ಬ್ರೇಕಿಂಗ್ ನ್ಯೂಸ್
30-08-23 01:18 pm Source: News18 Kannada ಕ್ರೀಡೆ
ಏಷ್ಯಾ ಕಪ್ 2023 ಆಗಸ್ಟ್ 30 ರಿಂದ ಆರಂಭವಾಗಲಿದೆ. ಪ್ರತಿಷ್ಠಿತ ಟೂರ್ನಿಯ ಮೊದಲ ಪಂದ್ಯ ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಉಭಯ ತಂಡಗಳ ನಡುವಿನ ಉದ್ಘಾಟನಾ ಪಂದ್ಯಕ್ಕೆ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಲಿದೆ. ಈ ಬಾರಿ ತವರಿನಲ್ಲಿ ಟೂರ್ನಿ ನಡೆದರೂ ಶ್ರೀಲಂಕಾ ತಂಡದ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗುವ ಸಾಧ್ಯತೆಯಿದೆ. ಕಾರಣ, ಟೂರ್ನಿ ಆರಂಭಕ್ಕೂ ಮುನ್ನವೇ ತಂಡದ ನಾಲ್ವರು ದೊಡ್ಡ ಆಟಗಾರರು ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ.
ಬ್ಯಾಟ್ ಮತ್ತು ಬಾಲ್ನಲ್ಲಿ ವಿಧ್ವಂಸಕ ಪ್ರದರ್ಶನ ತೋರಬಲ್ಲ ವನಿಂದು ಹಸರಂಗ 2023 ರ ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿಲ್ಲ. ಗಾಯಗೊಂಡಿರುವ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹಸರಂಗ ಶ್ರೀಲಂಕಾ ಪರ ಇದುವರೆಗೆ ಒಟ್ಟು 110 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 98 ಇನ್ನಿಂಗ್ಸ್‌ಗಳಲ್ಲಿ 1561 ರನ್ , ಬೌಲಿಂಗ್ನಲ್ಲಿ 110 ಇನ್ನಿಂಗ್ಸ್‌ಗಳಲ್ಲಿ 162 ವಿಕೆಟ್ ಪಡೆದಿದ್ದರು. ಹಸರಂಗ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ಆಡುತ್ತಾರೆ.
2023 ರ ಏಷ್ಯಾ ಕಪ್‌ನಿಂದ ಹೊರಗುಳಿದ ಶ್ರೀಲಂಕಾದ ಎರಡನೇ ಆಟಗಾರ ವೇಗದ ಬೌಲರ್ ದುಷ್ಮಂತ ಚಮೀರಾ. ಚಮೀರಾ ಶ್ರೀಲಂಕಾ ಪರ ಇದುವರೆಗೆ ಒಟ್ಟು 108 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 116 ಇನ್ನಿಂಗ್ಸ್‌ಗಳಲ್ಲಿ 134 ಯಶಸ್ಸನ್ನು ಗಳಿಸಿದ್ದಾರೆ. ದಿಲ್ಶನ್ ಮಧುಶಂಕ ಅವರು ಏಷ್ಯಾ ಕಪ್ 2023 ರಿಂದ ಹೊರಗುಳಿದ ಮೂರನೇ ಶ್ರೀಲಂಕಾ ಆಟಗಾರರಾಗಿದ್ದಾರೆ. ಮಧುಶಂಕ ಶ್ರೀಲಂಕಾ ಪರ ಇದುವರೆಗೆ ಒಟ್ಟು 18 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 18 ಇನ್ನಿಂಗ್ಸ್‌ಗಳಲ್ಲಿ 22 ವಿಕೆಟ್ ಪಡೆದಿದ್ದಾರೆ.
ಮತ್ತೊಬ್ಬ ವೇಗಿ ಲಹಿರು ಕುಮಾರ ಕೂಡ ಗಾಯದ ಕಾರಣ ಏಷ್ಯಾ ಕಪ್ 2023 ನಿಂದ ಹೊರಗುಳಿದಿದ್ದಾರೆ. ಕುಮಾರ ಶ್ರೀಲಂಕಾ ಪರ 78 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು 93 ಇನ್ನಿಂಗ್ಸ್‌ಗಳಲ್ಲಿ 141 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾ ತಂಡ ಆರು ಬಾರಿ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದೆ. ಶ್ರೀಲಂಕಾ 1986 ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ನಂತರ, ಅವರು 1997, 2004, 2008, 2014 ಮತ್ತು 2022 ರಲ್ಲೂ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಶ್ರೀಲಂಕಾ ತಂಡ ಆರು ಬಾರಿ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದೆ. ಶ್ರೀಲಂಕಾ 1986 ರಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರ ನಂತರ, ಅವರು 1997, 2004, 2008, 2014 ಮತ್ತು 2022 ರಲ್ಲೂ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
4 Key Players of Sri Lanka Team Including Hasaranga Name Asia Cup Squad Out of the Tournament.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm