ಬ್ರೇಕಿಂಗ್ ನ್ಯೂಸ್
16-12-21 01:36 pm HK Desk news ಕರಾವಳಿ
ಉಡುಪಿ, ಡಿ.16 : ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರಕಾರ ತಯಾರಿ ನಡೆಸಿರುವಾಗಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮೊದಲ ಹಂತದಲ್ಲಿ ಕ್ರಿಸ್ತಿಯನ್ನರಾಗಿ ಮತಾಂತರಗೊಂಡಿರುವ ಮಂದಿ ಹೆಚ್ಚು ಅಪಾಯಕಾರಿ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಅದಮಾರು ಮಠದ ಪರ್ಯಾಯ ಹಿನ್ನೆಲೆಯ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಬಿ.ಎಲ್.ಸಂತೋಷ್ ಈ ಮಾತು ಹೇಳಿದ್ದಾರೆ. ಹಿಂದು ಧರ್ಮದ ಪ್ರಸಕ್ತ ಸ್ಥಿತಿಗತಿ ವಿಚಾರದಲ್ಲಿ ಸಂತೋಷ್ ಉಪನ್ಯಾಸ ನೀಡಿದ್ದಾರೆ.
ಮತಾಂತರಗೊಂಡ ಕ್ರಿಸ್ತಿಯನ್ನರ ಪೈಕಿ ಮೊದಲ ತಲೆಮಾರು ಎರಡು ಮತ್ತು ಮೂರನೇ ಹಂತಕ್ಕಿಂತ ಹೆಚ್ಚು ಅಪಾಯಕಾರಿ. ಆಗಷ್ಟೇ ಮತಾಂತರಗೊಂಡ ಕ್ರಿಸ್ತಿಯನ್ನರು ನಮ್ಮ ಸುತ್ತಮುತ್ತ ಇದ್ದಾರೆ ಅಂದ್ರೆ, ನಮ್ಮ ಬಾಗಿಲಲ್ಲೇ ಅಪಾಯ ಇದೆಯೆಂದರ್ಥ. ನಮ್ಮ ಪರಿಸರದಲ್ಲಿ ಅಂತಹ ಕುಟುಂಬಗಳು ವಾಸವಿದ್ದರೆ ಅವರ ಬಗ್ಗೆ ಹೆಚ್ಚು ನಿಗಾ ಇಡಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಕೂಡ ಭರವಸೆ ನೀಡಿದ್ದಾರೆ. ಆದರೆ ಕಾನೂನು ಬಂದ ಮಾತ್ರಕ್ಕೆ ಸಮಸ್ಯೆ ನಿವಾರಣೆ ಆಗುವುದಿಲ್ಲ.
ಸಮಾಜದ ಪ್ರತೀ ಹಂತದ ಜನರು ಕೂಡ ಈ ಕಾಯ್ದೆ ಬಗ್ಗೆ ಜಾಗೃತರಾಗಬೇಕು. ಮತ್ತು ಮತಾಂತರ ವಿಚಾರದಲ್ಲಿ ಜಾಗೃತಿ ಹೊಂದಬೇಕು. ನಮ್ಮ ಹೆಣ್ಮಕ್ಕಳು ಲವ್ ಜಿಹಾದಿಗೆ ಬಲಿಯಾಗುತ್ತಿದ್ದಾರೆ. ಇಂಥ ಲವ್ ಜಿಹಾದಿ, ಮತಾಂತರಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ ಅಂದ್ರೆ, ಎಚ್ಚರಿಕೆ ಗಂಟೆ ಅಂತಲೇ ಪರಿಗಣಿಸಬೇಕು ಎಂದು ಸಂತೋಷ್ ಹೇಳಿದರು.
ನಾವು ಕೃಷ್ಣ – ರಾಮನ ಹೆಸರೇಳಿಕೊಂಡ ಮಾತ್ರಕ್ಕೆ ಸಮಾಜದಲ್ಲಿ ಬದುಕಲು ಆಗುವುದಿಲ್ಲ. ಸರಿಯಾದ ಸಮಯಕ್ಕೆ ಏನೇನು ಕೆಲಸ ಆಗಬೇಕು, ಅದನ್ನು ನಾವು ಮಾಡಬೇಕು. ಜಾತಿ, ಜನಾಂಗ, ಭಾಷೆಯ ಭೇದ ಬಿಟ್ಟು ನಾವು ಒಗ್ಗಟ್ಟು ಹೊಂದಬೇಕು. ಪಾಶ್ಚಾತ್ಯ ಸಮಾಜ ನಮ್ಮ ಮೇಲೆ ಒಂದೇ ಭಾಷೆ, ಸಂಸ್ಕೃತಿ, ಪೋಷಾಕು ಶೈಲಿಯನ್ನು ಹೇರುವ ಮೂಲಕ ಪ್ರಾದೇಶಿಕ ಭಾವಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಈ ರೀತಿಯ ಏಕೀಕೃತ ವ್ಯವಸ್ಥೆಯ ಹೇರಿಕೆಯಿಂದ ನಮ್ಮ ಸಮಾಜಕ್ಕೆ ಅಪಾಯ ಹೆಚ್ಚು. ನಾವು ನಮ್ಮ ಮೂಲ ಸಂಸ್ಕೃತಿ ಮರೆಯಬಾರದು. ವಿದೇಶಿ ವಸ್ತುಗಳಿಗಿಂತ ನಮ್ಮ ಮನೆಯಲ್ಲಿರುವ ವಸ್ತುಗಳನ್ನು , ನಮ್ಮಲ್ಲೇ ಸಿಗುವ ವಸ್ತು-ಸಾಮಗ್ರಿಗಳನ್ನು ಬಳಸಲು ಒತ್ತು ಕೊಡಬೇಕು.
ಇತ್ತೀಚೆಗೆ ರೋಮ್ ದೇಶಕ್ಕೆ ಪ್ರಧಾನಿ ಮೋದಿ ತೆರಳಿದ್ದಾಗ, ಅಲ್ಲಿಯೂ ಯೋಗಕ್ಕೆ ಒತ್ತು ನೀಡಿದ್ದನ್ನು ಸ್ಮರಿಸಿದ ಸಂತೋಷ್, ಜಗತ್ತಿನಲ್ಲಿ ಹಿಂದು ಸಂಸ್ಕೃತಿಯನ್ನು ಅನುಕರಿಸುವುದು ಹೆಚ್ಚುತ್ತಿದೆ. ಹೆಚ್ಚೆಚ್ಚು ಜನರು ಹಿಂದುಯಿಸಂ ಬಗ್ಗೆ ಒಲವು ಹೊಂದಿ, ತಮ್ಮ ನಡೆ-ನುಡಿಯಲ್ಲಿ ಅನುಸರಿಸುತ್ತಿದ್ದಾರೆ. ನಮ್ಮ ನಂಬಿಕೆ, ಆಚರಣೆಗಳು ಬೇರೆಯವರಿಗೆ ತೊಂದರೆ ಕೊಡುವುದಿಲ್ಲ ಅನ್ನುವಾಗ ಬೇರೆಯವರ ನಂಬಿಕೆ, ಆಚರಣೆಗಳ ಬಗ್ಗೆಯೂ ನಮಗೆ ಸಮಸ್ಯೆ ಆಗುವುದಿಲ್ಲ ಎಂದು ಸಂತೋಷ್ ಹೇಳಿದರು.
ಉಡುಪಿ ಕೃಷ್ಣ ಮಠದ ಪರ್ಯಾಯ ಅದಮಾರು ಈಶಪ್ರಿಯ ಸ್ವಾಮೀಜಿ ಉಪಸ್ಥಿತರಿದ್ದರು.
The first generation Christians are much more dangerous than the second and third generations," said national general secretary of BJP, B L Santhosh. He was speaking at the ‘Vishwarpanam’, the concluding ceremony of Admaru Paryaya. Addressing the gathering on 'Current Affairs of Hindu Religion', Santhosh said, "If there are first generation of converted Christians, we need to understand that the danger is at our doors. They may be living in our surroundings, but we need to be vigilant about them.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm