ಬ್ರೇಕಿಂಗ್ ನ್ಯೂಸ್
19-11-26 01:19 pm HK News Staffer ದೇಶ - ವಿದೇಶ
ನವದೆಹಲಿ, ನ.19: ಖ್ಯಾತ ಗೀತ ರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರು "ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ರಾಮನಿದ್ದಾನೆ" ಎಂದು ಹೇಳುವ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 'ರಾಮಾಯಣ' ಸಿನಿಮಾ ಮತ್ತು ತಾವು ಬರೆದ ಹಾಡುಗಳ ಕುರಿತು ಮಾತನಾಡುವಾಗ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಾಮ ಒಂದು ಜೀವನ ವಿಧಾನ. ರಾಮ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅದೊಂದು ನೈತಿಕತೆ ಮತ್ತು ಮೌಲ್ಯಗಳ ಸಂಕೇತ ಎಂದು ಅವರು ಬಣ್ಣಿಸಿದ್ದಾರೆ. ಧರ್ಮವನ್ನು ಮೀರಿದ ಪರಿಕಲ್ಪನೆ ಇದು. ರಾಮನ ಆದರ್ಶಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಬದಲಾಗಿ ಪ್ರತಿಯೊಬ್ಬ ಭಾರತೀಯನ ಸಂಸ್ಕೃತಿ ಮತ್ತು ರಕ್ತದಲ್ಲಿ ಬೆರೆತುಹೋಗಿವೆ ಎಂದು ಅವರು ಹೇಳಿದ್ದಾರೆ.
ಶಾರುಖ್ ಖಾನ್ ಅಭಿನಯದ 'ಸ್ವದೇಶ್' ಚಿತ್ರಕ್ಕಾಗಿ ತಾವು ಬರೆದ "ಮನ್ ಸೇ ರಾವಣ್ ಜೋ ನಿಕಾಲೇ, ರಾಮ್ ಉಸ್ಕೇ ಮನ್ ಮೇ ಹೈ" (ಮನಸ್ಸಿನಲ್ಲಿರುವ ರಾವಣನನ್ನು ಹೊರಹಾಕಿದವನ ಮನಸ್ಸಿನಲ್ಲಿ ರಾಮ ನೆಲೆಸಿರುತ್ತಾನೆ) ಎಂಬ ಸಾಲುಗಳನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ನನ್ನ ಮಾತು ಹಲವರಿಗೆ ಕೋಪ ಬರಬಹುದು. ತಮ್ಮ ಈ ಮಾತಿನಿಂದ ಕೆಲವರಿಗೆ ಅಸಮಾಧಾನವಾಗಬಹುದು ಎಂದು ತಿಳಿದಿದ್ದರೂ, ರಾಮನ ತತ್ವಗಳು ಭಾರತೀಯ ಸಮಾಜದ ಅವಿಭಾಜ್ಯ ಅಂಗವಾಗಿವೆ ಎಂದು ಹೇಳಬಲ್ಲೆ ಎಂದವರು ಹೇಳಿದ್ದಾರೆ.
ಮೌಲಾನಾ ಸಾಜಿದ್ ರಶೀದಿ ಆಕ್ರೋಶ
ಇದೇ ವೇಳೆ, ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಅವರು ಅಖ್ತರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. "ತಮ್ಮನ್ನು ತಾವು ನಾಸ್ತಿಕ ಎಂದು ಕರೆದುಕೊಳ್ಳುವ ಜಾವೇದ್ ಅಖ್ತರ್ ಅವರಿಗೆ ಈಗ ರಾಮನ ಮೇಲೆ ಇಷ್ಟೊಂದು ಪ್ರೀತಿ ಬಂದಿದ್ದರೆ, ತಮ್ಮ ಹೆಸರನ್ನು 'ರಾಮ್ ಪಾಲ್' ಎಂದು ಬದಲಿಸಿಕೊಳ್ಳಲಿ" ಎಂದು ರಶೀದಿ ವ್ಯಂಗ್ಯವಾಡಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ ಹಾಡುಗಳನ್ನು ಮಾರಾಟ ಮಾಡಲು ಮತ್ತು ಜನಪ್ರಿಯತೆ ಗಳಿಸಲು ಅಖ್ತರ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮೌಲಾನಾ ಆರೋಪಿಸಿದ್ದಾರೆ.
ಚಿತ್ರರಂಗದಲ್ಲಿ ಜಾವೇದ್ ಅಖ್ತರ್ ಅವರ ಕುಟುಂಬ ಸದಸ್ಯರು ನಿರ್ಮಾಣ, ಚಿತ್ರಕಥೆ ಮತ್ತು ಹಾಡುಗಳ ರಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರಶೀದಿ ಉಲ್ಲೇಖಿಸಿದ್ದಾರೆ. ಅವರು ತಮ್ಮ ಕೆಲಸಗಳನ್ನು ಪರಸ್ಪರ ಹೊಗಳಿಕೊಳ್ಳದಿದ್ದರೆ ಅವರ ವ್ಯವಹಾರ ಹೇಗೆ ನಡೆಯುತ್ತದೆ? ಇದೇ ಇದರ ಹಿಂದಿರುವ ಅಸಲಿ ವಿಚಾರ ಎಂದು ಆರೋಪಿಸಿದ್ದಾರೆ. ನಾನು ಮುಸ್ಲಿಂ, ನನ್ನ ಧರ್ಮದ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಗೌರವಯುತ ಜೀವನ ನಡೆಸುತ್ತಿದ್ದೇನೆ ಎಂದಿರುವ ರಶೀದಿ, ಜಾವೇದ್ ಅಖ್ತರ್ ಎರಡು ವಿಭಿನ್ನ ದೋಣಿಗಳಲ್ಲಿ ಕಾಲಿಡಲು ಪ್ರಯತ್ನಿಸುತ್ತಿದ್ದಾರೆ. ಎರಡೂ ಕಡೆಗಳನ್ನು ಏಕಕಾಲದಲ್ಲಿ ಹಿಡಿದಿಟ್ಟುಕೊಳ್ಳುವ ಅವರ ಪ್ರಯತ್ನ ಸರಿಯಲ್ಲ ಎಂದು ಟೀಕಿಸಿದ್ದಾರೆ.
19-11-26 12:32 pm
HK News Staffer
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
ರೇಸ್ ಕೋರ್ಸ್ ವ್ಯಾಪ್ತಿಯ 79 ಎಕರೆ ಸರ್ಕಾರದ ವಶಕ್ಕೆ...
18-11-26 05:38 pm
ಕೆಪಿಎಸ್ಸಿ ಅಕ್ರಮ ನೇಮಕಾತಿ ಹಗರಣ ; ಆಯೋಗದ ಅಧ್ಯಕ್ಷ...
17-11-26 12:09 pm
19-11-26 01:19 pm
HK News Staffer
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
ಮಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ ! ಟೇಕಾಫ್ ಹಂತದ...
16-11-26 10:56 pm
ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...
14-11-26 10:00 am
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
19-11-26 03:22 pm
HK News Staffer
ಬಳಸಿದ ಅಡುಗೆ ಎಣ್ಣೆ ಮರು ಬಳಕೆಗೆ ತಡೆ ; ತೈಲವನ್ನು ಸ...
18-11-26 07:27 pm
Bolas Factory Raid, Mangalore: ಗ್ರಾಹಕರನ್ನು ದಾ...
18-11-26 01:18 pm
Ideal Icecream Raid, Mangalore: ಕೊಲ್ಯ ಐಡಿಯಲ್...
17-11-26 08:15 pm
ಸೌಜನ್ಯಾ ಪ್ರಕರಣ ; ಮೂವರು ತಜ್ಞ ವೈದ್ಯರ ಕಮಿಟಿ ರಚನೆ...
17-11-26 06:42 pm
19-11-26 03:20 pm
HK News Staffer
Fr Cyprian Pinto Arrest: ಪೋಕ್ಸೋ ಕೇಸು ; ಎರಡನೇ...
18-11-26 07:20 pm
ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...
18-11-26 12:46 pm
ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...
18-11-26 12:36 pm
ಕೇರಳದಲ್ಲಿ ಟ್ರಾಫಿಕ್ ಉಲ್ಲಂಘನೆ ದಂಡ ; ಇ-ಚಲನ್ ಏಪ್...
16-11-26 09:56 pm