ಬ್ರೇಕಿಂಗ್ ನ್ಯೂಸ್
17-11-21 12:54 pm Mangaluru Correspondent ಕರಾವಳಿ
ಉಡುಪಿ, ನ.17: ಪಡುಬಿದ್ರಿ ಪೇಟೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಾಲಕೃಷ್ಣ ಭಟ್ (74) ಎಂಬವರು ಮೃತಪಟ್ಟಿದ್ದಾರೆ. ಏಕಮುಖ ಸಂಚಾರದ ರಸ್ತೆಯಲ್ಲಿ ಸ್ಕೂಟರಿನಲ್ಲಿ ಸಾಗುತ್ತಿದ್ದಾಗ ಹಿಂದಿನಿಂದ ಧಾವಂತದಿಂದ ಬಂದ ಕಾರು ಡಿಕ್ಕಿಯಾಗಿದ್ದು, ಸ್ಕೂಟರ್ ಮತ್ತು ಅದರಲ್ಲಿದ್ದ ಸವಾರ 25 ಅಡಿ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ.
ಪಡುಬಿದ್ರಿಯ ಕೆಳಗಿನ ಪೇಟೆಯಲ್ಲಿ ಘಟನೆ ನಡೆದಿದೆ. ಹೊರ ರಸ್ತೆಯಿಂದ ಸ್ಕೂಟರಿನಲ್ಲಿ ಬಂದಿದ್ದ ಬಾಲಕೃಷ್ಣ ಭಟ್, ಹೈವೇ ರಸ್ತೆಗೆ ಬಂದು ಡಿವೈಡರ್ ದಾಟಿ ಮತ್ತೊಂದು ರಸ್ತೆ ಸೇರುವಲ್ಲಿ ಹಿಂದಿನಿಂದ ಅತಿ ವೇಗದಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ವೇಗದಿಂದ ಬರುತ್ತಿದ್ದ ಕಾರನ್ನು ನೋಡದೆ ರಸ್ತೆ ದಾಟಲು ಹೋಗಿದ್ದು ಅಪಘಾತಕ್ಕೆ ಕಾರಣವಾಗಿತ್ತು. ಹೆಜಮಾಡಿಯತ್ತ ಹೋಗುತ್ತಿದ್ದ ಕಾರು ನೇರವಾಗಿ ಸ್ಕೂಟರಿಗೆ ಡಿಕ್ಕಿಯಾಗಿದ್ದರಿಂದ ಅದರ ರಭಸಕ್ಕೆ ಸವಾರ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ರಸ್ತೆಗೆ ಬಿದ್ದ ಕಾರಣ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಬಾಲಕೃಷ್ಣ ಭಟ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಗಿದೆ.
ಆದರೆ ಅಷ್ಟರಲ್ಲೇ ಬಾಲಕೃಷ್ಣ ಭಟ್ ಸಾವು ಕಂಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡು, ಪಡುಬಿದ್ರಿಯಲ್ಲಿ ಹೊಟಲೇ ಮ್ಯಾನೇಜರ್ ಆಗಿದ್ದ ಬಾಲಕೃಷ್ಣ ಭಟ್, ಆನಂತರ ಪಡುಬಿದ್ರಿಯಲ್ಲೇ ನೆಲೆಸಿದ್ದರು. ಪಾದೆಬೆಟ್ಟು ಬ್ರಾಹ್ಮಣರ ಸಂಘದಲ್ಲಿ ಸಕ್ರಿಯವಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.
Balakrishna Bhat (74), a resident of Padebettu, who was riding scooter towards Mangaluru on the one-way lane was killed after a speeding car following him rammed into his vehicle in the rear. The accident happened at the highway bend at Kelagina Pete, Padubidri on Tuesday November16.
11-06-26 01:53 pm
HK News Staffer
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
ವಿಧಾನ ಪರಿಷತ್ ಚುನಾವಣೆ ; ಕಾಂಗ್ರೆಸ್ ಐದನೇ ಅಭ್ಯರ್ಥ...
09-06-26 01:27 pm
Krishna Byre Gowda: ಡಿಕೆಶಿ ಸಂಪುಟದಲ್ಲಿ ಮತ್ತೊಂದ...
08-06-26 12:37 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 02:47 pm
HK News Staffer
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ...
10-06-26 04:19 pm
Yedapadavu Highway News: ಮಂಗಳೂರು- ಮೂಡುಬಿದ್ರೆ...
09-06-26 08:58 pm
11-06-26 11:43 am
HK News Staffer
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm
ಬೆಳ್ತಂಗಡಿ ಪೊಲೀಸರ ಭರ್ಜರಿ ಕಾರ್ಯಚರಣೆ ; ಮನೆಗಳಿಗೆ...
09-06-26 05:03 pm