ಬ್ರೇಕಿಂಗ್ ನ್ಯೂಸ್
21-02-26 02:22 pm HK News Desk ಕ್ರೈಂ
ಹಾಸನ, ಫೆ.21: ಹಾಸನದಲ್ಲಿ ಮಹಿಳೆ ನಾಪತ್ತೆ ಪ್ರಕರಣವೆಂದು ಭಾರೀ ಸಂಚಲನ ಮೂಡಿಸಿದ್ದ ಘಟನೆಗೆ ಮಹತ್ವದ ತಿರುವು ಪಡೆದುಕೊಂಡಿದೆ. ಗಂಡನ ಬಿಟ್ಟು ಪ್ರಿಯಕರನ ಜೊತೆಗೆ ಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕ, ಸಾಂತ್ವನ ಕೇಂದ್ರದಲ್ಲಿ ನಡೆದ ದೀರ್ಘ ಮಾತುಕತೆಗಳ ನಂತರ ಗಂಡನೊಂದಿಗೆ ಮನೆ ಸೇರಲು ಒಪ್ಪಿಗೆ ನೀಡಿದ್ದಾಳೆ.
ಫೆಬ್ರವರಿ 12ರಂದು ಪ್ರಿಯಾಂಕ ಚಿಕ್ಕಮಗಳೂರಿಗೆ ಸಂಬಂಧಿಕರ ಮದುವೆಗೆ ತೆರಳಿದ್ದಳು. ಬಳಿಕ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದರು. ಫೆಬ್ರವರಿ 14ರಂದು ಹಾಸನದ ಕಲ್ಕೆರೆ ಕೆರೆ ಬಳಿ ಮಹಿಳೆ ಬಟ್ಟೆ, ಚಪ್ಪಲಿ ಮತ್ತು ವ್ಯಾನಿಟಿ ಬ್ಯಾಗ್ ಪತ್ತೆಯಾಗಿದ್ದು, ಪ್ರಕರಣ ಕೊಲೆಯೋ, ಆತ್ಮಹತ್ಯೆಯೋ ಎನ್ನುವ ಶಂಕೆಗೆ ತಿರುಗಿತ್ತು.
ಪೊಲೀಸರ ತನಿಖೆಯಲ್ಲಿ, ಪ್ರಿಯಾಂಕ ಉದ್ದೇಶಪೂರ್ವಕವಾಗಿ ತನ್ನ ವಸ್ತುಗಳನ್ನು ಕೆರೆಯ ಬಳಿ ಬಿಟ್ಟು, ತನ್ನ ಪ್ರೇಮಿ ಡೇವಿಡ್ ಜೊತೆ ಕುಣಿಗಲ್ ಕಡೆ ತೆರಳಿದ್ದುದಾಗಿ ಬೆಳಕಿಗೆ ಬಂದಿದೆ. ಅದೇ ರಾತ್ರಿ ಡೇವಿಡ್ ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ಪ್ರಿಯಾಂಕ ಪತ್ತೆಯಾಗಿದ್ದಳು. ಘಟನೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಸಾಂತ್ವನ ಕೇಂದ್ರದಲ್ಲಿ ಪತಿ–ಪತ್ನಿ ಮಾತುಕತೆ
ಪೊಲೀಸರ ಸಮ್ಮುಖದಲ್ಲಿ ಪ್ರಿಯಾಂಕಳನ್ನು ಹಾಸನದ ಸಾಂತ್ವನ ಕೇಂದ್ರಕ್ಕೆ ಕರೆತರಲಾಯಿತು. ಪತಿ ರುದ್ರೇಶ್ ಕೂಡ ಅಲ್ಲಿಗೆ ಆಗಮಿಸಿದ್ದು, ಆರಂಭದಲ್ಲಿ ಗಂಡನೊಂದಿಗೆ ಹೋಗುವುದಕ್ಕೆ ನಿರಾಕರಿಸಿದ್ದ ಪ್ರಿಯಾಂಕ, ಹಲವು ದಿನಗಳ ಚರ್ಚೆಯ ಬಳಿಕ ಮನಸ್ಸು ಬದಲಿಸಿದ್ದಾಳೆ. ಸುಮಾರು ಒಂದೂವರೆ ಗಂಟೆ ನಡೆದ ಮುಕ್ತ ಮಾತುಕತೆಯಲ್ಲಿ ಪತಿ–ಪತ್ನಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕುಟುಂಬ ಮತ್ತು ಮಗನ ಭವಿಷ್ಯವನ್ನು ಗಮನದಲ್ಲಿಟ್ಟು ರುದ್ರೇಶ್ ಪತ್ನಿಯ ತಪ್ಪನ್ನು ಮನ್ನಿಸಿ ಮತ್ತೆ ಜೊತೆಯಾಗಿ ಬದುಕಲು ಸಮ್ಮತಿಸಿದ್ದಾನೆ.
ಪ್ರಿಯಕರನೊಂದಿಗೆ ತೆರಳುವ ನಿರ್ಧಾರ ಕೈಬಿಟ್ಟು, ಕೌಟುಂಬಿಕ ಮೌಲ್ಯಗಳಿಗೆ ಆದ್ಯತೆ ನೀಡುವಂತೆ ಪೊಲೀಸರ ಸಲಹೆಗೆ ಪ್ರಿಯಾಂಕ ಒಪ್ಪಿಕೊಂಡಿದ್ದಾಳೆ. ಸಾಂತ್ವನ ಕೇಂದ್ರದಿಂದ ತವರು ಮನೆಗೆ ತೆರಳಿ, ಅಲ್ಲಿಂದ ಗಂಡನ ಮನೆ ಸೇರಲು ತೀರ್ಮಾನಿಸಿದ್ದಾಳೆ. ನಾಪತ್ತೆ ಪ್ರಕರಣದಿಂದ ಆರಂಭವಾಗಿ ಕೊಲೆ ಶಂಕೆ ವರೆಗೂ ತಲುಪಿದ್ದ ಈ ಘಟನೆ, ಅಂತಿಮವಾಗಿ ಸಮಾಧಾನದಲ್ಲಿ ಅಂತ್ಯ ಕಂಡಿದೆ. ಪೊಲೀಸರು ಪ್ರಕರಣದ ಕುರಿತ ಅಗತ್ಯ ಕ್ರಮಗಳನ್ನು ಪೂರ್ಣಗೊಳಿಸಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm