ಬ್ರೇಕಿಂಗ್ ನ್ಯೂಸ್
10-11-20 07:12 pm Headline Karnataka News Network ಸ್ಪೆಷಲ್ ಕೆಫೆ
ನವದೆಹಲಿ, ನವೆಂಬರ್ 10: ಸಾಮಾನ್ಯವಾಗಿ ಒಂದು ಕಾರನ್ನು ಎಷ್ಟು ವೇಗದಲ್ಲಿ ಓಡಿಸಬಹುದು. ರಸ್ತೆ ಚೆನ್ನಾಗಿದ್ದರೆ ಹೆಚ್ಚೆಂದರೆ ಗಂಟೆಗೆ 150-200 ಕಿಮೀ ವೇಗದಲ್ಲಿ ಓಡಿಸುವವರು ಇದ್ದಾರೆ. ಆದರೆ, ಇಟಲಿಯಲ್ಲಿ 500 ಕಿಮೀ ದೂರವನ್ನು ಕಾರಿನಲ್ಲಿ ಕೇವಲ ಎರಡೇ ಗಂಟೆಯಲ್ಲಿ ತಲುಪುವ ಮೂಲಕ ಅಲ್ಲಿನ ಪೊಲೀಸರು ಜಗತ್ತಿನ ಗಮನ ಸೆಳೆದಿದ್ದಾರೆ.
ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡುವುದಕ್ಕಾಗಿ ಇಟಲಿಯ ಪೊಲೀಸರು ಲ್ಯಾಂಬೋರ್ಗಿನಿ ಹುರಾಕಾನ್ ಕಾರಿನಲ್ಲಿ ಈ ಅತ್ಯಂತ ವೇಗದಲ್ಲಿ ಧಾವಿಸಿದ್ದು ಈಗ ಸುದ್ದಿಯಾಗಿದೆ. 500 ಕಿಮೀ ದೂರದಲ್ಲಿ ದಾನಿ ನೀಡಿದ್ದ ಕಿಡ್ನಿಯನ್ನು ಇನ್ನೊಂದು ಆಸ್ಪತ್ರೆಗೆ ತಲುಪಿಸಲು ಪೊಲೀಸರೇ ಈ ಕಾರನ್ನು ಓಡಿಸಿದ್ದಾರೆ. ಇಂಥ ಸಂದಿಗ್ಧ ಸಮಯದಲ್ಲಿ ಇಟಲಿಯಲ್ಲಿ ಲ್ಯಾಂಬೋರ್ಗಿನಿ ಕಾರನ್ನು ಪೊಲೀಸರೇ ಓಡಿಸುವ ಮೂಲಕ ಸಾಹಸ ಮೆರೆಯುತ್ತಾರೆ. ಆದಷ್ಟು ಬೇಗ ಕಿಡ್ನಿ ತಲುಪಿಸುವುದಕ್ಕಾಗಿ ಗಂಟೆಗೆ 243 ಕಿಮೀ ವೇಗದಲ್ಲಿ ಕಾರು ಚಲಾಯಿಸಿದ್ದು, 500 ಕಿಮೀ ದೂರದ ಗಮ್ಯವನ್ನು ಕೇವಲ ಎರಡೇ ಗಂಟೆಯಲ್ಲಿ ಮುಟ್ಟಿದ್ದಾರೆ.
ಕಿಡ್ನಿ ಕೊಂಡೊಯ್ದು ಒಬ್ಬನ ಪ್ರಾಣ ಉಳಿಸುವುದಕ್ಕಾಗಿ ಕಾರು ಚಲಾಯಿಸಿದ ವಿಡಿಯೋ ಇಟಲಿಯಲ್ಲಿ ವೈರಲ್ ಆಗಿದ್ದು, ಪೊಲೀಸರ ಸಾಹಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ಸಾಧಾರಣವಾಗಿ 500 ಕಿಮೀ ದೂರ ತಲುಪಲು ಇಟಲಿಯ ನುಣ್ಣಗಿನ ರಸ್ತೆಯಲ್ಲಿ ಆರು ಗಂಟೆ ಬೇಕಾಗುವುದಂತೆ. ಆದರೆ, ಲ್ಯಾಂಬೋರ್ಗಿನಿಯ ಶರವೇಗದ ಓಟ ಎರಡೇ ಗಂಟೆಯಲ್ಲಿ ಗುರಿ ತಲುಪಿಸಿತ್ತು. ಪೊಲೀಸ್ ಅಧಿಕಾರಿಗಳೇ ತಮ್ಮ ಸಾಹಸದ ಬಗ್ಗೆ ವಿಡಿಯೋ ಮಾಡಿ ಟ್ವಿಟರಲ್ಲಿ ಹಂಚಿಕೊಂಡಿದ್ದರು.
ಇಟಲಿ ಭಾಷೆಯಲ್ಲಿ ಪೊಲೀಸರು ಹಾಕಿದ್ದ ಟ್ವೀಟ್ ಹೀಗಿತ್ತು. ‘ಥ್ಯಾಂಕ್ಸ್ ಟು ಲ್ಯಾಂಬೋರ್ಗಿನಿ ಹುರಾಕಾನ್.. ಒಂದು ಜೀವ ಉಳಿಸುವುದಕ್ಕಾಗಿ ದಾನಿಯೊಬ್ಬರು ನೀಡಿದ್ದ ಕಿಡ್ನಿಯನ್ನು ಸಕಾಲಕ್ಕೆ ಮುಟ್ಟಿಸಿದ್ದೇವೆ. ಒಂದು ಜೀವ ಉಳಿಸಲು ಸೂಪರ್ ಪವರ್ ಆಗಬೇಕಾಗಿಯೇ ಇಲ್ಲ. ದಕ್ಷತೆ, ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು’ ಎಂದಿದ್ದರು.
This Lamborghini helped deliver a kidney for emergency transplant pic.twitter.com/szXD1ieSwq
— Reuters (@Reuters) November 7, 2020
Italy's state police drove a specially-equipped Lamborghini Huracan from Padua to Rome to transport a kidney to a patient in the capital's Gemelli hospital.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm