ಬ್ರೇಕಿಂಗ್ ನ್ಯೂಸ್
13-11-21 10:05 pm Mangaluru Correspondent ಕರಾವಳಿ
ಮಂಗಳೂರು, ನ.13: ನಗರದ ಕೋಡಿಕಲ್ 9ನೇ ಕ್ರಾಸ್ ನಲ್ಲಿ ಸ್ಥಳೀಯರು ನಂಬಿಕೊಂಡು ಬಂದಿರುವ ನಾಗನ ಬನದಲ್ಲಿ ದುಷ್ಕರ್ಮಿಗಳು ಕಿಡಿಗೇಡಿ ಕೃತ್ಯ ನಡೆಸಿದ್ದಾರೆ. ನಾಗನ ಗುಡಿಯ ಒಳಗಿದ್ದ ನಾಗನ ಕಲ್ಲನ್ನು ಎತ್ತಿ ಹೊರಕ್ಕೆ ಎಸೆಯಲಾಗಿದ್ದು, ಇಂದು ಬೆಳಗ್ಗೆ ಭಕ್ತರ ಗಮನಕ್ಕೆ ಬಂದಿದೆ. ಈ ಬಗ್ಗೆ ನಾಗ ಸನ್ನಿಧಿಯ ಭಕ್ತರ ಸಮಿತಿಯವರು ಉರ್ವಾ ಠಾಣೆಗೆ ದೂರು ನೀಡಿದ್ದಾರೆ.
ಕಿಡಿಗೇಡಿ ಕೃತ್ಯ ತಿಳಿಯುತ್ತಲೇ ಬಜರಂಗದಳ ಪ್ರಮುಖರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ರಾತ್ರಿ ಯಾರೋ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಗಿರುವಂತಿದೆ. ಅಲ್ಲಿ ಯಾವುದೇ ಕಾಣಿಕೆ ಡಬ್ಬಿ ಇರಲಿಲ್ಲ. ಹೀಗಾಗಿ ಕಳವು ಕೃತ್ಯಕ್ಕಾಗಿ ಬಂದವರು ಈ ಕೃತ್ಯ ನಡೆಸಿದ್ದು ಆಗಿರಲಿಕ್ಕಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಜರಂಗದಳ ಪ್ರಮುಖರು, ಸ್ಥಳೀಯರ ಜೊತೆ ಸೇರಿ ನಾಗನ ಸನ್ನಿಧಿಯ ಬಳಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಭೇಟಿ ನೀಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸುವಂತೆ ಆಗ್ರಹಿಸಿದರು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಇದನ್ನು ತಡೆಯಬೇಕಿದೆ ಎಂದು ಶಾಸಕ ಭರತ್ ಶೆಟ್ಟಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಭೇಟಿ ನೀಡಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.


ಈ ನಡುವೆ, ಪ್ರಕರಣದಲ್ಲಿ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಕೋಡಿಕಲ್ ಬಂದ್ ಮಾಡುವುದಾಗಿ ಬಂಜರಂಗದಳ ಮಂಗಳೂರು ಘಟಕದ ಸಂಚಾಲಕ ಪುನೀತ್ ಅತ್ತಾವರ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಕುಳೂರಿನಲ್ಲಿಯೂ ಇದೇ ರೀತಿಯ ಕೃತ್ಯ ನಡೆದಿತ್ತು. ಕೋಟ್ಯಾನ್ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿದ್ದ ನಾಗನ ಸನ್ನಿಧಿಯಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದರು. ಅಲ್ಲಿನ ನಾಗನ ಕಲ್ಲಿಗೆ ಹಾನಿಗೈದು ಹಿಂದುಗಳ ಭಾವನೆಗೆ ಘಾಸಿ ತರುವ ಯತ್ನ ನಡೆದಿತ್ತು. ಆ ಪ್ರಕರಣದಲ್ಲಿಯೂ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಆರೋಪಿಗಳ ಬಂಧನ ಆಗಿಲ್ಲ.
Vishwa Hindu Parishad (VHP) and Bajrang Dal (BD) have warned of observing Kodikal city bandh on November 15, if the accused who desecrated the idol of deity at Nagabhramastana in Kodikal are not arrested by Sunday evening. t is learnt that some unidentified miscreants had thrown the idol of deity on the ground at Nagabhramastana at Kodikal here. The incident came to light when a local went to perform prayer. The locals who gathered at spot held a protest on Saturday November 13.
05-03-26 11:42 pm
HK News Desk
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm