ಬ್ರೇಕಿಂಗ್ ನ್ಯೂಸ್
23-12-21 10:09 pm HK Desk news ಕರಾವಳಿ
ಉಡುಪಿ, ಡಿ.23 : ಮತಾಂತರ ನಿಷೇಧ ಕಾಯ್ದೆಯಿಂದ ಕಾಂಗ್ರೆಸ್ ಗೆ ಯಾಕೆ ಹೊಟ್ಟೆಯುರಿ ಆಗಬೇಕು. ಕಾಯ್ದೆ ರಾಜ್ಯದ ದೇಶದ ಜನರ ಅಪೇಕ್ಷೆಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಲವ್ ಜಿಹಾದ್, ಚಿಕಿತ್ಸೆ , ಬಡತನ ನೆಪದಲ್ಲಿ ಜನರನ್ನು ದುರುಪಯೋಗ ಮಾಡಲಾಗುತ್ತಿದೆ. ಮತಾಂತರದ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲಾಗುತ್ತಿದೆ. ಸಮಾಜದ ಶಾಂತಿ ಕಾಪಾಡಲು ಕಾಯ್ದೆಯ ಅಗತ್ಯ ಇದೆ. ಓಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸುತ್ತಿದೆ.
ಕಾಂಗ್ರೆಸ್ ನದ್ದು ಅಲ್ಪಸಂಖ್ಯಾತ ಓಟಲ್ಲಿ ಗೆಲ್ಲುವ ಪ್ಲ್ಯಾನ್ ಅಷ್ಟೇ. ಕಾಂಗ್ರೆಸಿಗರೇ ನಿಮಗೆ ಬಹುಸಂಖ್ಯಾತರ ಓಟು ಬೇಡವಾ ಹೇಳಿ ? ಅಲ್ಪಸಂಖ್ಯಾತ ರ ಓಟಿನಲ್ಲಿಯೇ ಗೆದ್ದು ಬರ್ತೀರಾ? ಅವರವರು ಆಯಾ ಧರ್ಮದಲ್ಲಿ ಇದ್ದರೆ ನಿಮಗೆ ಏನು ಸಮಸ್ಯೆ? ಸಿದ್ದರಾಮಯ್ಯ, ಡಿಕೆಶಿ ಮತ್ತು ದೆಹಲಿಯ ನಾಯಕರು ಬರೀ ಓಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ಮಸೂದೆ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಶುಭನುಡಿಗಳನ್ನು ಜನ ನೋಡ್ತಿದ್ದಾರೆ. ಕಾಂಗ್ರೆಸ್ಸಿಗೆ ರಾಜ್ಯದ ಜನರೇ ಸರಿಯಾದ ಪಾಠ ಕಲಿಸುತ್ತಾರೆ ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಇನ್ನಷ್ಟು ಹೀನ ಸ್ಥಿತಿಗೆ ಹೋಗುತ್ತದೆ
ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರದ್ದು ಮಾಡುತ್ತೇವೆ ಎಂದಿರುವ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಡಿಕೆಶಿ ಎಲ್ಲಾ ಕಾಯ್ದೆಗಳನ್ನು ತೆಗೆಯುತ್ತೇವೆ ಎಂದಿದ್ದಾರೆ. ಕಾಶ್ಮೀರದ 370ನೇ ವಿಧಿ, ಸಿಎಎ ಕಾಯ್ದೆಯನ್ನೂ ತೆಗಿತೀವಿ ಎಂದಿದ್ದಾರೆ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆ ತೆಗಿತೀನಿ ಎಂದಿದ್ದಾರೆ. ಡಿಕೆಶಿ ಮತ್ತು ಕಾಂಗ್ರೆಸ್ ಎಲ್ಲಾ ಕಾಯ್ದೆಗಳನ್ನು ತೆಗೆಯುವುದರಲ್ಲೇ ಇದೆ. ಜಾತಿವಾದ, ಧರ್ಮವಾದ ಮಾಡಿದ್ದು ಕಾಂಗ್ರೆಸ್. ಕಾಶ್ಮೀರದಲ್ಲಿ ಬೆಂಕಿ ಹಚ್ಚಲು ಕಾರಣಕರ್ತರಾದವರು ಕಾಂಗ್ರೆಸ್ಸಿಗರು. ಕಾಯ್ದೆಗಳನ್ನು ತೆಗೆಯುವ ಅವಕಾಶ ರಾಜ್ಯದ ಜನ ಕೊಡಲ್ಲ. ಈ ರೀತಿ ಹೇಳುವ ಕಾಂಗ್ರೆಸ್ಸನ್ನು ಎಲ್ಲಿಡಬೇಕು ಜನ ಅಲ್ಲೇ ಇಟ್ಟಿದ್ದಾರೆ. ಕಾಂಗ್ರೆಸ್ ಇನ್ನಷ್ಟು ಹೀನಸ್ಥಿತಿಗೆ ಹೋಗುತ್ತದೆ. ಡಿಕೆಶಿ ಮತ್ತು ಸಿದ್ಧರಾಮಯ್ಯ ನೀವು ನಿಮ್ಮ ಕಣ್ಣಿನಲ್ಲಿ ಅದನ್ನು ನೋಡುತ್ತೀರಿ ಎಂದು ಹೀಗಳೆದರು.
ಮದುವೆ ವಯಸ್ಸು ಏರಿಸಿದ್ದು ಎಲ್ಲರಿಗೂ ಅನ್ವಯ
ಹೆಣ್ಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸಿರುವುದರಿಂದ ಹಿಂದುಗಳಿಗೆ ಮಾತ್ರ ತೊಂದರೆ ಎಂಬ ಸ್ವರ್ಣವಲ್ಲಿ ಸ್ವಾಮೀಜಿ ವಿರೋಧಕ್ಕೆ ಪ್ರತಿಕ್ರಿಯಿಸಿದ ಶೋಭಾ, ಮದುವೆ ವಯಸ್ಸಿಗೂ ಜನಸಂಖ್ಯೆಗೂ ಸಂಬಂಧ ಇಲ್ಲ. ವಯಸ್ಸು 21 ಆದರೆ ಯುವತಿಯ ಪದವಿ ಆಗಿರುತ್ತದೆ. ಯುವತಿಗೆ 21 ವಯಸ್ಸಿಗೆ ಪ್ರಬುದ್ಧತೆ ಬಂದಿರುತ್ತದೆ. ವಯಸ್ಸು 22 ಆಗುವ ಮೊದಲು ಹೆಣ್ಮಕ್ಕಳಿಗೆ ಯಾರೂ ಮದುವೆ ಮಾಡಬಾರದು. ಇಡೀ ದೇಶದಲ್ಲಿ ಹದಿನೆಂಟನೇ ವಯಸ್ಸಿಗೆ ಮದುವೆ ಮಾಡುತ್ತಾರೆ ಎಂಬ ಅಭಿಪ್ರಾಯ ತಪ್ಪು. ಸ್ವರ್ಣವಲ್ಲಿ ಸ್ವಾಮೀಜಿ ಮಾತಿಗೆ ನಾನು ವಿರೋಧ ಮಾಡಲ್ಲ. ವಯಸ್ಸು 21 ಆದ ನಂತರ ಮಹಿಳೆಯರು ಮದುವೆಯಾಗುವುದು, ಹೆರುವುದಕ್ಕೆ ರೆಡಿಯಾಗುತ್ತಾರೆ. ಈ ಕಾನೂನು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಕಾನೂನು ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ. ಕಾನೂನನ್ನ ದೇಶದ ಎಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.
I want to ask D K Shivakumar and Siddaramaiah whether they do not want the votes of the majority community or they are happy with vote bank of minorities. People of Karnataka are noticing all these statements and acts of the Congress. Shivakumar has claimed that they will remove the anti-conversion law if they come to power in 2023. They should first see whether the people of Karnataka will vote them to power or not.”
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm