ಬ್ರೇಕಿಂಗ್ ನ್ಯೂಸ್
25-04-22 10:29 am Mangalore Correspondent ಕರಾವಳಿ
ಮಂಗಳೂರು, ಎ.25: ಕೈಗೊಂದು ಕಾಲಿಗೊಂದು ಆಳು, ತಿಂದುಂಡು ಮಲಗಿದರೂ ಕರಗದಷ್ಟು ಆಸ್ತಿ ಇದ್ದರೂ, ಕೆಲವರು ಪುಕ್ಕಟೆ ದಾನವಂತೂ ಕೊಡುವುದಿಲ್ಲ. ಕೈಯಲ್ಲಿ ಸಾಕಷ್ಟು ಹಣ ಇದ್ದರೂ, ಖರ್ಚು ಮಾಡದೆ ಕೂಡಿಡುವ ಮಂದಿಯೇ ಹೆಚ್ಚು. ಅಂಥದರಲ್ಲಿ ಇಲ್ಲೊಬ್ಬರು ಅಜ್ಜಿ ಬೇಡಿ ಗಳಿಸಿದ ದುಡ್ಡನ್ನೇ ಕೂಡಿಟ್ಟು ದೇವಸ್ಥಾನಗಳಿಗೆ ಹಂಚುತ್ತಿದ್ದಾರೆ. ಭಕ್ತರ ಅನ್ನದಾನಕ್ಕೆಂದು ತನ್ನ ಹೆಸರಲ್ಲಿ ಲಕ್ಷಾಂತರ ದುಡ್ಡನ್ನು ದೇವರಿಗೆ ಅರ್ಪಿಸುತ್ತಿದ್ದಾರೆ.
ಹೌದು.. ಈಕೆಯ ಹೆಸರು ಅಶ್ವತ್ಥಮ್ಮ. ವಯಸ್ಸು 80 ಕಳೆದರೂ, ಯಾವುದೇ ಕಾಯಿಲೆ ಸಮಸ್ಯೆ ಇಲ್ಲದೆ ಸದಾ ದೇವರ ಧ್ಯಾನ ಮಾಡುತ್ತಾ ದೇವಸ್ಥಾನದ ಬಾಗಿಲಲ್ಲಿ ಕುಳಿತುಕೊಳ್ಳುತ್ತಾರೆ. ಭಕ್ತರು ನೀಡುವ ಅಷ್ಟಿಷ್ಟು ಹಣವನ್ನು ಜೋಪಾನವಾಗಿ ತೆಗೆದಿಟ್ಟು ಎಲ್ಲಿಗೋ ಯಾತ್ರೆಗೆ ಹೋಗುವಾಗ ದೇವಸ್ಥಾನಕ್ಕೆ ಕೊಡುತ್ತಾರೆ. ಸದ್ಯ ಮಂಗಳೂರು ಹೊರವಲಯದ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಈ ಅಜ್ಜಿ ಅದೇ ದೇವಸ್ಥಾನಕ್ಕೆ ಒಂದು ಲಕ್ಷ ರೂ. ಅನ್ನದಾನದ ದೇಣಿಕೆ ಕೊಟ್ಟು ಸುದ್ದಿಯಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪದ ಕಂಚುಗೋಡು ನಿವಾಸಿಯಾಗಿರುವ ಅಶ್ವತ್ಥಮ್ಮ ಕರಾವಳಿಯಲ್ಲಿ ಜಾತ್ರೆ, ವಿಶೇಷ ದಿನಗಳಲ್ಲಿ ಜನ ಸೇರುವ ದೇವಸ್ಥಾನಗಳಿಗೆ ತೆರಳುತ್ತಾರೆ. ಎರಡು ವರ್ಷಗಳ ಹಿಂದೆ ಸಾಲಿಗ್ರಾಮ ದೇವಸ್ಥಾನಕ್ಕೆ ಒಂದು ಲಕ್ಷ ದೇಣಿಗೆ ಕೊಟ್ಟಿದ್ದರು. ಕಂಚುಗೋಡು ದೇವಸ್ಥಾನಕ್ಕೂ ಒಂದು ಲಕ್ಷ ನೀಡಿದ್ದಾರೆ. ಅಯ್ಯಪ್ಪ ಸ್ವಾಮಿಯ ಭಕ್ತೆಯಾಗಿರುವ ಈ ಅಜ್ಜಿ ಶಬರಿಮಲೆಗೆ ಯಾತ್ರೆಗೆ ಹೋಗಿದ್ದಾಗ ಪಂಪಾ, ಎರುಮಲೆಯಲ್ಲೂ ತಲಾ 50 ಸಾವಿರದಂತೆ ದೇಣಿಗೆ ನೀಡಿದ್ದಾರೆ. ಪೊಳಲಿ ದೇವಸ್ಥಾನಕ್ಕೆ ಈ ಹಿಂದೆ ಜೀರ್ಣೋದ್ಧಾರ ಸಂದರ್ಭದಲ್ಲಿ ಒಂದೂವರೆ ಲಕ್ಷ ದೇಣಿಗೆ ನೀಡಿದ್ದರು. ಈವರೆಗೆ ಏಳು ದೇವಸ್ಥಾನಗಳಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿದ್ದು ಒಟ್ಟು 9 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ದೇವರ ಹೆಸರಲ್ಲಿ ಅರ್ಪಿಸಿದ್ದಾರೆ.
ಇವರ ತಂದೆ ಆಂಧ್ರದವರು, ತಾಯಿ ಮೈಸೂರಿನವರಂತೆ. ಗಂಡ ಗಂಗೊಳ್ಳಿಯವರು. ಈ ಹಿಂದೆ ಆಂಧ್ರ ಗಡಿಭಾಗದಲ್ಲಿ ಮಹಾತ್ಮ ಹೆಸರಿನ ನಾಟಕ ಮಂಡಳಿಯಲ್ಲಿ ಇವರು ಗಂಡ -ಹೆಂಡತಿ ನಾಟಕ ಕಲಾವಿದರಾಗಿದ್ದರು. ತೆಲುಗು ಮತ್ತು ಕನ್ನಡದಲ್ಲಿ ನಾಟಕ ಮಾಡುತ್ತಿದ್ದರಂತೆ. ನಾಟಕ ತಂಡ ಬಿಟ್ಟ ಬಳಿಕ ಗಂಡನ ಜೊತೆಗೆ ಕಂಚುಗೋಡುವಿನಲ್ಲಿ ನೆಲೆಸಿದ್ದರು. ಮೂವರು ಮಕ್ಕಳಿದ್ದು, ಇಬ್ಬರು ಗಂಡು, ಒಬ್ಬಳು ಹೆಣ್ಣು ಮಗಳಿದ್ದಳಂತೆ. ಗಂಡ ಮತ್ತು ಮಕ್ಕಳು ವಿವಿಧ ಕಾರಣಕ್ಕೆ ತೀರಿಕೊಂಡಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಊರೂರು ಅಲೆಯುತ್ತಾ ಭಿಕ್ಷೆ ಬೀಡುವುದನ್ನೇ ವೃತ್ತಿಯಾಗಿಸಿದ್ದರು. ದೇವಸ್ಥಾನಗಳಲ್ಲಿ ಭಿಕ್ಷೆಗೆ ಕುಳಿತರೆ ಮಧ್ಯಾಹ್ನದ ಊಟ ದೇವಸ್ಥಾನದಲ್ಲಿ ಸಿಗುತ್ತದೆ. ಉಳಿದಂತೆ, ಬೇರೆ ಯಾವುದೇ ಖರ್ಚು ಮಾಡದೆ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವುದನ್ನು ವೃದ್ಧೆ ಅಭ್ಯಾಸ ಮಾಡಿದ್ದಾರೆ.
ಪೊಳಲಿ ದೇವಸ್ಥಾನಕ್ಕೆ ಪ್ರತಿವರ್ಷ ಬೇಸಗೆ ಸೀಸನಲ್ಲಿ ಬಂದು ಎರಡು-ಮೂರು ತಿಂಗಳು ಇರುತ್ತಾರೆ. ಅಲ್ಲಿ ಇದ್ದುಕೊಳ್ಳುವಾಗ ದಿನವಹಿ ಸಂಗ್ರಹವಾದ ದುಡ್ಡನ್ನು ದೇವಸ್ಥಾನದ ಮುಂದಿರುವ ಶ್ರೀ ವಿಲಾಸ ಹೊಟೇಲಿನ ಮಾಲಕ ವೆಂಕಟೇಶ್ ನಾವಡ ಅವರಲ್ಲಿ ಕೊಡುತ್ತಾರೆ. ಅವರು ಪ್ರತಿದಿನ ದುಡ್ಡನ್ನು ಪಡೆದು ಲೆಕ್ಕ ಮಾಡಿ ಇಟ್ಟುಕೊಳ್ಳುತ್ತಿದ್ದರು. ಅಜ್ಜಿ ಇಲ್ಲಿಂದ ಮರಳುವಾಗ ಹಣವನ್ನು ಮರಳಿ ಪಡೆದು ಹಿಂತಿರುಗುತ್ತಿದ್ದರು. ಹಣವನ್ನು ಗಂಟು ಕಟ್ಟಿ ಏನಾಗಬೇಕು, ದೇವರು ಕೊಟ್ಟದ್ದನ್ನು ದೇವರಿಗೇ ಮರಳಿಸುತ್ತಿದ್ದೇನೆ ಎನ್ನುತ್ತಾರೆ, ಅಶ್ವತ್ಥಮ್ಮ. ಸದಾ ದೇವರನ್ನು ಸ್ಮರಿಸುತ್ತಾ ಇರುವ ಈ ಅಜ್ಜಿ ಲಕ್ಷಾಧಿಪತಿಯೇ ಆಗಿದ್ದರೂ, ಅದನ್ನು ತೋರಗೊಡದೆ ದೇವರ ನೆಲದಲ್ಲಿ ಕುಳಿತು ಬೇಡುವುದನ್ನೇ ವೃತ್ತಿಯಾಗಿಸಿದ್ದಾರೆ.
An 80-year-old woman, who has been seeking alms at the entrance of temples from devotees in Dakshnina Kannada and Udupi districts, has donated Rs 1 lakh to Kshethra Rajarajeshwari Temple, Polali, located about 20 kilometers from Mangaluru. The octagenarian Ashwathamma, who hails from Kanchagodu village in Kundapur taluk of Udupi district in Karnataka, has been begging near various temples for the past eighteen years after her husband passed away.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm