ಬ್ರೇಕಿಂಗ್ ನ್ಯೂಸ್
19-12-21 08:53 pm HK Desk news ಕರಾವಳಿ
Photo credits : Headline Karnataka
ಮಂಗಳೂರು, ಡಿ.19: ಕುಡಿದ ಮತ್ತಿನಲ್ಲಿ ಕಾರು ಓಡಿಸಿಕೊಂಡು ಬಂದ ಯುವಕನೊಬ್ಬ ಬಸ್ ನಿಲ್ದಾಣಕ್ಕೆ ನುಗ್ಗಿಸಿದ ಘಟನೆ ನಗರದಲ್ಲಿ ನಡೆದಿದ್ದು ಅಲ್ಲಿದ್ದ ಮಹಿಳೆಯರು, ಯುವತಿಯರು ಸಾವಿನ ದವಡೆಯಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಭಾನುವಾರ ಸಂಜೆ ಏಳು ಗಂಟೆ ಸುಮಾರಿಗೆ ನಗರದ ಶಿವಭಾಗ್ ಪೆಟ್ರೋಲ್ ಪಂಪ್ ಮುಂಭಾಗದ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.
ಕದ್ರಿ ಮಲ್ಲಿಕಟ್ಟೆ ಕಡೆಯಿಂದ ಕೆಂಪು ಡಸ್ಟರ್ ಕಾರು ವೇಗವಾಗಿ ಧಾವಿಸಿ ಬಂದಿದ್ದು ನಂತೂರು ಭಾಗದತ್ತ ತೆರಳುವಾಗ ರಸ್ತೆ ಬಿಟ್ಟು ಹೊರಕ್ಕೆ ಚಲಿಸಿದೆ. ಕಾರು ಧಾವಂತದಿಂದ ಎಡಭಾಗದಲ್ಲಿದ್ದ ಬಸ್ ನಿಲ್ದಾಣಕ್ಕೆ ನುಗ್ಗಿದ್ದು ಅಲ್ಲಿದ್ದ ಮಹಿಳೆಯರು ಕಾರನ್ನು ನೋಡಿ ದೂರಕ್ಕೆ ಓಡಿದ್ದಾರೆ. ಅದರಲ್ಲೂ 25 ವರ್ಷದ ಯುವತಿಯೊಬ್ಬಳು ಕಾರಿನಡಿಗೆ ಬೀಳುವುದನ್ನು ಮಹಿಳೆಯೊಬ್ಬರು ತನ್ನತ್ತ ಎಳೆದು ತಪ್ಪಿಸಿದ್ದಾರೆ.
ಕಾರು ರಸ್ತೆಯಿಂದ ಹೊರಕ್ಕೆ ಹರಿದು ಅಪಘಾತವಾಗಿದ್ದು ತಿಳಿಯುತ್ತಲೇ ಅದರಲ್ಲಿದ್ದ ವ್ಯಕ್ತಿ ಕಾರಿನಿಂದ ಇಳಿದು ಹೋಗಿದ್ದಾನೆ. ಬಳಿಕ ಜನರು ಜಮಾಯಿಸಿದ್ದು ಕದ್ರಿ ಸಂಚಾರಿ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಕಾರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಕಾರು ಚಾಲಕ ಅಲ್ಲಿಂದ ನಾಪತ್ತೆಯಾಗಿದ್ದ.
ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದು ಭಾರೀ ಅನಾಹುತ ಅಕಸ್ಮಾತ್ ತಪ್ಪಿ ಹೋಗಿದೆ. ಪೊಲೀಸರು ಕಾರಿನ ಚಾಲಕನನ್ನು ಪತ್ತೆ ಮಾಡುತ್ತಾರೋ, ಅಲ್ಲಿಗೇ ಬಿಟ್ಟು ಬಿಡುತ್ತಾರೋ ಗೊತ್ತಿಲ್ಲ. ಸ್ಥಳೀಯರೊಬ್ಬರು ಫೋಟೊ ತೆಗೆದು ಹೆಡ್ ಲೈನ್ ಕರ್ನಾಟಕದ ಗಮನಕ್ಕೆ ತಂದಿದ್ದಾರೆ. ಭಾನುವಾರ ಆಗಿದ್ದರಿಂದ ಬಸ್ ನಿಲ್ದಾಣದಲ್ಲಿ ಹೆಚ್ಚು ಜನ ಇರಲಿಲ್ಲ. ಇತರೇ ದಿನಗಳಾಗಿರುತ್ತಿದ್ದರೆ ಜನ ಸಂದಣಿ ಹೆಚ್ಚಿರುತ್ತಿತ್ತು. ಅಪಾಯ ಆಗುತ್ತಿತ್ತು ಎಂದು ತಿಳಿಸಿದ್ದಾರೆ.
Drunken car Driver rams Duster car into bus stand at Shivabagh Kadri in Mangalore, passengers escape uninjured. The car owner flee away from the spot after the accident. Kadri police rush to the spot and are investigating the case.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm