ಬ್ರೇಕಿಂಗ್ ನ್ಯೂಸ್
31-12-21 09:18 pm Mangalore Correspondent ಕರಾವಳಿ
ಮಂಗಳೂರು, ಡಿ.31 : ಕೊರೊನೋತ್ತರ ಪರಿಣಾಮ, ಕೊರೊನಾ ಮೂರನೇ ಅಲೆಯ ಬಗ್ಗೆ ಮೂಡಿಸಿದ್ದ ಭೀತಿ, ಇದರ ನಡುವೆ ವೈರಸ್ ವಿರುದ್ಧದ ಹೋರಾಟಕ್ಕೆ ಬಂದ ಲಸಿಕೆ, ಎಲ್ಲವೂ ಮುಗಿದು ಹೋಯ್ತು ಎಂದು ಜನಸಾಮಾನ್ಯ ನಿಟ್ಟುಸಿರು ಬಿಡುತ್ತಲೇ ಧುತ್ತನೇ ಎದ್ದುಬಂದ ಓಮಿಕ್ರಾನ್ ಸದ್ದು.. ಹೀಗೆ ದೇಶ, ಭಾಷೆ, ಜನರ ಮಧ್ಯೆ ಹಲವು ಏಳು- ಬೀಳುಗಳಿಗೆ ಸಾಕ್ಷಿಯಾದ 2021ನೇ ಕ್ರಿಸ್ತ ಶಕೆ ನೋಡ ನೋಡುತ್ತಲೇ ಸರಿದು ಹೋಗಿದೆ. ಡಿಸೆಂಬರ್ 31ರ ಕೊನೆಯ ಸೂರ್ಯಾಸ್ತ ಬಾನೆತ್ತರಲ್ಲಿ ಮುಗಿಲು ಹಾಸಿದ್ದು, ಹೊಸ ವರ್ಷದಲ್ಲಿ ಹೊಸ ನಿರೀಕ್ಷೆಯೊಂದಿಗೆ ಹುಟ್ಟಲು ಹೊರಟಿದ್ದಾನೆ.
ಪಶ್ಚಿಮ ದಿಗಂತದಲ್ಲಿ ಮುಳುಗಿದ ಸೂರ್ಯ ಜನವರಿ ಒಂದರ ಹೊಸ ಸೂರ್ಯೋದಯಕ್ಕೆ ಸಾಕ್ಷಿಯಾಗಲಿದ್ದಾನೆ. ಇತ್ತ ಮುಳುಗಿದರಷ್ಟೇ ಅತ್ತ ಎದ್ದು ಬರಲು ಸಾಧ್ಯ ತಾನೇ. ಅತ್ತ ದುಃಖ ಆವರಿಸಿದರಷ್ಟೇ ಮತ್ತೊಂದು ಕಡೆ ಸಂತಸದ ಬೆಳಕು ಮೂಡಲು ಸಾಧ್ಯ ಎನ್ನುವ ರೀತಿ ಸೂರ್ಯನ ಅಸ್ತ ಮತ್ತು ಉದಯವೂ ಅಷ್ಟೇ. ಭೂಮಿಯ ಪಾಲಿಗೆ ನೇಸರನ ರವಿಯೇ ಬೆಳಕು. ಅವನಿಲ್ಲದೆ ಈ ಭುವಿಯ ಚರಾಚರವೂ ನಿಶ್ಚಲ ಅನ್ನುವುದೂ ಸತ್ಯ. ಪ್ರತಿದಿನವೂ ಅಸ್ತವಾಗುತ್ತಲೇ ಮರುದಿನವೇ ಉದಯವಾಗಿ ಭುವಿಯ ರಕ್ಷಣೆಗೆ ನಿಲ್ಲುವ ಸೂರ್ಯ ಭೂಮಿಯ ಸಕಲ ಜೀವಿಗಳಿಗೂ ಸೋಜಿಗದ ವಸ್ತು.
ಕೆಂಪಗಿನ ದಿಗಂತ ನೋಡುತ್ತಲೇ 2021ರ ಶಕೆ ಕೊನೆಯಾಗುತ್ತಾ ಬಂದಿದೆ. ಹೊಂಬಣ್ಣ ಬೀರಿದ್ದ ನೇಸರ ಡಿಸೆಂಬರ್ 31ರ ಕೊನೆಯಾಗುತ್ತಿದ್ದಂತೆ ಕೆಂಬಣ್ಣ ಬೀರುತ್ತಾ ತನ್ನ ಕಿರಣಗಳನ್ನು ಕ್ಷೀಣಗೊಳಿಸುತ್ತಾ ಹಾದಿ ಸವೆಸಿದ್ದಾನೆ. ಸಮುದ್ರ ತೀರದಲ್ಲಿ ಸೇರಿದ್ದ ಜನರು 2021ರ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಾ ಹೊಸ ಸೂರ್ಯೋದಯದತ್ತ ಕಣ್ಣು ನೆಟ್ಟಿದ್ದಾರೆ.
ಈ ಬಾರಿಯೂ ಕೊರೊನಾ ಭೀತಿಯು ಜನರನ್ನು ಮಕಾಡೆ ಮಲಗಿಸಿದ್ದರೂ, ಹಿಂದಿನ ವರ್ಷಕ್ಕಿಂತ ವಾಸಿ ಎನ್ನುವಂತಿತ್ತು. ಸರಕಾರದ ವಾರ್ನಿಂಗ್ ನಡುವೆಯೇ ನೇಸರನ ಕೊನೆಯ ಕಿರಣವನ್ನು ಕಂಡು ಪ್ರವಾಸಿಗರು ಸಮುದ್ರದಲ್ಲಿ ಮಿಂದೆದ್ದು ಮುಂದಿನ ವರ್ಷದತ್ತ ದಿಗಂತ ನೋಡುತ್ತಾ ನಡೆದಿದ್ದಾರೆ. ಸೂರ್ಯ ಟಾಟಾ ಹೇಳುತ್ತಾ ಕೆಂಬಣ್ಣ ಬೀರುತ್ತಾ ದಿಗಂತದಲ್ಲಿ ಲೀನವಾಗಿದ್ದಾನೆ. 2022ರ ಹೊಸ ವರ್ಷವು ನಮ್ಮೆಲ್ಲ ಓದುಗರಿಗೂ ಶುಭವ ನೀಡಲಿ ಎನ್ನುವ ಹಾರೈಕೆಯೊಂದಿಗೆ ಗುಡ್ ಲಕ್ ಹೇಳುತ್ತಾ, ಹೊಸ ದಿಗಂತದಲ್ಲಿ ಮೂಡಿಬರಲಿರುವ ಸೂರ್ಯನ ಕಿರಣ ಕೊರೊನಾ ವೈರಸಿನ ಅಟ್ಟಹಾಸಕ್ಕೆ ಇತಿಶ್ರೀ ಹಾಡಲಿ ಎಂದೂ ಹಾರೈಸುವ.
Children in the beach sea the last sun set of 2021 in Mangalore wins heart. Farewell 2021.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm