ಆಸ್ತಿಗಾಗಿ ಗಲಾಟೆ ; ತಂದೆ ಮತ್ತು ತಮ್ಮನನ್ನು ಶೂಟ್ ಮಾಡಿ ಕೊಂದ ನಿವೃತ್ತ ಸೇನಾಧಿಕಾರಿ 

23-06-22 11:53 am       HK News Desk   ಕ್ರೈಂ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾದ ವಿವಾದ ಉಂಟಾಗಿ, ನಿವೃತ್ತ ಸೇನಾಧಿಕಾರಿಯೊಬ್ಬರು ತನ್ನ ತಂದೆ ಮತ್ತು ತಮ್ಮನನ್ನು ಶೂಟ್ ಮಾಡಿ ಕೊಂದಿದ್ದಾನೆ. 

ಲಕ್ನೋ, ಜೂ 23: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾದ ವಿವಾದ ಉಂಟಾಗಿ, ನಿವೃತ್ತ ಸೇನಾಧಿಕಾರಿಯೊಬ್ಬರು ತನ್ನ ತಂದೆ ಮತ್ತು ತಮ್ಮನನ್ನು ಶೂಟ್ ಮಾಡಿ ಕೊಂದಿದ್ದಾನೆ. 

ತನ್ನ ಮನೆಯಲ್ಲಿ ಇಬ್ಬರನ್ನು ಕೊಂದ ಆರೋಪದ ಮೇಲೆ ನಿವೃತ್ತ ಸೇನಾ ಅಧಿಕಾರಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಕಪ್ತಂಗಂಜ್ ಪ್ರದೇಶದ ಧಂಧರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಶೂಟ್ ಮಾಡಿ ಕೊಂದ ಆರೋಪಿಯನ್ನು ನಿವೃತ್ತ ಸೇನಾಧಿಕಾರಿ ಮನೋಜ್ ಕುಮಾರ್ ಸಿಂಗ್ (45) ಎಂದು ಗುರುತಿಸಲಾಗಿದ್ದು, ಮೃತರನ್ನು ಶಿವನಾರಾಯಣ (70), ಮತ್ತು ಮನೀಶ್ ಸಿಂಗ್ (30) ಎಂದು ಗುರುತಿಸಲಾಗಿದೆ. 

Azamgarh son shot father and brother to death: There was a dispute over  property distribution and expenses, SP reached the spot, accused in custody

 ಸಿಂಗ್ ಅವರ ತಂದೆ ಶಿವನಾರಾಯಣ ಅವರ ಆಸ್ತಿ ವಿವರ ಮತ್ತು ಕೃಷಿಯಿಂದ ಪಡೆದ ಹಣದ ಬಗ್ಗೆ ಕೇಳಿದ್ದರು. ಈ ವೇಳೆ ಚರ್ಚೆಯು ವಾದಕ್ಕೆ ತಿರುಗಿತು. ಆಗ ಕೋಪದಿಂದ ಮನೋಜ್ ಸಿಂಗ್ ತನ್ನ ಅಪ್ಪ ಮತ್ತು ತಮ್ಮನಿಗೆ ಗುಂಡು ಹಾರಿಸಿದ್ದಾರೆ. 

Uttar Pradesh Shocker: Man Shoots Father, Brother to Death Over Property  Dispute in Azamgarh | LatestLY

ಗುಂಡಿನ ಸದ್ದು ಕೇಳಿದ ಅವರ ಚಿಕ್ಕಮ್ಮ ಮನೋಜ್ ಅವರನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಮನೋಜ್ ಅವರಿಗೆ ದೊಣ್ಣೆಯಿಂದ ಹೊಡೆದು ಸ್ಥಳದಿಂದ ಪರಾರಿಯಾಗಿದ್ದ. ಈ ಘಟನೆಯ ನಂತರ, ಮನೋಜ್ ತಮ್ಮ ಲೈಸೆನ್ಸ್ ಪಡೆದ ಪಿಸ್ತೂಲ್‌ನೊಂದಿಗೆ ಕೆಲವು ಗಂಟೆಗಳ ನಂತರ ಕಪ್ತಂಗಂಜ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

A retired Army officer was arrested for allegedly shooting his father and brother dead after an argument over a property dispute. The incident took place at Dhandhari village in the Kaptanganj area under Azamgarh district of Uttar Pradesh on Tuesday night.The accused has been identified as Manoj Kumar Singh (45) while the deceased have been identified as Shivnarayan (70), and Manish Singh (30).