ಬ್ರೇಕಿಂಗ್ ನ್ಯೂಸ್
08-12-21 10:31 pm HK Desk news ಕರಾವಳಿ
Photo credits : Headline Karnataka
ಬಂಟ್ವಾಳ, ಡಿ.8 : ಕಾರಿಂಜೇಶ್ವರ ದೇವಸ್ಥಾನ ಪರಿಸರದಲ್ಲಿ ಅಕ್ರಮ ಕಲ್ಲು ಕೋರೆ ನಡೆಸುತ್ತಿರುವುದನ್ನು ವಿರೋಧಿಸಿ ಹಿಂದು ಜಾಗರಣ ವೇದಿಕೆಯಿಂದ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಒಂದು ತಿಂಗಳ ಒಳಗೆ ಗಣಿಗಾರಿಕೆಯನ್ನು ಸಂಪೂರ್ಣ ನಿಲ್ಲಿಸದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಜಿಲ್ಲಾಧಿಕಾರಿಯನ್ನು ಏಕವಚನದಲ್ಲಿ ನಿಂದಿಸಿದ ವಿಚಾರದ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಗಣಿಗಾರಿಕೆ ನಿಲ್ಲಿಸಲು ಡಿ.21ರ ಗಡುವು ನೀಡಲಾಗಿದ್ದು, ಅದರ ಒಳಗೆ ಕೋರೆಯನ್ನು ನಿಲ್ಲಿಸದೇ ಇದ್ದರೆ ಜಿಲ್ಲಾಧಿಕಾರಿಯ ಕೊರಳು ಪಟ್ಟು ಹಿಡಿಯುವುದಾಗಿ ಹಿಂಜಾವೇ ಮುಖಂಡ ಜಗದೀಶ ಕಾರಂತ ಗುಟುರು ಹಾಕಿದ್ದರು. ಆಬಳಿಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಈ ಬಗ್ಗೆ ಪ್ರಕರಣ ದಾಖಲಿಸಿದರೂ, ಜಾಗರಣ ವೇದಿಕೆ ಮುಖಂಡರು ಜಗದೀಶ ಕಾರಂತರ ಹೇಳಿಕೆಯನ್ನು ಸಮರ್ಥಿಸಿದ್ದರು. ಅಲ್ಲದೆ, ಜಿಲ್ಲಾಧಿಕಾರಿಯ ಗೌರವಕ್ಕಿಂತ ಹಿಂದು ಸಮಾಜದ ಗೌರವ ಹೆಚ್ಚಿನದು. ಅಲ್ಲಿನ ಜನರ ಭಾವನೆ ಹೆಚ್ಚಿನದ್ದು. ಹಾಗಾಗಿ ಜನರ ಪ್ರತಿಭಟನೆಗೆ ಜಿಲ್ಲಾಧಿಕಾರಿ ಕಿವಿಯಾಗಬೇಕು ಎಂದು ಆಗ್ರಹ ಮಾಡಿದ್ದರು.
ಗಡುವಿನಂತೆ ಜಾಗರಣ ವೇದಿಕೆ ಕಾರ್ಯಕರ್ತರು ಡಿ.21ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದಾರೆ. ಪ್ರತಿಭಟನೆ ಈ ಬಾರಿ ಕೇವಲ ಸಾಂಕೇತಿಕ ಆಗುವ ಬದಲು ಹಿಂದು ಸಮಾಜದ ಗೌರವ ಎತ್ತಿಹಿಡಿಯುವುದಕ್ಕಾಗಿ ಮತ್ತು ಜನರ ಆಕ್ರೋಶ ದೇಶದ ಗಮನ ಸೆಳೆಯುವಂತಾಗಲು ಭಾರೀ ಸಿದ್ಧತೆ ನಡೆಸಲಾಗಿದೆ. ಮಾಹಿತಿ ಪ್ರಕಾರ, ಉತ್ತರ ಭಾರತದ ನಾಗಾ ಸಾಧುಗಳನ್ನು ಪ್ರತಿಭಟನೆಗೆ ಕರೆಸಲಾಗಿದ್ದು, ಈಗಾಗಲೇ ಉತ್ತರ ಪ್ರದೇಶ, ಮಧ್ಯಪ್ರದೇಶಗಳಿಂದ ಹಲವಾರು ನಾಗಾ ಸಾಧುಗಳು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ ಎನ್ನುವ ಮಾಹಿತಿಗಳಿವೆ. ಡಿ.19ರಂದು ಹಲವಾರು ಬರಿಮೈ ಸಾಧುಗಳು ಕಾರಿಂಜ ಬೆಟ್ಟಕ್ಕೆ ತಲುಪಲಿದ್ದಾರೆ.
ಕಾರಿಂಜೇಶ್ವರ ಶಿವನ ಆಲಯವಾಗಿರುವುದರಿಂದ ಶಿವಭಕ್ತ ನಾಗಾ ಸಾಧುಗಳ ಮೂಲಕ ಜನರ ಹಕ್ಕೊತ್ತಾಯ ಪ್ರಧಾನಿ ಕಿವಿಗೆ ಮುಟ್ಟುವ ರೀತಿ ವ್ಯವಸ್ಥೆ ಮಾಡಲಾಗುತ್ತಿದೆ. ಕಾರಿಂಜೇಶ್ವರ ಬೆಟ್ಟದ ಬಳಿ ಹಲವಾರು ವರ್ಷಗಳಿಂದ ಸಕ್ರಮದ ಹೆಸರಲ್ಲಿ ಅಕ್ರಮ ಕಲ್ಲು ಕೋರೆ ನಡೆಯುತ್ತಿದ್ದು, ಅದರ ಸಿಡಿಮದ್ದಿನ ಸ್ಫೋಟಕ್ಕೆ ಬೆಟ್ಟದ ಮೇಲಿನ ದೇವಸ್ಥಾನ ನಲುಗುತ್ತಿದೆ ಅನ್ನುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕೇಸು ಕೋರ್ಟ್ ಕಟ್ಟೆ ಹತ್ತಿದ್ದರೂ, ವಿವಾದ ತಾರ್ಕಿಕ ಅಂತ್ಯ ಕಂಡಿಲ್ಲ. ಜಿಲ್ಲಾಧಿಕಾರಿ, ತಾಲೂಕು ತಹಸೀಲ್ದಾರ್ ವರದಿ ಆಧರಿಸಿ ಕೋರ್ಟ್ ತೀರ್ಪು ನೀಡುವುದರಿಂದ ಆಗಿಂದಾಗ್ಗೆ ಪೊಲೀಸ್ ಕೇಸು, ಹೋರಾಟ, ಪ್ರತಿಭಟನೆ ನಡೆದಿದ್ದರೂ, ಸ್ಥಳೀಯರ ಕೂಗು ಆಡಳಿತದ ಕಿವಿ ಮುಟ್ಟಿಲ್ಲ. ಹಾಗಾಗಿ ಈ ಬಾರಿ ನಾಗಾ ಸಾಧುಗಳನ್ನು ಕರೆಸಿ ಮಂಗಳೂರಿನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲು ಸದ್ದಿಲ್ಲದೆ ತಯಾರಿ ನಡೆದಿದೆ.
Illegal Stone quarrying at Karinjeshwara temple at Bantwal Nagasadhus to come to Mangalore to protest against DC on 21st of Dec as H J V had challenged of gherao Dc office as promised by Jagadish Karanth.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm