ಲಿ ಮಾತ್ರ ನೇರ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಷರತ್ತು ವಿಧಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲೂ ಹಿಂದಿಗಿಂತ ಕೊರೊನಾ ಕಡಿಮೆಯಾಗಿದ್ದು, ಪಾಸಿಟಿವ್ ರೇಟ್ 5ರಲ್ಲಿದೆ. ಕೇರಳ ರಾಜ್ಯದಲ್ಲಿ 11ರ ಆಸುಪಾಸಿನಲ್ಲಿದೆ. ಹೀಗಾಗಿ ಕಾಸರಗೋಡಿನಿಂದ ಬಸ್ ಸಂಚಾರಕ್ಕೆ ಕಾಸರಗೋಡು ಜಿಲ್ಲಾಡಳಿತ ಪೂರ್ಣ ಅನುಮತಿಯನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಅನುಮತಿಸಿದರೆ ನಾವು ಬಸ್ ಸಂಚಾರಕ್ಕೆ ರೆಡಿ ಇದ್ದೇವೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ತಿಳಿಸಿದ್ದಾರೆ.
ಸದ್ಯಕ್ಕೆ ಕಾಸರಗೋಡು ಜಿಲ್ಲೆಯಿಂದ ಆಗಮಿಸುವ ಜನರು ಗಡಿಭಾಗದ ವರೆಗೆ ಅಲ್ಲಿನ ಬಸ್ ಗಳಲ್ಲಿ ಬಂದು ಅಲ್ಲಿಂದ ಇಳಿದು ಚೆಕ್ ಪೋಸ್ಟ್ ದಾಟಿಕೊಂಡು ಕರ್ನಾಟಕದ ಬಸ್ ಗಳನ್ನು ಹತ್ತಿ ಬರುತ್ತಿದ್ದಾರೆ. ತಲಪಾಡಿ, ಪಂಜಿಕಲ್ಲು, ಅಡ್ಕಸ್ಥಳ, ಆನೆಕಲ್ಲು ಹೀಗೆ ಗಡಿಭಾಗದ ಎಲ್ಲ ಕಡೆಗಳಲ್ಲಿಯೂ ಇದೇ ಸ್ಥಿತಿ. ನೇರ ಬಸ್ ಸಂಚಾರಕ್ಕೆ ಅವಕಾಶ ಇದ್ದರೂ, ಅನುಮತಿ ನೀಡದೆ ಜನರನ್ನು ಸರಕಾರಿ ಆಡಳಿತ ಸತಾಯಿಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಜನ ಹೇಗೂ ಬರುತ್ತಾರೆ, ನೇರ ಬಸ್ ನಲ್ಲಿ ಬಂದ ಮಾತ್ರಕ್ಕೆ ಕೊರೊನಾ ಹರಡುತ್ತದೆ ಅನ್ನುವುದು ಮೂರ್ಖತನ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಎರಡೆರಡು ಬಸ್ ಗಳಲ್ಲಿ ಟಿಕೆಟ್ ಪಡೆದು, ದುಪ್ಪಟ್ಟು ಖರ್ಚು ಮಾಡಿಕೊಂಡು ಬರುವ ಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಕೇಳೋಣ ಅಂದ್ರೆ, ಅವರಿಗೆ ಇನ್ನೂ ಪೂರ್ಣ ಮಟ್ಟದಲ್ಲಿ ಉಸ್ತುವಾರಿ ಕೊಟ್ಟಿಲ್ಲ. ತಾತ್ಕಾಲಿಕ ನೆಲೆಯಲ್ಲಿ ಉಸ್ತುವಾರಿ ಹಂಚಿಕೆ ಮಾಡಲಾಗಿದೆ. ಹಾಗಾಗಿ ಜಿಲ್ಲಾಡಳಿತಕ್ಕೆ ಸಲಹೆ ನೀಡಬಹುದೇ ಹೊರತು ಈ ಬಗ್ಗೆ ಸೂಚನೆ ನೀಡಲು ಸಾಧ್ಯವಾಗಲ್ಲ ಎಂದು ಸಚಿವ ಅಂಗಾರ ಅಸಹಾಯಕತೆ ತೋರುತ್ತಾರೆ.
Dakshina Kannada district deputy commissioner has said that buses will begin to move between the city and Kasargod only after the positivity rate in Kasargod district falls to below three percent. Therefore there are no chances of the services resuming routine trips for now.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm