ಬ್ರೇಕಿಂಗ್ ನ್ಯೂಸ್
29-11-21 10:21 pm HK Desk news ಕರಾವಳಿ
ಮಂಗಳೂರು, ನ.29: ಕ್ಯಾಂಪ್ಕೋ ಸಂಸ್ಥೆ ಹಿಂದಿನಿಂದಲೂ ಸಂಘ ಪರಿವಾರದ ತೆಕ್ಕೆಯಲ್ಲಿರುವ ಸಹಕಾರಿ ಸಂಸ್ಥೆ. ಅದರಲ್ಲಿ ಕೆಲಸ ಗಿಟ್ಟಿಸುವುದಂದ್ರೆ ಸರಕಾರಿ ಕೆಲಸ ಗಿಟ್ಟಿಸಿದಂತೆ ಅನ್ನುವ ಭಾವನೆ ಕೆಲವರಲ್ಲಿದೆ. ಯಾಕಂದ್ರೆ, ಅಲ್ಲಿನ ಸಂಬಳ, ಅಲ್ಲಿ ಸಿಗುತ್ತಿರುವ ಇನ್ನಿತರ ಸೌಲಭ್ಯಗಳು. ಹೀಗಾಗಿ ಅಲ್ಲಿ ಹುದ್ದೆ ಪಡೆಯಲು ಈಗ ಭಾರೀ ಪೈಪೋಟಿ ಉಂಟಾಗಿದೆ. ಡಿಸಿಸಿ ಬ್ಯಾಂಕಿನಲ್ಲಿ ಹುದ್ದೆ ಗಿಟ್ಟಿಸಲು ಹಣ ನೀಡಲೇಬೇಕೆಂಬ ಅಲಿಖಿತ ನಿಯಮ ಇದ್ದಂತೆ ಕ್ಯಾಂಪ್ಕೋ ಸಂಸ್ಥೆಯಲ್ಲೂ ಪರೀಕ್ಷೆ, ಇಂಟರ್ವ್ಯೂ ಎಲ್ಲ ಇದ್ದರೂ, ಕೈಬಿಸಿ ಮಾಡಿದರೆ ಮೇಲಿನವರು ಕೃಪೆ ತೋರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
ಈ ಬಾರಿಯಂತೂ, ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತನಿಗೆ ಕ್ಯಾಂಪ್ಕೋ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಸಂಘ ಪರಿವಾರದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ನಲ್ಕ ವಾರ್ಡಿನ ಮುರಳೀಕೃಷ್ಣ ಎಂಬ ಸಿಪಿಎಂ ಕಾರ್ಯಕರ್ತನಿಗೆ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಸೆಲೆಕ್ಷನ್ ಆಗಿದೆ. ಈ ವಿಚಾರ ಅಲ್ಲಿನ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರಲ್ಲಿ ಭಾರೀ ಅಸಮಾಧಾನ ಮೂಡಿಸಿದೆ. ಬಿಜೆಪಿಯ ಹಿರಿಯ ಕಾರ್ಯಕರ್ತರ ಮಕ್ಕಳು ಪರೀಕ್ಷೆ ಬರೆದರೂ, ಕೆಲಸ ಸಿಗಲ್ಲ. ಪ್ರಮುಖರಲ್ಲಿ ಹೇಳಿಸಿದರೂ, ಮಾಡಿಸಿಕೊಡುವುದಿಲ್ಲ. ಅಂಥದರಲ್ಲಿ ವಿರೋಧಿ ಪಕ್ಷ ಸಿಪಿಎಂ ಪಕ್ಷದ ಸಕ್ರಿಯ ಕಾರ್ಯಕರ್ತನಿಗೆ ಸಂಘ ಪರಿವಾರದ ಅಧೀನದ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ್ದು ಹೇಗೆ ಅನ್ನುವ ಬಗ್ಗೆ ವಾಟ್ಸಪ್ ಚರ್ಚೆಯಲ್ಲಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಇದೇ ವಿಚಾರದ ಬಗ್ಗೆ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ವಾಟ್ಸಪ್ ಗ್ರೂಪಿನಲ್ಲಿ ಭಾರೀ ಚರ್ಚೆ ಏರ್ಪಟ್ಟಿದೆ. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಎಂಬವರು ಸ್ವಜನ ಪಕ್ಷಪಾತ ಎಸಗಿದ್ದಾರೆ, ಗಿಂಬಳ ಗಿಟ್ಟಿಸಿಕೊಂಡು ಈ ಕೆಲಸ ಮಾಡಿಸಿದ್ದಾರೆ ಎನ್ನುವ ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ಕೆಲವರು ಕುಂಬಳೆ, ಪೆರ್ಲ ಭಾಗದ ಆರೆಸ್ಸೆಸ್ ಮುಖಂಡರ ಹೆಸರನ್ನೂ ಹೇಳುತ್ತಿದ್ದಾರೆ. ನಾವು ಬೆವರು ಹರಿಸಿ ಕೆಲಸ ಮಾಡುವುದಕ್ಕಾಗಿ ಮಾತ್ರ. ಮೇಲೆ ಕುಳಿತವರು ಸೂಟ್ ಕೇಸ್ ಗಟ್ಟಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಈ ಬಗ್ಗೆ ಸಂಘ ಪರಿವಾರದ ಒಳಗಿನ ವಾಟ್ಸಪ್ ಗ್ರೂಪ್ ಗಳಲ್ಲಿ ಚರ್ಚೆ ನಡೆಸಿದ್ದಲ್ಲದೆ, ನಲ್ಕ ಬೂತ್ ಬಿಜೆಪಿ ಕಮಿಟಿಯ ಅಧ್ಯಕ್ಷ ಅಶೋಕ್ ಕುಮಾರ್ ಎಂಬವರು ನೇರವಾಗಿ ಪಕ್ಷದ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅವರಿಗೆ ಪತ್ರ ಬರೆದಿದ್ದಾರೆ. ವಿರೋಧಿ ಪಕ್ಷದ ಕಾರ್ಯಕರ್ತನಿಗೆ ಕ್ಯಾಂಪ್ಕೋದಲ್ಲಿ ಕೆಲಸ ಕೊಡಿಸಿದರೆ, ಇಲ್ಲಿನ ಸಂಘ ಪರಿವಾರದ ಕಾರ್ಯಕರ್ತರು ಇನ್ನು ಮುಂದೆ ಕೆಲಸವನ್ನೇ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಇದರಿಂದ ಮುಂದೆ ಸಂಘಟನೆಗೆ ತೊಡಕಾಗಬಹುದು ಎಂದು ಪತ್ರ ಬರೆದಿದ್ದಾರೆ. ವಾಟ್ಸಪ್ ಗ್ರೂಪ್ ನಲ್ಲಿ ಚರ್ಚೆ ನಡೆಸಿರುವುದು, ಶಂನಾ ಖಂಡಿಗೆ ಬಗ್ಗೆ ಆರೋಪ ಮಾಡಿರುವುದರ ಕಾಪಿ ವೈರಲ್ ಆಗಿದೆ.
ಇದಲ್ಲದೆ, ಕಳೆದ ಬಾರಿ ರವೀಶ ತಂತ್ರಿ ಚುನಾವಣೆಗೆ ಸ್ಪರ್ಧಿಸಿದ್ದಾಗ ತನ್ನ ಅಣ್ಣನ ಮಗ ದೆಹಲಿಯಿಂದ ಬಂದು ಓಟು ಹಾಕಿದ್ದಾನೆಂದು 13 ಸಾವಿರ ರೂ. ಕೇಳಿದ್ದರು. ಅದರಲ್ಲಿ ಆರು ಸಾವಿರ ರೂಪಾಯಿಯನ್ನು ಬಲವಂತದಿಂದ ಸಂಗ್ರಹ ಮಾಡಿದ್ದಾರೆ. ಇವರೆಲ್ಲ ಸೇರಿ ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಆರೆಸ್ಸೆಸ್ ಪಟ್ಟಿಗಳು ಎಂದು ಘೋಷಣೆ ಕೂಗಿದ್ದವರಿಗೆ ಈಗ ಸಪೋರ್ಟ್ ಮಾಡಿದ್ದಾರೆಂದು ಹೇಳಿರುವ ಆಡಿಯೋ ಕೂಡ ವೈರಲ್ ಆಗಿದೆ. ಇದಲ್ಲದೆ, ಕಳೆದ ಬಾರಿ ಕುಂಬಳೆಯ ಕಾಂಗ್ರೆಸ್ ಕಾರ್ಯಕರ್ತ ನಾರಾಯಣನ್ ಎಂಬವರಿಗೂ ಕ್ಯಾಂಪ್ಕೋ ಸಂಸ್ಥೆಯಲ್ಲಿ ಇವರು ಉದ್ಯೋಗ ಕೊಡಿಸಿದ್ದರು. ಈಗ ಸಿಪಿಎಂ ಕಾರ್ಯಕರ್ತನಿಗೆ ಕೆಲಸ ಮಾಡಿಸಿದ್ದಾರೆ ಎಂದು ಎಣ್ಮಕಜೆ ಪಂಚಾಯತಿನ ಬಿಜೆಪಿ ಕಾರ್ಯಕರ್ತರು ತರಾಟೆಗೆತ್ತಿಕೊಂಡಿದ್ದಾರೆ.
ಈ ಬಾರಿ ಕ್ಯಾಂಪ್ಕೋ ಸಂಸ್ಥೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ 49 ಜನರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಅಭ್ಯರ್ಥಿಗಳು ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಆದರೆ ಎಣ್ಮಕಜೆ ಪಂಚಾಯತಿನ ಕಮ್ಯುನಿಸ್ಟ್ ಕಾರ್ಯಕರ್ತನ ಹೆಸರು ಈ ಪಟ್ಟಿಯಲ್ಲಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
Communist organization member appointed for work in Campco, BJP oppose the decession taken by CAMPCO.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm