ಬ್ರೇಕಿಂಗ್ ನ್ಯೂಸ್
23-12-21 12:00 pm Mangalore Correspondent ಕರಾವಳಿ
ಉಳ್ಳಾಲ, ಡಿ.23 : ಮಂಗಳೂರಲ್ಲಿ ಆಂಬುಲೆನ್ಸ್ ಸೇವೆಯಲ್ಲೇ ಎಲ್ಲರಿಗೂ ಪರಿಚಿತರಾಗಿದ್ದು ಮಾನವೀಯ ಸೇವಕರಾಗಿದ್ದ ಅತ್ತಾವರ ನಿವಾಸಿ ಗಂಗಾಧರ್ ಚೆಟ್ಟಿಯಾರ್(62) ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಮೊನ್ನೆ ಗಂಗಾಧರ್ ಅವರು ಇದ್ದಕ್ಕಿದ್ದಂತೆ ವಾಂತಿ ಮಾಡಲಾರಂಭಿಸಿದ್ದು ತಕ್ಷಣ ಅವರನ್ನ ಫಳ್ನೀರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ಕರುಳು ನಿಷ್ಕ್ರಿಯಗೊಂಡ ಪರಿಣಾಮ ಗಂಗಾಧರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ ಒಂದು ಆಂಬುಲೆನ್ಸ್ ಖರೀದಿಸಿ ಜನ ಸೇವೆ ಆರಂಭಿಸಿದ ಗಂಗಾಧರ್ ಅವರು ನಿನ್ನೆಯ ವರೆಗೆ 20 ಆಂಬುಲೆನ್ಸ್ ಗಳ ಮಾಲಕರಾಗಿದ್ದರು. ರಸ್ತೆ ಅಪಘಾತ, ಕೊಲೆ, ಆತ್ಮಹತ್ಯೆ, ರೈಲು ಅಪಘಾತ ಹೀಗೆ ಯಾವುದೇ ಪ್ರಕರಣ ನಡೆದಾಗಲೂ ಪೊಲೀಸ್ ಇಲಾಖೆ ಮೊದಲು ನೆನಪಿಸಿಕೊಳ್ಳುತ್ತಿದ್ದದ್ದೇ ಗಂಗಾಧರ್ ಅವರನ್ನ. ಕೊಲೆ, ಆತ್ಮಹತ್ಯೆ , ಅಪಘಾತ ನಡೆದ ಸ್ಥಳಗಳಿಗೆ ತಕ್ಷಣ ಗಂಗಾಧರ್ ಅವರು ಆಂಬುಲೆನ್ಸ್ ಸಮೇತ ಹಾಜರಾಗುತ್ತಿದ್ದರು. ಅಲ್ಲದೆ ರೈಲು ಅಪಘಾತಗಳಲ್ಲಿ ಛಿದ್ರಗೊಂಡಂತಹ ಮೃತದೇಹಗಳ ಭಾಗಗಳನ್ನ ಒಗ್ಗೂಡಿಸಿ ಆಂಬುಲೆನ್ಸಲ್ಲಿ ಒಯ್ಯುತ್ತಿದ್ದರು. ಆತ್ಮಹತ್ಯೆ, ಕೊಲೆಗಳಂತಹ ಪ್ರಕರಣಗಳು ನಡೆದಾಗ ಶವಗಳು ಕೊಳೆತು ನಾರುವ ಸ್ಥಿತಿಯಲ್ಲಿದ್ದರೂ ಅದನ್ನು ಒಯ್ದು ಮಾನವೀಯತೆಯ ಸೇವೆ ನೀಡುತ್ತಿದ್ದರು.
ಮಾನವೀಯ ಸೇವೆಯಲ್ಲೇ ಗಂಗಾಧರ್ ಅವರು ಹಂತ ಹಂತವಾಗಿ ಬೆಳೆದು 20 ಆಂಬುಲೆನ್ಸ್ ಗಳನ್ನ ಖರೀದಿಸಿ ಅದಕ್ಕೆ ಮಾನವೀಯ ಮೌಲ್ಯತೆಯುಳ್ಳ ಚಾಲಕರನ್ನೇ ನೇಮಿಸಿ ವ್ಯವಸ್ಥಿತವಾದ ಗಣೇಶ್ ಆಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದರು. ಗಂಗಾಧರ್ ಅವರ ಮಾನವೀಯ ಸೇವೆಯನ್ನು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದವು. ಮೃತರ ಅಂತಿಮ ಸಂಸ್ಕಾರ ಇಂದು ಸಂಜೆ 3 ಗಂಟೆಗೆ ನಡೆಯಲಿದೆ ಎಂದು ಅವರ ಸಹೋದರ ತಿಳಿಸಿದ್ದಾರೆ. ಮೃತ ಗಂಗಾಧರ್ ಅವರು ಪತ್ನಿ ಚಿತ್ರ, ಪುತ್ರ ಪ್ರಸಾದ್, ಪುತ್ರಿ ಪಲ್ಲವಿಯನ್ನ ಅಗಲಿದ್ದಾರೆ.
Mangalore Sri Ganesh Ambulance Owner and Social worker Gangadhar Chettiar passes away at 62. Gangadhar who started with one ambulance is the owner of 20 vehicles. Ganagadhar would be present at crime, suicide and also at the railway tracks in lifting the dead bodies and shifting them to the government hospitals.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm