ಬ್ರೇಕಿಂಗ್ ನ್ಯೂಸ್
11-09-22 01:56 pm HK News Desk ಕ್ರೈಂ
ಬೆಂಗಳೂರು, ಸೆ 11: ಮಂತ್ರಿ ಡೆವಲಪರ್ಸ್ ನಿರ್ದೇಶಕ, ಉದ್ಯಮಿ ಸುಶೀಲ್ ಮಂತ್ರಿ ಅವರನ್ನು ಸಿಐಡಿ ವಿಶೇಷ ತಂಡ ಬಂಧಿಸಿದೆ. ಸುಶೀಲ್ ಮಂತ್ರಿ ವಿರುದ್ಧ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಜೂ.25ರಂದು ಬಂಧಿಸಿ ಇಡಿ ವಿಚಾರಣೆ ನಡೆಸಿತ್ತು. ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರಬಂದಿದ್ದರು. ಈಗ ಮತ್ತೆ ಸಿಐಡಿ ತನಿಖಾ ತಂಡ ನಿನ್ನೆ ರಾತ್ರಿ ಸುಶೀಲ್ ಅವರನ್ನು ಅರೆಸ್ಟ್ ಮಾಡಿದೆ.
ಸಿಐಡಿ ಎಸ್ಪಿ ರವಿ ಡಿ ಚೆನ್ನಣ್ಣನವರ್ ಟೀಂ ನಿಂದ ಸುಶೀಲ್ ಅರೆಸ್ಟ್ ಆಗಿದ್ದಾರೆ ಎಂದು ಸಿಐಡಿ ತನಿಖಾ ತಂಡದಿಂದ ಮಾಹಿತಿ ಲಭ್ಯವಾಗಿದೆ. ಸುಶೀಲ್ ವಿರುದ್ಧ ತನ್ನ ಗ್ರಾಹಕರಿಗೆ ವಂಚನೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಜೊತೆಗೆ ಗ್ರಾಹಕರಿಂದ ಖರೀದಿ ಹಣ ದುರ್ಬಳಕೆ ಆರೋಪ ಸಹ ಇದೆ. ಸುಶೀಲ್ ಮಂತ್ರಿ ಮೇಲೆ ಮನಿ ಲ್ಯಾಂಡರಿಂಗ್ ಆರೋಪ ಹಿನ್ನೆಲೆ ಕಳೆದ ಜೂನ್ 25 ರಂದು ಇಡಿ ಅರೆಸ್ಟ್ ಮಾಡಿ ತನಿಖೆ ಮಾಡಿತ್ತು. ಆದಾದ ಬಳಿಕ ಜಾಮೀನಿನ ಮೇಲೆ ಸುಶೀಲ್ ಹೊರ ಬಂದಿದ್ದರು. ಆದರಂತೆ ನಿನ್ನೆ ರಾತ್ರಿ ಮತ್ತೆ ಅರೆಸ್ಟ್ ಆಗಿದ್ದಾರೆ.
ಉದ್ಯಮಿ ಸುಶೀಲ್ ಮಂತ್ರಿಗೆ ಸಿಐಡಿ ಪೊಲೀಸರಿಂದ ಗ್ರಿಲ್ ;
ಸಾವಿರಾರು ಗ್ರಾಹಕರಿಂದ 1000 ಕೋಟಿ ಸಂಗ್ರಹಿಸಿದ್ದ ಸುಶೀಲ್, 7 ರಿಂದ 10 ವರ್ಷಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಸುಳ್ಳು ಸುಳ್ಳಿ ಬ್ರೋಚರ್ಸ್ ತೋರಿಸಿ ವಂಚಿಸಿದ್ದಾರೆ. ಕಲೇಕ್ಟ್ ಮಾಡಿಕೊಂಡಿದ್ದ ಹಣವನ್ನು ದುರ್ಬಳಕೆ ಮಾಡಿದ್ರಂತೆ. ಈ ಬಗ್ಗೆ 2022 ರಲ್ಲೇ ಸಾವಿರಾರು ಗ್ರಾಹಕರು ದೂರು ನೀಡಿದ್ದರು. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕನಕಪುರ ರಸ್ತೆಯ ಕೆಲ ಪ್ರಾಜೆಕ್ಟ್ ಗಳಲ್ಲಿ ವಂಚನೆ ಮಾಡಿದ್ದಾರಂತೆ. ಸದ್ಯ ಸುಶೀಲ್ನನ್ನು ಅರೆಸ್ಟ್ ಮಾಡಿದ್ದು ಪ್ಯಾಲೇಸ್ ರಸ್ತೆಯ ಕಾರ್ಲ್ ಟನ್ ಭವನ ಸಿಐಡಿ ಕಚೇರಿಯಲ್ಲಿ ಸುಶೀಲ್ ಮಂತ್ರಿ ವಿಚಾರಣೆ ನಡೆಸಲಾಗುತ್ತಿದೆ. ಸಿಐಡಿ ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದ ತಂಡದಿಂದ ವಿಚಾರಣೆ ನಡೆಯುತ್ತಿದೆ. ದೂರುದಾರರನ್ನು ಕರೆಸಿ ದಾಖಲೆಗಳ ಸಂಗ್ರಹದಲ್ಲಿ ಸಿಐಡಿ ತೊಡಗಿದೆ.
ಉದ್ಯಮಿ ಸುಶೀಲ್ ಮಂತ್ರಿ ಪುತ್ರ ಪ್ರತೀಕ್ ಬಂಧಿಸಿದ ಸಿಐಡಿ;
ಇನ್ನು ಮತ್ತೊಂದು ಕಡೆ ವಂಚನೆ ಕೇಸ್ನಲ್ಲಿ ಉದ್ಯಮಿ ಸುಶೀಲ್ ಮಂತ್ರಿ ಪುತ್ರ ಪ್ರತೀಕ್ ನನ್ನು ಸಿಐಡಿ ಬಂಧಿಸಿದೆ. ಸೋಮವಾರ ಸುಶೀಲ್ರನ್ನು ಕಸ್ಟಡಿಗೆ ಪಡೆಯಲು ತಯಾರಿ ನಡೆದಿದೆ. ನಿನ್ನೆ ಸಿಐಡಿ ಅಧಿಕಾರಿಗಳು ಸುಶೀಲ್ ನನ್ನು ಬಂಧಿಸಿದ್ದಾರೆ. ಬಳಿಕ 1ನೇ ಎಸಿಎಂಎಂ ಕೋರ್ಟ್ಗೆ ಹಾಜರುಪಡಿಸಿದ್ದು ಸೆ.12ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ಇನ್ನು ಈ ಬಗ್ಗೆ ಸಿಐಡಿ ಕಚೇರಿ ಕರ್ನಾಟಕ ಮನೆ ಗ್ರಾಹಕರ ವೇದಿಕೆ ಧನಂಜಯ್ ಪದ್ಮನಾಭ ಸಂಚಾಲಕ ಮಾತನಾಡಿದ್ದು, ಮಂತ್ರಿ ಡೆವಲಪರ್ಸ್ ಕಂಪೆನಿಯಿಂದ ಮಂತ್ರಿ ಸೆರೆನಟಿ, ಮಂತ್ರಿ ವೆಬ್ ಸಿಟಿ ಪ್ರಾಜೆಕ್ಟ್ ಗಳಲ್ಲಿ ವಂಚನೆ ಆಗಿದೆ. ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದ ಪ್ರಾಜೆಕ್ಟ್ ಗಳಲ್ಲಿ ವಂಚನೆಯಾಗಿದೆ. ಸಾಕ್ಣ್ಯಾಧಾರ, ದಾಖಲೆಗಳ ಸಂಗ್ರಹಕ್ಕೆ ಸಿಐಡಿ ಅಧಿಕಾರಿಗಳು ಕರೆಸಿದ್ದರು. 2013ರಲ್ಲಿ ಹಣ ಪಡೆದುಕೊಂಡು 2016 ಫ್ಲಾಟ್ ನೀಡುವುದಾಗಿ ಹೇಳಿದ್ರು. 2020 ರಲ್ಲಿ ಸುಬ್ರಮಣ್ಯಪುರ, ಹೆಣ್ಣೂರು ಠಾಣೆಗಳಲ್ಲಿ ಕೇಸ್ ದಾಖಲಿಸಿದ್ರು ಯಾವುದೇ ಕ್ರಮ ಆಗಿರಲಿಲ್ಲ. ನಮಗೆ ಮನೆ ಸಿಕ್ಕಿಲ್ಲ, ನಾವು ಹೂಡಿಕೆದಾರರಲ್ಲ, ಮನೆ ಗ್ರಾಹಕರು, 70-80 ಲಕ್ಷ ಹಣ ಪಾವತಿಸಿದ್ದೇವೆ. ರೇರಾ ಕೆಲಸವನ್ನು ಮಾಡದೆ ಇರುವುದರಿಂದ ನಮಗೆ ಈ ಪರಿಸ್ಥಿತಿ. ಅನ್ ಲೈನ್ ಮೂಲಕ ಫ್ಲಾಟ್ ಬುಕ್ ಮಾಡಿದ್ವಿ, ಅಂಡರ್ ಕನ್ಸಟ್ರಕ್ಷನ್ ಅಂಪಾರ್ಟ್ ಮೆಂಟ್ ಹೂಡಿಕೆ ಮಾಡಿದ್ದೇವೆ. 3 ಸಾವಿರ ಫ್ಲಾಟ್ ಗಳಲ್ಲಿ ವೆಬ್ ಸಿಟಿ, ಮಂತ್ರಿ ಸಿಟಿ, ಸೆರೆನಿಟಿ ಫ್ಲಾಟ್ ಗಳಲ್ಲಿ ವಂಚನೆ ಆಗಿದೆ. ನಮಗೆ ನ್ಯಾಯಾ ಸಿಗುವ ವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದರು.
ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ನಲ್ಲಿ ಬರೋಬ್ಬರಿ 1200 ಮಂದಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬರೋಬ್ಬರಿ 1350 ಕೋಟಿ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಹೂಡಿಕೆ ಮಾಡಿದ ಹಣ ಕೇಳಲು ಹೋದವರಿಗೆ ಕಂಪನಿ ಹಣ ವಾಪಾಸ್ ಮಾಡಿಲ್ಲ. ಫೋಜಿ ಸ್ಕೀಂ ಮೂಲಕ ಸಹ ಆಫರ್ ನೀಡಿ ವಂಚನೆ ಮಾಡಿರುವ ಸಂಗತಿ ಪತ್ತೆ ಆಗಿದೆ. ಫೋಜಿ ಸ್ಕೀಂ ಅಂತೆಯೇ buy-back ಅಡಿಯಲ್ಲಿ ಅಕ್ರಮ ನಡೆದಿದೆ. ಪ್ಲಾಟ್ ಕೊಡೊದಾಗಿ, ನಿವೇಶನ ಕೊಡೊದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ. 1350 ಕೋಟಿ ಹಣವೂ ಸುಶೀಲ್ ವಂಚಿಸಿದ್ದಾರೆ. ಹತ್ತು ವರ್ಷಗಳ ಹಿಂದೆಯೇ ಹಣ ಕಟ್ಟಿದ್ರು ಇದೂವರೆಗೂ ಮನೆ ನೀಡಿಯೇ ಇಲ್ಲ. ಹೂಡಿಕೆದಾರರ ಹಣವನ್ನು ವೈಯಕ್ತಿಕ ಬಳಕೆ ಮಾಡಿಕೊಂಡಿದ್ದಾರೆ. ಒಂದು ಕಡೆ ಹಣ ತೆಗೆದು ಮತ್ತೊಂದು ಕಡೆ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
The Karnataka Criminal Investigation Department (CID) arrested Saturday Sushil Mantri, the director of Mantri Developers, in connection with a money laundering case in which his firm is accused of cheating home buyers. Sources in the CID said that Mantri was handed over in judicial custody till September 12.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 06:05 pm
Mangalore Correspondent
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm