ಬ್ರೇಕಿಂಗ್ ನ್ಯೂಸ್
22-12-21 10:17 pm HK Desk news ಕರಾವಳಿ
ಉಡುಪಿ, ಡಿ.22 : ಉಡುಪಿ ಮಲ್ಲಿಗೆ ಅಂದರೆ ಕರಾವಳಿಯಲ್ಲಿ ಶಂಕರಪುರ ಮಲ್ಲಿಗೆ ಭಾರೀ ಫೇಮಸ್. ಆದರೆ ಈ ಬಾರಿ ಉಡುಪಿ ಮಲ್ಲಿಗೆಯ ದರ ಕೈಸುಡುವಷ್ಟರ ಮಟ್ಟಿಗೆ ಹೋಗಿದೆ. ಉಡುಪಿ ಮಲ್ಲಿಗೆಯ ದರವನ್ನು ಡಿಸೆಂಬರ್ 23ರಿಂದ ಅನ್ವಯವಾಗುವಂತೆ ಮಲ್ಲಿಗೆ ಹೂವಿನ ಅಟ್ಟಿಗೆ (3200 ಬಿಡಿ ಹೂವು) ಬರೋಬ್ಬರಿ 2,100 ರೂ.ಗಳಿಗೆ ಏರಿಸಿದೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು ಹತ್ತು ಸಾವಿರ ಕುಟುಂಬಗಳು ಮಲ್ಲಿಗೆ ಬೆಳೆಯನ್ನು ನಂಬಿ ಜೀವನ ನಡೆಸುತ್ತಿದೆ. ಪ್ರಸಕ್ತ ಹವಾಮಾನ ವೈಪರೀತ್ಯ ಸ್ಥಿತಿಯಲ್ಲಿ ಮಲ್ಲಿಗೆ ಬೆಳೆಗಾರ ಕುಟುಂಬಗಳು, ಗಿಡಗಳು ಹಾನಿಗೊಳಗಾಗಿ ಹೂವಿನ ಇಳುವರಿ ಕುಂಠಿತವಾಗಿದ್ದು ತೀರಾ ಸಂಕಷ್ಟ ಸ್ಥಿತಿಯಲ್ಲಿವೆ. ಇದರ ಜತೆಯಲ್ಲಿ ನಿರ್ವಹಣಾ ವೆಚ್ಚ, ಸಾಗಾಟದ ವೆಚ್ಚಗಳೂ ಏರಿರುವ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿನ ದರವನ್ನು ನಿಶ್ಚಿತವಾಗಿ ಏರಿಸಲಾಗಿದೆ ಎಂದು ಮಲ್ಲಿಗೆ ವರ್ತಕರ ಸಂಘದ ದರ ನಿಗದಿ ಕೇಂದ್ರವು ಅಭಿಪ್ರಾಯ ಪಟ್ಟಿದೆ.
ಎಲ್ಲೆಡೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿ ಕೃಷಿಕರನ್ನು ಶೋಷಣೆ ಮಾಡುತ್ತಾರೆ. ತಮ್ಮ ಹಿತಾಸಕ್ತಿ ಸಾಧನೆಗಾಗಿ ಕೃಷಿಕರನ್ನು ಬಳಸಿ ಕೊಳ್ಳುತ್ತಾರೆ. ಇದರ ನಡುವೆ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಕೃಷಿಕರ ಹಿತಾಸಕ್ತಿಯನ್ನೇ ಮಾನದಂಡವಾಗಿಟ್ಟುಕೊಂಡು, ಮಲ್ಲಿಗೆ ಬೆಳೆಗಾರರಿಂದ ಹಿಡಿದು, ಹೂವನ್ನು ಕೊಯ್ದು, ಸಂಗ್ರಹ ಮಾಡಿ ಮಾರುಕಟ್ಟೆಗೆ ಒಯ್ಯುವ ತನಕದ ಎಲ್ಲರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ದರ ಏರಿಸಿದೆ.
ಯಾವುದೇ ಹೂವಿನ ಮಾರುಕಟ್ಟೆಗಳಿಗೆ ಹೋಲಿಸಿದರೆ ದೇಶಕ್ಕೇ ಮಾದರಿಯಾಗಿ, ಕಳೆದ 80 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಉಡುಪಿ ಮಲ್ಲಿಗೆ ದರ ನಿಗದಿ ಕೇಂದ್ರವು ಯಾವುದೇ ಒಳ ಒಪ್ಪಂದಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ, ಸರ್ವಸಮ್ಮತವಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಷಯ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.
Udupi Jasmine flower rate will go rocket high from Dec 23rd. The fixed price will be 2,100 Rs.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm