ಚೀನಾದ 14 ವರ್ಷದ ಹುಡುಗ ವಿಶ್ವದ ಅತೀ ಎತ್ತರದ ಬಾಲಕ!

19-11-20 05:38 pm       Headline Karnataka News Network   ಸ್ಪೆಷಲ್ ಕೆಫೆ

ರೆನ್ 18 ವರ್ಷ ವಯಸ್ಸಿನವರಿಗಿಂತ ಕೆಳಗಿನ ವಿಭಾಗದಲ್ಲಿ ಅತೀ ಎತ್ತರದ ಟೀನೇಜರ್ ಎಂಬ ಗಿನ್ನಿಸ್ ವಿಶ್ವ ದಾಖಲೆಯ ಪುಟದಲ್ಲಿ ಸೇರಿದ್ದಾನೆ. 

ಬೀಜಿಂಗ್, ನವೆಂಬರ್ 19 : ಚೀನಾದ 14 ವರ್ಷದ ಹುಡುಗನೊಬ್ಬ ವಿಶ್ವದ ಅತೀ ಎತ್ತರದ ಬಾಲಕನೆಂಬ ದಾಖಲೆ ಪುಟ ಸೇರಿದ್ದಾನೆ.

ರೆನ್ ಕಿಯು (14) ಎಂಬ ಬಾಲಕ 7 ಅಡಿ ಮತ್ತು ಮೂರು ಇಂಚು ಉದ್ದ ಇದ್ದಾನೆ. ಚೀನಾದ ಸಿಚುವಾನ್ ಪ್ರಾಂತ್ಯದ ಲೆಶನ್ ನಗರದಲ್ಲಿ ಈ ಬಾಲಕ ಜೂನಿಯರ್ ಹೈಸ್ಕೂಲ್ ವಿದ್ಯಾರ್ಥಿ. ರೆನ್ 18 ವರ್ಷ ವಯಸ್ಸಿನವರಿಗಿಂತ ಕೆಳಗಿನ ವಿಭಾಗದಲ್ಲಿ ಅತೀ ಎತ್ತರದ ಟೀನೇಜರ್ ಎಂಬ ಗಿನ್ನಿಸ್ ವಿಶ್ವ ದಾಖಲೆಯ ಪುಟದಲ್ಲಿ ಸೇರಿದ್ದಾನೆ. 

ಇದೇ ದಾಖಲೆ ಹಿಂದೆ ಅಮೆರಿಕದ ಕೆವಿನ್ ಬ್ರಾಡ್‍ಫಾರ್ಡ್ ಎಂಬಾತನ ಹೆಸರಲ್ಲಿತ್ತು. ಆದರೆ ಕೆವಿನ್ ಗಿಂತ ರೆನ್ 5 ಸೆಂ.ಮೀ ಎತ್ತರ ಇದ್ದು ದಾಖಲೆ ಮುರಿದಿದ್ದಾರೆ.

A 14-year-old Chinese boy, Ren Keyu, measuring 7 ft 3.02 in has received the Guinness World Records title for the tallest teenager (male).