Ind vs Aus 3rd odi australia won by 21 Runs.

">

ಏಕದಿನ ಸರಣಿ ಕೈ ಚೆಲ್ಲಿದ ರೋಹಿತ್​ ಪಡೆ, ಆಸೀಸ್​ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು

23-03-23 12:23 pm       Source: news18   ಕ್ರೀಡೆ

ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ಕ್ರಿಕೆಟ್ ತಂಡಗಳ ನಡುವೆ ಮೂರನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಆಸೀಸ್​ ವಿರುದ್ಧ ಸೋಲನ್ನಪ್ಪಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಆಸೀಸ್​ 2-1ರಿಂದ ಸರಣಿ ಜಯ ದಾಖಲಿಸಿದೆ.

ಟೀಂ ಇಂಡಿಯಾಗೆ 270 ರನ್​ ಟಾರ್ಗೆಟ್​ ಬೆನ್ನಟ್ಟಿದ ಭಾರತ ತಂಡ 49.1 ಓವರ್​ಗಳಲ್ಲಿ 248 ರನ್​ಗೆ ಆಲೌಟ್​ ಆಗುವ ಮೂಲಕ 21 ರನ್​​ನಿಂದ ಸೋಲನ್ನಪ್ಪಿತು. ಈ ಮೂಲಕ ಆಸೀಸ್​ ವಿರುದ್ಧ ಏಕದಿನ ಸರಣಿ ಕೈಚೆಲ್ಲಿತು. ಭಾರತದ ಪರ ರೋಹಿತ್ ಶರ್ಮಾ 30 ರನ್, ಶುಬ್​ಮನ್ ಗಿಲ್ 37, ವಿರಾಟ್ ಕೊಹ್ಲಿ 54 ರನ್, ಕೆಎಲ್ ರಾಹುಲ್ 32 ರನ್, ಅಕ್ಷರ್ ಪಟೇಲ್ 2 ರನ್, ಹಾರ್ದಿಕ್ ಪಾಂಡ್ಯ 40 ರನ್, ಸೂರ್ಯಕುಮಾರ್ ಯಾದವ್ ಶೂನ್ಯ, ರವೀಂದ್ರ ಜಡೇಜಾ 18 ರನ್, ಕುಲ್​ದೀಪ್ ಯಾದವ್ 6 ರನ್, ಮೊಹಮ್ಮದ್ ಶಮಿ 14 ರನ್ ಮತ್ತು ಮೊಹಮ್ಮದ್ ಸಿರಾಜ್ 3 ರನ್ ಗಳಿಸಿದರು.

ಟೀಂ ಇಂಡಿಯಾ ಸಂಘಟಿತ ಬೌಲಿಂಗ್ ದಾಳಿ:

ಭಾರತ ತಂಡದ ಪರ ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ 3-3 ವಿಕೆಟ್ ಪಡೆದರು. ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದ ಹಾರ್ದಿಕ್ 8 ಓವರ್ ಗಳಲ್ಲಿ 44 ರನ್ ನೀಡಿ ಈ ಮೂರು ವಿಕೆಟ್ ಕಬಳಿಸಿದರು. ಕುಲದೀಪ್ 10 ಓವರ್ ಗಳಲ್ಲಿ 56 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ 2-2 ವಿಕೆಟ್​ ಪಡೆದು ಮಿಂಚಿದರು.

India implode as Australia take ODI series 2-1 with 21 run-win | Sports  News,The Indian Express

ಸ್ಪರ್ಧಾತ್ಮಕ ಟಾರ್ಗೆಟ್​ ನೀಡಿದ್ದ ಆಸೀಸ್​:

ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ ತಂಡ 49 ಓವರ್​ಗಳಿಗೆ 10 ವಿಕೆಟ್​ ನಷ್ಟಕ್ಕೆ 269 ರನ್​ ಗಳಿಸುವ ಮೂಲಕ ಭಾರತಕ್ಕೆ ಉತ್ತಮ ಮೊತ್ತದ ಟಾರ್ಗೆಟ್​ ನೀಡಿತ್ತು. ಆಸೀಸ್​ ಪರ, ಡೇವಿಡ್ ವಾರ್ನರ್ 23 ರನ್, ಟ್ರಾವಿಸ್ ಹೆಡ್ 33 ರನ್, ಮಿಚೆಲ್ ಮಾರ್ಷ್ 47 ರನ್, ಸ್ಟೀವ್ ಸ್ಮಿತ್ ಶೂನ್ಯ, ಮಾರ್ನಸ್ ಲಬುಶೇನ್ 28 ರನ್, ಅಲೆಕ್ಸ್ ಕ್ಯಾರಿ 38 ರನ್, ಮಾರ್ಕಸ್ ಸ್ಟೊಯಿನಿಸ್ 25 ರನ್, ಆಷ್ಟನ್ ಅಗರ್ 17 ರನ್, ಸೀನ್ ಅಬಾಟ್ 26 ರನ್, ಮಿಚೆಲ್ ಸ್ಟಾರ್ಕ್ 10 ರನ್ ಮತ್ತು ಆಡಮ್ ಝಂಪಾ 10 ರನ್​ ಗಳಿಸಿದರು.

ಭಾರತ - ಆಸ್ಟ್ರೇಲಿಯಾ ಪ್ಲೇಯಿಂಗ್​ 11:

ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ

ಆಸ್ಟ್ರೇಲಿಯಾ ಪ್ಲೇಯಿಂಗ್​ 11: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯಿನಿಸ್, ಆಷ್ಟನ್ ಅಗರ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ.

Ind vs Aus 3rd odi australia won by 21 Runs.