ಒಂದೇ ಕೈಯಲ್ಲಿ ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ಎತ್ತುವ ಕಲಿಯುಗದ ಭೀಮ!

09-03-21 09:52 pm       Headline Karnataka News Network   ಸ್ಪೆಷಲ್ ಕೆಫೆ

ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ ಎಂಬ ವ್ಯಕ್ತಿ ಕಲಿಯುಗದ ಭೀಮ ಎನ್ನಬಹುದು. ಇವರ ಇನ್ಸ್​ಟಾಗ್ರಾಂ ಖಾತೆಯನ್ನೊಮ್ಮೆ ನೀವು ನೋಡಬೇಕು..ಅಬ್ಬಾ! ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಖಚಿತ.

ನೀವು ಭೀಮನ ಶಕ್ತಿಯ ಕಥೆಯನ್ನು ಕೇಳಿದ್ದೀರಿ..ಶಕ್ತಿಯ ಕುರಿತು ಬಲ ಭೀಮನ ಎಂಬ ವಿಶೇಷಣವನ್ನೇ ಬಳಸುತ್ತೇವೆ. ದೈತ್ಯದೇಹಿಗಳನ್ನು ಭೀಮಕಾಯ ಎಂದು ಕರೆಯುತ್ತೇವೆ. ಹೌದಪ್ಪಾ ಹೌದು, ಭೀಮನ ಕಥೆ ನಮಗೂ ಗೊತ್ತು. ಆದರೆ ಈಗ ಭೀಮನಂತ ಇರುವವರು ಯಾರು ತಾನೇ ಸಿಗ್ತಾರೆ? ಎಂದು ಕೇಳಿದರೆ ಈ ವ್ಯಕ್ತಿಯೇ ಉತ್ತರ. ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ ಎಂಬ ವ್ಯಕ್ತಿಯನ್ನೇ ಕಲಿಯುಗದ ಭೀಮ ಎನ್ನಬಹುದು. ಇವರ ಇನ್ಸ್​ಟಾಗ್ರಾಂ ಖಾತೆಯನ್ನೊಮ್ಮೆ ನೀವು ನೋಡಬೇಕು..ಅಬ್ಬಾ! ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವುದು ಖಚಿತ.

ಈ ವಿಡಿಯೋದಲ್ಲಿ ಉಕ್ರೇನಿನ ಈ ವ್ಯಕ್ತಿಯ ಭೀಮಬಲವನ್ನು ವೀಕ್ಷಿಸಬಹುದು. 150 ಕೆಜಿ ತೂಕವನ್ನು ಒಂದೇ ಕೈಯಲ್ಲಿ ಎತ್ತುವ ಸಾಮರ್ಥ್ಯ ಈತನಿಗಿದೆ. ಅಲ್ಲದೇ, ಎಮ್ಮೆ, ಕುದುರೆ, ಒಂಟೆಗಳನ್ನು ಸಲೀಸಾಗಿ ತನ್ನ ಹೆಗಲ ಮೇಲೆ ಹೊತ್ತೊಯ್ಯುತ್ತಾನೆ. ಅವರ ಸಾಹಸವನ್ನು ನೋಡಿ ಇತರರು ಬೆಕ್ಕಸಬೆರಗಾಗಿದ್ದಾರಂತೆ.

ಅವರಿಗೆ ಭೀಮ ಎಂದು ಅಭಿದಾನ ಕೊಟ್ರೆ ಯಾರೂ ಚಕಾರ ಎತ್ತುವುದಿಲ್ಲ. ಅಷ್ಟು ಶಕ್ತಿಶಾಲಿ ಉಕ್ರೇನ್ ಮೂಲದ ಡಿಮಿಟ್ರೋ ಖಲಾಝಿ. ಅವರ ಇನ್ಸ್​ಟಾಗ್ರಾಂ ಖಾತೆಯಲ್ಲಿ ಇಂತಹ ವಿಡಿಯೋಗಳು ತುಂಬಿ ತುಳುಕುತ್ತಿವೆ. ಅಲ್ಲದೇ ಅವರಿಗೆ ಇನ್ಸ್​ಟಾಗ್ರಾಂನಲ್ಲಿ 12 ಸಾವಿರಕ್ಕಿಂತಲೂ ಹೆಚ್ಚು ಫಾಲೊವರ್ಸ್​ಗಳಿದ್ದಾರೆ.

ಇಷ್ಟೇ ಅಲ್ಲ. ಈ ಭೀಮನಿಗೆ ಸಾಹಿತ್ಯದಲ್ಲೂ ಆಸಕ್ತಿ ಇದೆಯಂತೆ. ಹಿಂದೆ ಸರ್ಕಸ್​ನಲ್ಲಿ ಕೆಲಸ ಮಾಡಿದ್ದ ಅವರು ಅಥ್ಲೀಟ್​ಗಳ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. ಅಲ್ಲದೇ 2010ರಲ್ಲಿ ಗೋಲ್ಡನ್ ಪೆನ್ ಆಫ್ ರಷ್ಯಾ ಪ್ರಶಸ್ತಿಯೂ ಬಂದಿದೆ.

ಗಿನ್ನಿಸ್ ರೆಕಾರ್ಡನ್ನೂ ಮಾಡಿದ್ದಾರೆ..
ಒಂದಲ್ಲ ಎರಡಲ್ಲ..ಬರೋಬ್ಬರಿ 63 ಗಿನ್ನಿಸ್ ರೆಕಾರ್ಡ್​ಗಳನ್ನು ಇವರು ಮಾಡಿದ್ದಾರೆ. ಈ ಮೂಲಕ ಸಾಧನೆಯ ಪರ್ವತ ಹತ್ತಿದ್ದಾರೆ. 2013ರಲ್ಲಿ ಒಮದು ಚಲನಚಿತ್ರದಲ್ಲಿಯೂ ಇವರು ಅಭಿನಯಿಸಿದ್ದರು.

Blessed with super strength, Dmytro effortlessly lifts a buffalo, and even a horse on the shoulder. He had also lifted camels and other heavy-weight animals on his shoulders.