ಬ್ರೇಕಿಂಗ್ ನ್ಯೂಸ್
12-11-21 08:47 pm Mangaluru Corespondent ಕರಾವಳಿ
ಬೆಳ್ತಂಗಡಿ, ನ.12: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ನುಗ್ಗಿ 12 ಲಕ್ಷ ರೂ. ಮೌಲ್ಯದ ಸುಮಾರು 320 ಗ್ರಾಮ್ ಚಿನ್ನಾಭರಣವನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅ.31 ರಂದು ಇಂದಬೆಟ್ಟು ಗ್ರಾಮದ ಮಹಮ್ಮದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಳವು ಕೃತ್ಯ ನಡೆಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕೃತ್ಯ ಎಸಗಿದ್ದರು. ಕಪಾಟಿನಲ್ಲಿ ಇರಿಸಿದ್ದ 13 ಪವನ್ ತೂಕದ ಚಿನ್ನದ ನೆಕ್ಲೆಸ್, ಒಂದು ಪವನ್ ತೂಕದ ಎರಡು ಚಿನ್ನದ ಚೈನ್, ತಲಾ ಒಂದು ಪವನ್ ತೂಕದ ನಾಲ್ಕು ಚಿನ್ನದ ಕಾಯಿನ್, ತಲಾ ನಾಲ್ಕು ಪವನ್ ತೂಕದ ನಾಲ್ಕು ಚಿನ್ನದ ಬಿಸ್ಕೆಟ್, ಎರಡು ಪವನ್ ತೂಕದ ಚಿನ್ನದ ಗಟ್ಟಿ ಸೇರಿದಂತೆ ವಿವಿಧ ಮಾದರಿಯ ಒಟ್ಟು 12.5 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳವಾಗಿದ್ದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಲ್ಲದೆ, 5200 ರೂ. ನಗದು ಕಳವಾದ ಬಗ್ಗೆಯೂ ಮಾಹಿತಿ ನೀಡಲಾಗಿತ್ತು.
ಪ್ರಕರಣದ ಪತ್ತೆಗಾಗಿ ಬೆಳ್ತಂಗಡಿ ಇನ್ ಸ್ಪೆಕ್ಟರ್ ಶಿವಕುಮಾರ್ ಬಿ., ಪಿಎಸ್ಐ ನಂದ ಕುಮಾರ್, ಪಿಎಸ್ಐ ಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಮೂವರನ್ನು ಬಂಧಿಸಲಾಗಿದೆ. ನಾವೂರು ಗ್ರಾಮದ ಮಹಮ್ಮದ್ ಸ್ವಾಲಿ (26), ಲಾಯ್ಲ ಗ್ರಾಮದ ಯಾಹ್ಯಾ(32), ನಾವೂರು ಗ್ರಾಮದ ಬಿ.ಎಚ್. ನೌಫಲ್ (27) ಬಂಧಿತರು. ಕೃತ್ಯಕ್ಕೆ ಉಪಯೋಗಿಸಿದ ಆಲ್ಟೋ ಕಾರು, ಪಲ್ಸರ್ ಬೈಕ್, ನಾಲ್ಕು ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಕಳವುಗೈದಿದ್ದ 12.5 ಲಕ್ಷ ಮೌಲ್ಯದ 320 ಗ್ರಾಮ್ ಚಿನ್ನಾಭರಣ, ನಗದು 1230 ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದು ಒಂದೇ ವಾರದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗಿದೆ. ಮನೆಯಲ್ಲಿ ಚಿನ್ನ ಇಟ್ಟಿರುವ ವಿಚಾರ ತಿಳಿದಿದ್ದವರೇ ಸಂಚು ನಡೆಸಿ ಕಳವು ಕೃತ್ಯ ಎಸಗಿದ್ದರು.
320 gram of God Biscuit stolen from home three arrested by a week by Belthangady police
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm