ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ

02-10-20 12:00 pm       Mangalore Correspondent   ಕ್ರೈಂ

ದನಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬೆಳ್ಳಂಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಪುತ್ತೂರು, ಅಕ್ಟೋಬರ್ 02: ದನಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬೆಳ್ಳಂಬೆಳಿಗ್ಗೆ ಪೊಲೀಸರು ದಾಳಿ ನಡೆಸಿದ್ದಾರೆ. ಪುತ್ತೂರಿನ ಸವಣೂರು ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಬೆಳ್ಳಾರೆ ಠಾಣೆಯ ಪೊಲೀಸ್ ದಾಳಿ ನಡೆಸಿದ್ದಾರೆ ಈ ಸಂದರ್ಭ ದನ ಕದ್ದು ಮಾಂಸ ಮಾಡುವ ದಂಧೆ ಬಯಲಾಗಿದೆ.

ಸವಣೂರು ಆರಿಗಮಜಲು ಎಂಬಲ್ಲಿಂದ ರಸ್ತೆಬದಿಯ ದನವನ್ನು ಕದ್ದು ಮಾಂತೂರು ಶಾಂತಿನಗರದಲ್ಲಿ ಅಕ್ರಮವಾಗಿ ದನವನ್ನು ಹತ್ಯೆಗೈದು ಮಾಂಸ ಮಾಡುವ ತಯಾರಿಯಲ್ಲಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಪೊಲೀಸ್ ದಾಳಿ ಮಾಡಿ ದನ ಹಾಗೂ ಇತರ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.