ಬ್ರೇಕಿಂಗ್ ನ್ಯೂಸ್
04-01-22 09:26 pm Mangalore Correspondent ಕರಾವಳಿ
ಮಂಗಳೂರು, ಜ.4 : ಓಮಿಕ್ರಾನ್ ವೈರಸ್ ಬಗ್ಗೆ ರಾಜ್ಯ ಸರಕಾರ ವಿನಾಕಾರಣ ಜನರಲ್ಲಿ ಭಯ ಮೂಡಿಸುತ್ತಿದೆ. ಓಮಿಕ್ರಾನ್ ಹರಡಿ ಯಾರಾದರೂ ಆಸ್ಪತ್ರೆಗೆ ದಾಖಲಾಗಿ ತೀವ್ರ ಸ್ಥಿತಿಯಲ್ಲಿದ್ದಾರೆಯೇ, ರಾಜ್ಯದಲ್ಲಿ ಎಷ್ಟು ಮಂದಿಗೆ ಓಮಿಕ್ರಾನ್ ಆಗಿದೆ, ಅವರ ಸ್ಥಿತಿಗತಿ ಹೇಗಿದೆ ಎನ್ನುವುದರ ಅಂಕಿ ಅಂಶ ನೀಡಿಲ್ಲ. ಕಾಂಗ್ರೆಸ್ ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಹಮ್ಮಿಕೊಂಡಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಓಮಿಕ್ರಾನ್ ಬಗ್ಗೆ ಭಯ ಮೂಡಿಸಿ ಜನರು ಬರದಂತೆ ತಡೆಯುವ ಮತ್ತು ಲಾಕ್ಡೌನಂತಹ ನಿರ್ಬಂಧಗಳನ್ನು ಹೇರಿ, ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶ ಇದರ ಹಿಂದಿರುವಂತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಖಾದರ್, ಓಮಿಕ್ರಾನ್ ಸೋಂಕಿನ ಬಗ್ಗೆ ರಾಜ್ಯ ಮತ್ತು ದೇಶದಲ್ಲಿ ಯಾಕೆ ಭಯ ಮೂಡಿಸಲಾಗುತ್ತಿದೆ ಅನ್ನುವುದು ಅರ್ಥವಾಗುತ್ತಿಲ್ಲ. ಇತ್ತ ಭಯ ಮೂಡಿಸುತ್ತಿರುವಾಗಲೇ ಅತ್ತ ಉತ್ತರ ಪ್ರದೇಶದಲ್ಲಿ ಪ್ರಧಾನಿ ಬೃಹತ್ ರ್ಯಾಲಿ ನಡೆಸುತ್ತಾರೆ. ಜನರನ್ನು ಸೇರಿಸುತ್ತಾರೆ. ಮತ್ತೊಂದು ಕಡೆ ಕರ್ಫ್ಯೂ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಓಮಿಕ್ರಾನ್ ಸ್ಥಿತಿಗತಿ ಬಗ್ಗೆ ವಿಜ್ಞಾನದ ಲೆಕ್ಕ ನೀಡಬೇಕು. ಅಂಕಿ ಅಂಶಗಳನ್ನು ನೀಡುವುದು ಬಿಟ್ಟು ರಾಜಕೀಯ ಮಾತನಾಡುವುದು ಯಾಕೆ.. ಜನರನ್ನು ಭಯದ ವಾತಾವರಣದಲ್ಲಿರಿಸಿ ಮೇಕೆದಾಟು ಪ್ರತಿಭಟನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮೇಕೆದಾಟು ಯೋಜನೆ ಬಗ್ಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎನ್ನುತ್ತಿರುವ ಮುಖ್ಯಮಂತ್ರಿ ಯೋಜನೆಗೆ ಶಿಲಾನ್ಯಾಸ ಮಾಡಬಹುದಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ. ಇದಕ್ಕೆ ಯಾರದೇ ಒಪ್ಪಿಗೆಯೂ ಅಗತ್ಯವಿಲ್ಲ. ಯಾವುದೇ ರಾಜ್ಯದ ನಿರಾಕ್ಷೇಪಣೆ ಕೇಳುವ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. 1968ರಲ್ಲಿ ಮೊದಲ ಬಾರಿಗೆ ಮೇಕೆದಾಟು ಯೋಜನೆಗೆ ಮೊದಲ ಬಾರಿ ಪ್ರಸ್ತಾವನೆ ಹೋಗಿತ್ತು. ಸಿದ್ದರಾಮಯ್ಯ ಸರಕಾರ ಇದ್ದಾಗ 2017ರಲ್ಲಿ ಡಿಪಿಆರ್ ತಯಾರಿಸಿ, ಕೇಂದ್ರದಿಂದ ಒಪ್ಪಿಗೆ ಪಡೆಯಲಾಗಿತ್ತು. 2019ರಲ್ಲಿ ಮತ್ತೆ 9 ಸಾವಿರ ಕೋಟಿಗೆ ಡಿಪಿಆರ್ ಹೆಚ್ಚಿಸಿ ಪ್ರಸ್ತಾವನೆ ಹಾಕಲಾಗಿತ್ತು. ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯಲು ಮಾತ್ರ ಬಾಕಿಯಿತ್ತು. ಈಗ ತಮಿಳುನಾಡಿನ ಎನ್ಓಸಿ ಕೇಳಬೇಕು ಅನ್ನುವುದರಲ್ಲಿ ಅರ್ಥ ಇಲ್ಲ ಎಂದು ಖಾದರ್ ಹೇಳಿದರು.
60 ಟಿಎಂಸಿ ನೀರು ಮಳೆಗಾಲದಲ್ಲಿ ವೇಸ್ಟ್ ಆಗಿ ಹೋಗುತ್ತಿರುವುದನ್ನು ತಡೆದು ಅಣೆಕಟ್ಟು ಕಟ್ಟಲಾಗುತ್ತಿದೆ. ಅದರ ಜೊತೆಗೆ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, 9 ಸಾವಿರ ಕೋಟಿ ಖರ್ಚು ಮಾಡಿದರೂ ಅದು ವೇಸ್ಟ್ ಆಗಲ್ಲ. ಪವರ್ ಜನರೇಟ್ ಮೂಲಕ ಮತ್ತೆ ಹಣ ಸಂಗ್ರಹಿಸಲು ಅವಕಾಶ ಇದೆ. ಇಂಥ ಯೋಜನೆಯ ಬಗ್ಗೆ ಕೇಂದ್ರದಿಂದ ಅನುಮತಿ ಪಡೆಯಲು ಸಾಧ್ಯವಾಗದಿದ್ದರೆ ರಾಜ್ಯದಲ್ಲಿ 25 ಸಂಸದರು ಇರೋದು ಯಾಕೆ.. ಇವರನ್ನು ಎಚ್ಚರಿಸಲು ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ. ಎಲ್ಲ ಜಿಲ್ಲೆಗಳಿಂದ ಜನರು ತೆರಳಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಸಾವಿರಾರು ಜನರು ಹೋಗಲಿದ್ದಾರೆ ಎಂದು ಹೇಳಿದರು.
ಎತ್ತಿನಹೊಳೆ ಸದಾನಂದ ಗೌಡರ ಅನ್ಯಾಯ
ಈಗಾಗ್ಲೇ ಬೆಂಗಳೂರು ನಗರ, ಚಿಕ್ಕಬಳ್ಳಾಪುರಕ್ಕೆ ನೀರುಣಿಸಲು ಎತ್ತಿನಹೊಳೆ ಯೋಜನೆ ಮಾಡಿದ್ದೀರಲ್ಲಾ ಎಂಬ ಪ್ರಶ್ನೆಗೆ, ಡಿವಿ ಸದಾನಂದ ಗೌಡ ಇದ್ದಾಗ ತರಾತುರಿಯಲ್ಲಿ ಆ ಯೋಜನೆ ಜಾರಿಗೊಳಿಸಿ ಈ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಆರಂಭಿಸಿದ್ದನ್ನು ಅನಿವಾರ್ಯ ಆಗಿ ಕಾಂಗ್ರೆಸ್ ಸರಕಾರವೂ ಮುಂದುವರಿಸಿತ್ತು. ಆಗ ವಿರೋಧಿಸಿ ಪ್ರತಿಭಟನೆ ನಡೆಸಿದವರು ಈಗ ಅಧಿಕಾರದಲ್ಲಿದ್ದು ಮತ್ತೆ ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಯಾಕೆ ಈಗ ಅವರು ಅನುದಾನ ಕಡಿತ ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು. ಯಾವುದೇ ಸರಕಾರ ಒಂದು ಯೋಜನೆ ಆರಂಭಿಸಿದರೆ ಆನಂತರದ ಸರಕಾರ ಅದನ್ನು ನಿಲ್ಲಿಸಲು ಬರುವುದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂತೋಷ್ ಶೆಟ್ಟಿ, ಶುಭೋದಯ ಆಳ್ವ, ಚಿತ್ತರಂಜನ್, ಫಾರೂಕ್ ಉಪಸ್ಥಿತರಿದ್ದರು.
Bjp government is making public panic in the name of Omicron slams MLA UT Khader in Mangalore during a press meet held at congress office.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm