ಬ್ರೇಕಿಂಗ್ ನ್ಯೂಸ್
20-11-26 09:53 pm HK News Staffer ಕರಾವಳಿ
ಉಳ್ಳಾಲ, ನ.20: ಇತ್ತೀಚಿಗೆ ವಿದ್ಯಾರ್ಥಿಗಳ ರ್ಯಾಗಿಂಗ್ ವಿಚಾರದಲ್ಲಿ ಸುದ್ದಿಯಾಗಿದ್ದ ಕಣಚೂರು ಮೆಡಿಕಲ್ ಕಾಲೇಜಿನ ಕ್ಯಾಂಪಸ್ ಒಳಗಡೆಯೇ ವಿದ್ಯಾರ್ಥಿನಿಯ ಅಪಹರಣದ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಿಸುತ್ತಿದ್ದಂತೆ ಎಚ್ಚೆತ್ತ ಕಣಚೂರು ಮೆಡಿಕಲ್ ಕಾಲೇಜಿನ ಡೀನ್ ಡಾ.ಶಾನವಾಜ್ ಮಾನಿಪ್ಪಾಡಿ, ಶುಕ್ರವಾರ ಸಂಜೆ ತರಾತುರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದಾರೆ. ವಿದ್ಯಾರ್ಥಿನಿ ಅಪಹರಣ ಆಗಿಲ್ಲ. ಸಂಬಂಧಿಕರೇ ಕರೆದೊಯ್ದಿದ್ದಾರೆ, ಈ ವಿಷಯ ಆಕೆಗೂ ಗೊತ್ತಿತ್ತು. ಸ್ಥಳದಲ್ಲಿದ್ದ ಇತರ ವಿದ್ಯಾರ್ಥಿಗಳಿಗೂ ತಿಳಿದಿತ್ತು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿ ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿರಲಿಲ್ಲ. ಹೀಗಾಗಿ ಎರಡು ದಿನಗಳ ಹಿಂದೆ ಹೆತ್ತವರು ಈ ಬಗ್ಗೆ ವಿಚಾರಿಸಲು ಕಾಲೇಜಿಗೆ ಬಂದಿದ್ದರು. ಅಂದು ಕೂಡ ವಿದ್ಯಾರ್ಥಿನಿ ತರಗತಿಗೆ ಬಾರದೆ ಪಾಂಡೇಶ್ವರ ಠಾಣೆಗೆ ತೆರಳಿ ಹೆತ್ತವರ ವಿರುದ್ಧವೇ ದೂರು ನೀಡಿದ್ದಳು. ವಿದ್ಯಾರ್ಥಿನಿ ಕಾಲೇಜಿನ ಹಾಸ್ಟೆಲಿಗೂ ಬಾರದೇ ಇದ್ದುದನ್ನ ಕಂಡು ನಾವು ಉಳ್ಳಾಲ ಠಾಣೆಗೆ ವಿಚಾರ ತಿಳಿಸಿದ್ದೆವು. ಮರುದಿನ ಪೊಲೀಸರು ಆಕೆಯನ್ನ ಕರೆತಂದು ಹೆತ್ತವರ ಸಮಕ್ಷಮದಲ್ಲಿ ನಮ್ಮ ಹಾಸ್ಟೆಲ್ಗೆ ತಂದು ಬಿಟ್ಟಿದ್ದರು.
ನಿನ್ನೆ (ಗುರುವಾರ) ಆಕೆಯ ಹೆತ್ತವರು ಮತ್ತೆ ಬಂದಿದ್ದು ಸ್ವಲ್ಪ ಬಲವಂತವಾಗಿ ಕರಕೊಂಡು ಹೋಗಿದ್ದಾರೆ. ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯನ್ನ ಕರಕೊಂಡು ಹೋಗುತ್ತಿರುವುದು ಆಕೆಯ ಹೆತ್ತವರೆಂದು ಅರಿವಿತ್ತು. ಹಾಗೆ ಯಾರೂ ಅದನ್ನ ವಿರೋಧಿಸಿಲ್ಲ. ಆದರೆ ಆ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ಹರಿದಾಡಿದ ಪರಿಣಾಮ ನಮ್ಮ ಸಂಸ್ಥೆಯ ಘನತೆಗೆ ಧಕ್ಕೆ ಬರುವಂತಾಗಿದೆ. ಜಾಲತಾಣ, ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ವರದಿ ಹಾಗೂ ಪೋಸ್ಟ್ ಮಾಡಬಾರದು. ಅಂತಹ ವೀಡಿಯೋ, ಪೋಸ್ಟ್ ಗಳನ್ನ ತೆಗೆದು ಹಾಕಬೇಕೆಂದು ಶಹನವಾಝ್ ಮನವಿ ಮಾಡಿದರು.
ವಿದ್ಯಾರ್ಥಿನಿಯನ್ನ ಕರಕೊಂಡು ಹೋಗುವಾಗ ಆಕೆಯ ತಾಯಿ, ತಂದೆ, ತಂಗಿ, ತಮ್ಮ, ಅಂಕಲ್ ಇದ್ರು. ಹೊರಗಿನವರು ಯಾರು ಬಂದರೂ ಇಲ್ಲಿಂದ ಅಪಹರಣ ಮಾಡಲು ಸಾಧ್ಯವಿಲ್ಲ. ಕಾನೂನಲ್ಲಿ ಯುವತಿಗೆ ಪ್ರಬುದ್ಧತೆಯ ವಿಚಾರ ಬರಬಹುದು. ಆದರೆ ಭಾರತೀಯ ಸಂಸ್ಕೃತಿ ಪ್ರಕಾರ ಪೋಷಕರಿಗೆ ಮಕ್ಕಳನ್ನ ಕರಕೊಂಡು ಹೋಗುವ ಹಕ್ಕಿದೆ, ತಪ್ಪು ದಾರಿ ಹೋದದ್ದಕ್ಕೆ ಬಲವಂತ ಮಾಡಿರಬೇಕೆ ಹೊರತು ಇದು ಅಪಹರಣ ಅಲ್ಲವೆಂದು ಶಹನವಾಝ್ ಅವರು ಸಮರ್ಥಿಸಿಕೊಂಡರು.
ವಿದ್ಯಾರ್ಥಿನಿಯನ್ನ ಹೆತ್ತವರು ಕರಕೊಂಡು ಹೋದ ತಕ್ಷಣವೇ ನಾವು ಉಳ್ಳಾಲ ಠಾಣೆಗೆ ಮಾಹಿತಿ ನೀಡಿದ್ದೆವು. ಠಾಣೆಯವರು ನಮ್ಮ ದೂರಿಗೆ ಸ್ವೀಕೃತಿಯನ್ನೂ ಕಳಿಸಿದ್ದರೆಂದು ಪ್ರತಿಯನ್ನ ಶಾನವಾಝ್ ಅವರು ಮಾಧ್ಯಮಗಳಿಗೆ ತೋರಿಸಿದರು.
ಅಪಹರಣದ ಬಗ್ಗೆ ನಮಗೆ ದೂರು ಬಂದಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದೆವೆಂದು ಮಂಗಳೂರು ಕಮೀಷನರ್ ಸುಧೀರ್ ರೆಡ್ಡಿಯವರು ಹೇಳಿಕೊಂಡಿದ್ದರೆ, ಇತ್ತ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಲೇಜಿನ ಡೀನ್ ತಾವು ನಿನ್ನೆಯೇ ಪೊಲೀಸರಿಗೆ ದೂರು ನೀಡಿದ್ದೇವೆಂದು ಹೇಳಿಕೊಂಡಿದ್ದಾರೆ. ಇದರ ಸತ್ಯಾಸತ್ಯತೆಯನ್ನ ಪೊಲೀಸರೇ ತಿಳಿಸಬೇಕಿದೆ.
20-11-26 05:15 pm
HK News Staffer
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
21-11-26 10:59 pm
HK News Desk
‘ಮಹಾತ್ಮೆ ಕುದ್ಮುಲ್’ ; ಸೂರಿಲ್ಲದ, ತುಂಡು ಭೂಮಿ ಇಲ್...
21-11-26 10:29 pm
ಅಪಹರಣ ಆಗಿಲ್ಲ, ವಿದ್ಯಾರ್ಥಿನಿ ತಪ್ಪುದಾರಿ ತುಳಿದಿದ್...
20-11-26 09:53 pm
ಮುಸ್ಲಿಂ ಯುವತಿ ಅಪಹರಣ ; ಕೇರಳದಲ್ಲಿ ಸಂಬಂಧಿಕರ ಮನೆಯ...
20-11-26 09:51 pm
ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ಮುಸ್ಲಿಂ ವಿದ್ಯ...
20-11-26 02:32 pm
21-11-26 04:41 pm
HK News Staffer
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm
ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ...
19-11-26 09:20 pm
Baglur Manchapanahalli Murder: ಗುಜರಿ ವ್ಯಾಪಾರದ...
19-11-26 03:20 pm