ಬ್ರೇಕಿಂಗ್ ನ್ಯೂಸ್
06-01-22 03:48 pm Mangalore Correspondent ಕರಾವಳಿ
ಮಂಗಳೂರು, ಜ.6 : ಓಮಿಕ್ರಾನ್ ಹೆಸರಲ್ಲಿ ರಾಜ್ಯ ಸರಕಾರ ವೀಕೆಂಡಲ್ಲಿ ಎರಡು ದಿನ ಕರ್ಫ್ಯೂ ವಿಧಿಸಿದೆ. ಅದರಂತೆ, ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ ವರೆಗೆ ಕರ್ಫ್ಯೂ ಇದ್ದು, ಜನರು ಹೊರಗೆ ಓಡಾಡುವಂತಿಲ್ಲ ಎಂದು ರಾಜ್ಯ ಸರಕಾರ ಸೂಚನೆ ನೀಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ, ವೀಕೆಂಡ್ ಕರ್ಫ್ಯೂ ಇದ್ದರೂ ಬಸ್, ಸಾರಿಗೆ ವಾಹನಗಳು ಓಡಾಡಬಹುದು. ಅಗತ್ಯ ಸಾಮಗ್ರಿಗಳ ಅಂಗಡಿಯನ್ನು ತೆರೆದಿಡಬಹುದು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ರಾಜೇಂದ್ರ, ಸಾರ್ವಜನಿಕರ ತುರ್ತು ಓಡಾಟಕ್ಕೆ ಅವಕಾಶ ನೀಡುವ ಸಲುವಾಗಿ ಸಾರಿಗೆ ವಾಹನಗಳ ಸಂಚಾರಕ್ಕೆ ಅನುಮತಿ ಇದೆ. ಅಗತ್ಯ ಸಾಮಗ್ರಿಗಳ ಅಂಗಡಿ, ವ್ಯಾಪಾರ ಸಂಸ್ಥೆಗಳನ್ನೂ ತೆರೆದಿಡಲು ಅವಕಾಶ ಇದೆ. ಸಾರ್ವಜನಿಕರು ತಮ್ಮ ಮನೆಯ ಬಳಿಯಲ್ಲೇ ಆದಷ್ಟು ಅಂಗಡಿಗೆ ತೆರಳಬೇಕು. ಆಮೂಲಕ ಸಾರ್ವಜನಿಕ ಸಂಚಾರಕ್ಕೆ ನಿಯಂತ್ರಣ ಹೇರಿ, ವೈರಸ್ ಹರಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ವೀಕೆಂಡಲ್ಲಿ ಶಾಲೆ, ಕಾಲೇಜುಗಳಿಗೆ ಶಿಕ್ಷಣ ಸಂಸ್ಥೆಗಳು ರಜೆ ನೀಡಬೇಕು. ಪರೀಕ್ಷೆ ನಡೆಯುತ್ತಿದ್ದರೆ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೇಟ್ ತೋರಿಸಿ ಸಂಚಾರ ನಡೆಸಬಹುದು. ಈಗಾಗ್ಲೇ ನಿಗದಿಯಾಗಿರುವ ಮದುವೆ ಇನ್ನಿತರ ಸಮಾರಂಭಗಳಿಗೆ ಅವಕಾಶ ಇರುತ್ತದೆ. ಆದರೆ ಸರಕಾರದ ಮಾರ್ಗಸೂಚಿಯಂತೆ 200 ಜನರಿಗೆ ಸೀಮಿತಗೊಳಿಸಬೇಕು ಎಂದಿದ್ದಾರೆ. ಅಲ್ಲದೆ, ಜನರು ಸ್ವಯಂಪ್ರೇರಿತರಾಗಿ ಕೋವಿಡ್ ವೈರಸ್ ಹರಡದಂತೆ ಜಾಗ್ರತೆ ವಹಿಸಬೇಕು. ಜನರು ಸ್ವಯಂ ಜಾಗೃತಿಯ ಮೂಲಕ ಲಾಕ್ಡೌನ್ ರೀತಿಯ ನಿರ್ಬಂಧ ಎದುರಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಟಾಚಾರಕ್ಕೆ ವೀಕೆಂಡ್ ಕರ್ಫ್ಯೂ
ವೀಕೆಂಡ್ ಕರ್ಫ್ಯೂ ವಿಧಿಸಿ ಜನರ ಸಂಚಾರವನ್ನು ಎರಡು ದಿನ ನಿರ್ಬಂಧಿಸುವ ಉದ್ದೇಶ ರಾಜ್ಯ ಸರಕಾರದ್ದಾಗಿದ್ದರೂ, ಜಿಲ್ಲಾಡಳಿತ ಜನರ ಸಂಚಾರಕ್ಕೆ ಸಾರಿಗೆ ವಾಹನಗಳಿಗೆ ಅವಕಾಶ ಕೊಟ್ಟು ಅಂಗಡಿಗಳನ್ನು ತೆರೆದಿಟ್ಟು ಕಾಟಾಚಾರಕ್ಕೆ ವೀಕೆಂಡ್ ಕರ್ಫ್ಯೂ ವಿಧಿಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಸರಕಾರಿ ಕಚೇರಿಯನ್ನು ತೆರೆದಿಟ್ಟು ಜನರ ಓಡಾಟಕ್ಕೆ ಅವಕಾಶ ನೀಡುವುದಾದರೆ, ಖಾಸಗಿ ಕಚೇರಿ, ವ್ಯಾಪಾರ ಸಂಸ್ಥೆಗಳನ್ನು ಮಾತ್ರ ನಿರ್ಬಂಧಿಸಿದ ಮಾತ್ರಕ್ಕೆ ವೈರಸ್ ಹರಡುವುದಕ್ಕೆ ಬ್ರೇಕ್ ಬೀಳುತ್ತಾ ಅನ್ನುವ ಪ್ರಶ್ನೆಗೆ ಉತ್ತರ ಇಲ್ಲ.
Private buses and stores opened in Mangalore weekend Curfew states DC Rajendra. As per the new guidelines, a weekend curfew will be implemented in the state from Friday 10:00 pm to Monday 5:00 am for the next two weeks.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm