ಬ್ರೇಕಿಂಗ್ ನ್ಯೂಸ್
11-12-21 03:14 pm HK Desk news ಕರಾವಳಿ
ಮಂಗಳೂರು, ಡಿ.11 : ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದುರಂತ ಸಾವಿನ ಬಗ್ಗೆ ಅವಹೇಳನ ಮತ್ತು ಅಗೌರವ ಸೂಚಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಗಳ ವಿರುದ್ಧ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸಂತ್ ಕುಮಾರ್ ಟಿ.ಕೆ. ಎಂಬಾತ, ಬಿಪಿನ್ ರಾವತ್ ಮೋದಿ ಗುಲಾಮತನದ ಒಂದು ತಲೆಮಾರು. ಚೈನಾ ಬಂದು ಹಳ್ಳಿಗಳನ್ನು ನಿರ್ಮಿಸಿದಾಗಲೂ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟ ವ್ಯಕ್ತಿ. ಸದ್ಯಕ್ಕೆ ಅವರ ಕುಟುಂಬಕ್ಕೆ ಸಮಾಧಾನ ಸಿಗಲಿ. ಅವರ ಸಾವಿನಿಂದ ದೇಶವಂತೂ ಪಾರಾಗಿದೆ ಎಂಬುದಾಗಿ ಅವಹೇಳನಕಾರಿಯಾಗಿ ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದಿದ್ದ. ಇನ್ನೊಬ್ಬ ಸುಬ್ಬರಾವ್ ರವಿಕುಮಾರ್ ಎಂಬಾತ ಫೇಸ್ಬುಕ್ ಖಾತೆಯಲ್ಲಿ ಫೇಕುವಿನ ನೂರಾರು ಬಾಯಿಗಳಲ್ಲಿ ಒಂದು ಸ್ತಬ್ಧವಾಗಿದೆ ಎಂದು ಬರೆದಿದ್ದು ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಶ್ರೀನಿವಾಸ್ ಕಾರ್ಕಳ ಎಂಬ ವ್ಯಕ್ತಿ ದೋವಲ್ ಯಾವಾಗ ಎಂಬುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಾವನ್ನು ಬಯಸಿ, ಪೋಸ್ಟ್ ಮಾಡಿದ್ದ.
ಈ ರೀತಿ ಸೇನಾಧಿಕಾರಿ ಬಿಪಿನ್ ರಾವತ್ ಸಾವಿನ ಬಗ್ಗೆ ಸಂಭ್ರಮಿಸಿ, ಅಗೌರವ ಸೂಚಿಸಿ ಪೋಸ್ಟ್ ಮಾಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ, ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಈ ಬಗ್ಗೆ ಯುವಮೋರ್ಚಾ ಕಾರ್ಯಕರ್ತರು ಶುಕ್ರವಾರ ಸಂಜೆ ಪಾಂಡೇಶ್ವರ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು. ಆ ಪೈಕಿ ಸುಶಾಂತ್ ಪೂಜಾರಿ ಎಂಬವರ ದೂರು ಆಧರಿಸಿ, ಪಾಂಡೇಶ್ವರ ಠಾಣೆಯಲ್ಲಿ ವಸಂತ್ ಕುಮಾರ್ ಟಿ.ಕೆ ಮತ್ತು ಶ್ರೀನಿವಾಸ್ ಕಾರ್ಕಳ ಮತ್ತಿತರ ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
Offensive social media posts about Bipin Rawat’s death on Facebook for which Mangalore police have filed FIR on many. Karnataka Chief Minister Basavaraj Bommai said on Friday that “offensive tweets and social media posts” about the helicopter crash in which Chief of Defence Staff Bipin Rawat died will not be tolerated. Bipin Rawat, his wife Madhulika Rawat and 11 others died on Wednesday in the helicopter crash in the Katteri-Nanchappanchathram area of Tamil Nadu’s Coonoor district.
02-10-25 03:50 pm
Bangalore Correspondent
ಆರ್ ಸಿಬಿ ತಂಡ ಮಾರಾಟಕ್ಕಿಟ್ಟ ಯುನೈಟೆಡ್ ಸ್ಪಿರಿಟ್ಸ್...
02-10-25 02:28 pm
ಹಾಸನದ ನಿಗೂಢ ಸ್ಫೋಟದ ಬೆನ್ನತ್ತಿದ ಪೊಲೀಸರು ; ಸಿಡಿಮ...
01-10-25 10:06 pm
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
02-10-25 03:45 pm
HK News Desk
ಆರೆಸ್ಸೆಸ್ ಶತಮಾನೋತ್ಸವ ; ಭಾರತ ಮಾತೆಯ ಚಿತ್ರವಿರುವ...
01-10-25 09:44 pm
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
02-10-25 11:05 pm
Mangalore Correspondent
Illegal Slaughterhouse in Mangalore: ಬೆನ್ನು ಬ...
02-10-25 10:43 pm
D.K. Shivakumar, Mangaluru Dasara: ದೇವರೇ ನನ್ನ...
02-10-25 11:43 am
Mangalore, Pilinalike 2025: ಪಿಲಿನಲಿಕೆ ಉತ್ಸವಕ್...
01-10-25 11:00 pm
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm