ಬ್ರೇಕಿಂಗ್ ನ್ಯೂಸ್
24-11-21 10:14 am HK news Desk ಕರಾವಳಿ
ಮಂಗಳೂರು, ನ.24: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿರುವ ಕೆ.ಎಸ್.ಲಿಂಗೇಗೌಡ ಎಂಬ ಅಧಿಕಾರಿಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ 30 ವರ್ಷಗಳಿಂದ ಝಂಡಾ ಹೂಡಿದ್ದ ಭ್ರಷ್ಟ ಅಧಿಕಾರಿ ಲಿಂಗೇಗೌಡ, ಮಂಗಳೂರು ಸೇರಿ ವಿವಿಧ ಕಡೆ ಅಪಾರ ಆಸ್ತಿ ಗಳಿಸಿದ್ದಾನೆಂಬ ಆರೋಪ ಕೇಳಿಬಂದಿತ್ತು. ಜೂನಿಯರ್ ಇಂಜಿನಿಯರ್ ಆಗಿ ಮಂಗಳೂರು ಪಾಲಿಕೆಯಲ್ಲಿ ಕರ್ತವ್ಯಕ್ಕೆ ಸೇರಿದ್ದ ಲಿಂಗೇಗೌಡ, ಬಳಿಕ ಎಇಇ ಆಗಿ ಶಿವಮೊಗ್ಗಕ್ಕೆ ವರ್ಗಾವಣೆ ಆಗಿದ್ದ. ಆದರೆ ಎರಡು ವರ್ಷದಲ್ಲಿ ಮತ್ತೆ ಮಂಗಳೂರು ಮಹಾನಗರ ಪಾಲಿಕೆಗೇ ಬಂದು ಸೇರಿದ್ದ ಲಿಂಗೇಗೌಡ, ಆನಂತರ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಭಡ್ತಿ ಪಡೆದಿದ್ದ.


ಕಳೆದ ಎರಡು ವರ್ಷಗಳ ಹಿಂದೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ದೊಡ್ಡ ಹುದ್ದೆ ಪಡೆದಿದ್ದ ಲಿಂಗೇಗೌಡ ನೇತೃತ್ವದಲ್ಲಿ ಸಾವಿರಾರು ಕೋಟಿ ರೂಪಾಯಿ ಯೋಜನೆಯ ಸ್ಮಾರ್ಟ್ ಸಿಟಿಯಲ್ಲಿ ಎಷ್ಟು ಅವ್ಯವಹಾರ ಆಗಿದೆಯೋ ಲೆಕ್ಕ ಇಲ್ಲ.
ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿ ಸ್ವಂತ ಜಾಗ ಖರೀದಿಸಿ, ಹತ್ತು ವರ್ಷಗಳ ಹಿಂದೆಯೇ ಬಂಗಲೆ ಮಾದರಿ ಮನೆ ಕಟ್ಟಿಸಿದ್ದ ಲಿಂಗೇಗೌಡ ಮಂಗಳೂರು ಸೇರಿ ವಿವಿಧ ಕಡೆಗಳಲ್ಲಿ ಆಸ್ತಿ ಹೊಂದಿದ್ದಾನೆ. ಮೂಲತಃ ಹಾವೇರಿ ಜಿಲ್ಲೆಯ ಮೂಲದ ವ್ಯಕ್ತಿಯಾಗಿದ್ದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಝಂಡಾ ಹೂಡಿ ಅಪಾರ ಆಸ್ತಿ ಮಾಡಿಕೊಂಡ ಕೆಲವು ಭ್ರಷ್ಟ ಅಧಿಕಾರಿಗಳಲ್ಲಿ ಈತನೂ ಒಬ್ಬ.
ಕೆ.ಎಸ್.ಲಿಂಗೇಗೌಡ ವಿರುದ್ಧ 15 ವರ್ಷಗಳ ಹಿಂದೆಯೇ ಮಂಗಳೂರು ಲೋಕಾಯುಕ್ತದಲ್ಲಿ ಕೇಸು ದಾಖಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ಈತನ ಮನೆಗೆ ದಾಳಿ ನಡೆಸಿ, ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು.
ಚಾಮರಾಜನಗರ, ಮೈಸೂರು, ಹಾಸನ ವಿಭಾಗದ ಎಸಿಬಿ ಅಧಿಕಾರಿಗಳು, ಇಬ್ಬರು ಡಿವೈಎಸ್ಪಿ ಸೇರಿ 25 ಕ್ಕೂ ಹೆಚ್ಚು ಮಂದಿ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಮಹಾನಗರ ಪಾಲಿಕೆಯ ಕಚೇರಿ ಮತ್ತು ಉರ್ವಾ ಬಳಿಯ ಮನೆಯಲ್ಲಿ ಕಡತ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Acb officers raid on Mangalore Smart City engineer Lingegowda residence, seize crores wealth. ACB officers have raided several places of Karnataka raiding Govt servant houses where crores of assets have been seized.
07-09-26 01:33 pm
HK News Staffer
ಜೆನ್ ಜೀಗಳಿಗೆ ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ಭಾವ...
05-09-26 04:53 pm
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
07-09-26 09:57 pm
HK News Staffer
ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್...
07-09-26 01:22 pm
Ujre Wild Elephant: ಉಜಿರೆ ಎಸ್ ಡಿಎಂ ಕಾಲೇಜು ಬಳಿ...
06-09-26 08:09 pm
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
07-09-26 08:56 pm
HK News Staffer
ದೆಹಲಿಯಲ್ಲಿ ಕಟ್ಟಡ ಕುಸಿತಕ್ಕೆ ಏಳು ಬಲಿ ; ನೆಲಮಹಡಿಯ...
07-09-26 07:44 pm
ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದ...
07-09-26 04:09 pm
ಹೂ ಕಟಾವಿಗೆ ಹೊರಟಿದ್ದ ಕೂಲಿ ಕಾರ್ಮಿಕರ ದುರಂತ ಅಂತ್ಯ...
07-09-26 03:42 pm
ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕುಟುಂಬ...
07-09-26 02:06 pm