ಸೈಬರ್ ಕಳ್ಳರ ಹೊಸ ಟ್ರೆಂಡ್ ; ವಿಡಿಯೋ ಬ್ಲಾಕ್ಮೇಲ್ ದಂಧೆಗೆ ಮಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾರೆ ಪ್ರಭಾವಿಗಳು!  

22-06-22 09:50 pm       Mangalore Correspondent   ಕ್ರೈಂ

ಸೈಬರ್ ಕಳ್ಳರು ಹಣ ಕಸಿಯೋದಕ್ಕೆ ಏನೆಲ್ಲಾ ಹಕೀಮತ್ತು ಮಾಡ್ತಾರೆ ಅನ್ನೋದನ್ನು ನಾವು ಊಹಿಸೋದಕ್ಕೂ ಆಗಲ್ಲ. ಯಾಕಂದ್ರೆ, ಅವರೆಲ್ಲ ಎಲ್ಲೋ ದೂರದಲ್ಲಿ ಕುಳಿತು ದಿನಕ್ಕೊಂದು ಬಗೆಯಲ್ಲಿ ಜನರನ್ನು ದೋಚುವುದನ್ನೇ ವೃತ್ತಿಯಾಗಿಸ್ಕೊಂಡಿದ್ದಾರೆ.

ಮಂಗಳೂರು, ಜೂನ್ 22: ಸೈಬರ್ ಕಳ್ಳರು ಹಣ ಕಸಿಯೋದಕ್ಕೆ ಏನೆಲ್ಲಾ ಹಕೀಮತ್ತು ಮಾಡ್ತಾರೆ ಅನ್ನೋದನ್ನು ನಾವು ಊಹಿಸೋದಕ್ಕೂ ಆಗಲ್ಲ. ಯಾಕಂದ್ರೆ, ಅವರೆಲ್ಲ ಎಲ್ಲೋ ದೂರದಲ್ಲಿ ಕುಳಿತು ದಿನಕ್ಕೊಂದು ಬಗೆಯಲ್ಲಿ ಜನರನ್ನು ದೋಚುವುದನ್ನೇ ವೃತ್ತಿಯಾಗಿಸ್ಕೊಂಡಿದ್ದಾರೆ. ಹೊಸ ಸುದ್ದಿ ಏನಪ್ಪಾಂದ್ರೆ, ಸೆಕ್ಸ್ ಟೋರ್ಶನ್ ಅನ್ನುವ ಹೊಸ ಕಾನ್ಸೆಪ್ಟನ್ನು ಸೈಬರ್ ಕಿರಾತಕರು ಫೀಲ್ಡಿಗೆ ಇಳಿಸಿದ್ದಾರಂತೆ.

ಮಂಗಳೂರು ನಗರದಲ್ಲಿ ಈ sextortion ಎನ್ನುವ ಹೊಸ ಟ್ರೆಂಡಿಗೆ ಹಲವರು ಬಲಿಯಾಗಿದ್ದಾರೆ ಅನ್ನುವ ಮಾಹಿತಿಯೂ ಹೊರಬಿದ್ದಿದೆ. ಅಷ್ಟೇ ಅಲ್ಲ, ಈ ರೀತಿ ಸೈಬರ್ ಕಳ್ಳರ ಕರಾಮತ್ತಿಗೆ ಬಲಿಯಾಗಿರುವ ಮಂದಿ ಹೈಲೀ ಎಜುಕೇಟೆಡ್ ಅನ್ನೋದು ಗಮನಾರ್ಹ. ವೈದ್ಯರು, ಅಧಿಕಾರಿಗಳು ಅನ್ನುವ ಸಮಾಜದ ಮುಖ್ಯ ವಾಹಿನಿಯಲ್ಲಿ ಮುಂಚೂಣಿಯಲ್ಲಿರುವ ಮಂದಿಯೇ ಸೈಬರ್ ಕಳ್ಳರ ಜಾಲಕ್ಕೆ ಬಲಿಯಾಗಿದ್ದಾರಂತೆ. ಈ ಬಗ್ಗೆ ಸೈಬರ್ ಎಕ್ಸ್ ಪರ್ಟ್ ಅನಂತ ಪ್ರಭು ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.

Investigation of Facebook related crimes. : Cyber Crime Awareness Society

ಅಷ್ಟಕ್ಕೂ ಈ ಹೊಸ ಟ್ರೆಂಡ್ ಏನು ?

ಸಾಮಾನ್ಯವಾಗಿ ಈ ರೀತಿಯ ಆಫರ್ ಕನೆಕ್ಟ್ ಆಗೋದು ಫೇಸ್ಬುಕ್ ಜಾಲದ ಮೂಲಕ. ಪರಿಚಿತ ಅನ್ನುವ ರೀತಿಯ ಸ್ಥಳೀಯ ಸರ್ ನೇಮ್ ಇಟ್ಕೊಂಡಿರುವ ಹುಡುಗಿ ಅಥವಾ ಹುಡುಗನ ಹೆಸರಲ್ಲಿ ಫ್ರೆಂಡ್ ರಿಕ್ವೆಸ್ಟ್ ಬರುತ್ತೆ. ನಾಯಕ್, ಶೆಟ್ಟಿ, ಪೈ ಹೀಗೆ ಸ್ಥಳೀಯರೋ ಅನ್ನುವಂತೆ ಸರ್ ನೇಮ್ ಇಟ್ಕೊಂಡಿರುವುದು, ಅವರ ಜೊತೆ ನಮ್ಮ ಸ್ನೇಹಿತರೇ ಫ್ರೆಂಡ್ ಆಗಿರುವಂತೆ ತೋರಿಸುವುದು ಹೊಸ ಟ್ರೆಂಡ್. ಹಾಗಾಗಿ ನಾವು ಹೆಚ್ಚು ತಲೆ ಕೆಡಿಸಿಕೊಳ್ಳದೆ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸುತ್ತೇವೆ. ಆದರೆ, ನಕಲಿಯಾಗಿರುವ ಈ ಫ್ರೆಂಡ್ ಕೆಲವೇ ದಿನಗಳಲ್ಲಿ ಒಡನಾಟ ಶುರು ಹಚ್ಚಿಕೊಂಡು ಮೊಬೈಲ್ ನಂಬರ್ ಪಡೆದು ಚಾಟಿಂಗ್ ಆರಂಭಿಸುತ್ತಾರೆ.

ಕೆಲವೊಮ್ಮೆ ಫೇಸ್ಬುಕ್ ಮೆಸೆಂಜರ್ ಮೂಲಕವೇ ನಂಬರ್ ಪಡೆದು ಡೈರೆಕ್ಟ್ ಆಗಿ ವಿಡಿಯೋ ಕರೆ ಮಾಡುತ್ತಾರೆ. ಅದಕ್ಕೂ ಮೊದಲೇ ಸ್ನೇಹದ ಮಾತುಗಳ ಬಲೆಗೆ ಬಿದ್ದವರು ಸ್ವಇಚ್ಚೆಯಿಂದಲೇ ವಿಡಿಯೋ ಕರೆ ಸ್ವೀಕರಿಸಿದರೆ, ಇನ್ನು ಕೆಲವರು ತಮಗೆ ಗೊತ್ತೇ ಇಲ್ಲದ ರೀತಿ ವಿಡಿಯೋ ಕರೆ ಸ್ವೀಕರಿಸಿರುತ್ತಾರೆ. ಆದರೆ ಈ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡುವ ಆ ಕಡೆಯವರು ಆನಂತರ ನಮ್ಮ ಅಷ್ಟೂ ಫೇಸ್ಬುಕ್ ಫ್ರೆಂಡ್ಸ್ ಸಂಪರ್ಕವನ್ನು ಜೊತೆಗಿಟ್ಟುಕೊಂಡು ವಿಡಿಯೋ ಅವರಿಗೆ ಕಳಿಸಿರುತ್ತಾರೆ.

Beware! There's a new scam in town and this one involves video calls

ಬೆತ್ತಲೆ ಇಲ್ಲದಿದ್ದರೂ, ಬೆತ್ತಲೆ ಮಾಡುತ್ತಾರೆ !

ಬೆತ್ತಲೆ ವಿಡಿಯೋ ಇಲ್ಲದಿದ್ದರೂ, ಆ ರೀತಿ ಎಡಿಟ್ ಮಾಡಿ ನಮ್ಮನ್ನು ಬತ್ತಲೆಯಾಗಿಸುವುದು ಇವರಿಗೆ ಕರತಲಾಮಲಕ. ಒಮ್ಮೆಗೆ ಆ ವಿಡಿಯೋವನ್ನು ಯಾವುದೋ ನಂಬರಿನಿಂದ ನಮಗೇ ಕಳುಹಿಸಿ, ಹಣದ ಬೇಡಿಕೆ ಇಡುತ್ತಾರೆ. ಆನಂತರ, ಫ್ರೆಂಡ್ಸ್ ನಂಬರಿಗೆ ವಿಡಿಯೋ ಕಳಿಸಿರುವ ಸ್ಕ್ರೀನ್ ಶಾಟ್ ಕಳುಹಿಸಿ ನಮ್ಮನ್ನು ಯಾಮಾರಿಸುತ್ತಾರೆ. ಮೊದಲಿಗೆ 5 ಸಾವಿರ. ಹತ್ತು ಸಾವಿರ ಹೀಗೆ ಬೇಡಿಕೆ ಇಡುವ ಮಂದಿ ನಾವು ಹಣ ಕೊಡುತ್ತಾ ಹೋದಂತೆ ಕುತ್ತಿಗೆ ಹಿಡಿದುಕೊಳ್ಳುತ್ತಾರೆ. ಇದೊಂಥರಾ ಎಲ್ಲ ಗೊತ್ತಿದ್ದೂ ನಮಗೇ ತಿಳಿಯದ ರೀತಿ ಖೆಡ್ಡಾಕ್ಕೆ ಬೀಳೋ ಆಟ.  

ಇದು ಹಳೆಯ ಚಾಳಿಯೇ ಆಗಿದ್ದರೂ, ಹೊಸ ರೀತಿ ನಮ್ಮನ್ನು ಬಲೆಗೆ ಬೀಳಿಸುತ್ತಿದ್ದಾರೆ. ಅದಕ್ಕಾಗಿ ಮತ್ತೊಂದಷ್ಟು ಮಾಡರ್ನ್ ಟೆಕ್ನಾಲಜಿಯನ್ನು ಬಳಸ್ಕೊಂಡಿದ್ದಾರೆ. ಡೈರೆಕ್ಟಾಗಿ ವಿಡಿಯೋ ಕರೆ ಮಾಡುವುದು, ಯಾರು, ಏನು ಅನ್ನೋದು ತಿಳಿಯುವ ಮೊದಲೇ ರೆಕಾರ್ಡ್ ಮಾಡಿಕೊಂಡು ಆನಂತರ ವಿಡಿಯೋ ಎಡಿಟ್ ಮಾಡಿ ಬಲೆಗೆ ಬೀಳಿಸೋದು ಹೊಸ ಚಾಳಿಯಾಗಿದೆ. ಲೋನ್ ಏಪ್ಸ್ ನಲ್ಲಿಯೂ ನಮ್ಮ ಹಣದ ಅಗತ್ಯವನ್ನು ಮನಗಂಡು ಸುಲಭದಲ್ಲಿ ಹಣ ಕೊಟ್ಟು ಆನಂತರ, ಮೊಬೈಲಿನಲ್ಲಿಯೇ ನಮ್ಮ ಫ್ರೆಂಡ್ಸ್ ನಂಬರ್ ಪಡೆದು ಶೋಷಣೆ ನಡೆಸುತ್ತಾರೆ.

ಇದಕ್ಕಾಗಿ ಅನಂತ ಪ್ರಭು ಹೇಳೋದು ಏನಂದ್ರೆ, ಗುರುತು ಪರಿಚಯ ಇಲ್ಲದವರು ವಿಡಿಯೋ ಕರೆ ಮಾಡಿದರೆ ಸ್ವೀಕಾರ ಮಾಡಲೇಬಾರದು. ಅಪರಿಚಿತ ವ್ಯಕ್ತಿಗಳ ಫ್ರೆಂಡ್ ರಿಕ್ವೆಸ್ಟ್ ಇದ್ದರೂ, ತುಂಬ ಜಾಗ್ರತೆ ವಹಿಸಬೇಕು ಅಂತ. ಅಲ್ಲದೆ, ಫೇಸ್ಬುಕ್, ಇನ್ ಸ್ಟಾ ಗ್ರಾಮ್, ಟಿಂಡರ್ ಡೇಟಿಂಗ್ ಏಪ್, ವಾಟ್ಸಾಪ್ ಹೀಗೆ ಜಾಲತಾಣಗಳನ್ನೇ ಬಳಸ್ಕೊಂಡು ಬ್ಲಾಕ್ಮೇಲ್ ಮಾಡುತ್ತಾರೆ. ಕೋವಿಡ್ ಬಳಿಕ ನಿರುದ್ಯೋಗ ಹೆಚ್ಚಳದಿಂದಾಗಿ ಈ ರೀತಿಯ ಮೋಸದ ಜಾಲ ನಡೀತಿದೆ ಎನ್ನುತ್ತಾರೆ. ಮೆಟ್ರೋ ನಗರಗಳನ್ನು ಗುರಿಯಾಗಿಸಿ ಸೈಬರ್ ಕಳ್ಳರು ಈ ರೀತಿಯ ಬಲೆ ಬೀಸಿದ್ದು ಕಂಡುಬಂದಿದೆ. ಆದರೆ ಈ ರೀತಿಯ ವಂಚನೆ ಪ್ರಕರಣಗಳು ಮಂಗಳೂರಿನಲ್ಲಿ ಹಲವು ನಡೆದಿದ್ದರೂ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಮರ್ಯಾದೆಗೆ ಅಂಜಿ ಯಾರು ಕೂಡ ದೂರು ಕೊಡಲು ಹೋಗಿಲ್ಲ ಅಂತಿದ್ದಾರೆ ಪೊಲೀಸರು.

Cyber fraud, Sextortion cases increase in Mangalore says cyber expert Dr Ananth Prabhu, many blackmailed of leaking private videos. Doctors, Government officers trapped by online fraudsters. Threatened of leaking morphed videos online on social media. No cases have been registered so far at the Cyber crime police station in Mangaluru.