ಬ್ರೇಕಿಂಗ್ ನ್ಯೂಸ್
06-02-26 10:58 pm HK News Desk ದೇಶ - ವಿದೇಶ
ಜೈಪುರ, ಫೆ 06 : ರಾಜಸ್ಥಾನದ ದೇಗಾನ ನಗರದಲ್ಲಿ ಅಪರೂಪದ ಮತ್ತು ಅಚ್ಚರಿಯ ಘಟನೆಯೊಂದು ನಡೆದಿದೆ. ಚಿನ್ನದ ಅಂಗಡಿಯೊಳಗೆ ಹಾರಿಬಂದ ಪಾರಿವಾಳವೊಂದು ತನ್ನ ಕೊಕ್ಕಿನಲ್ಲಿ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನ ಎತ್ತಿಕೊಂಡು ಹಾರಿಹೋಗಿದ್ದು, ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇಗಾನ ನಗರದ ಚಿನ್ನದ ಮಾರುಕಟ್ಟೆಯಲ್ಲಿರುವ ಅಂಗಡಿಯಲ್ಲಿ ಕುಶಲಕರ್ಮಿಗಳು ಚಿನ್ನಾಭರಣ ತಯಾರಿಕೆಯಲ್ಲಿ ತೊಡಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಚಾನಕ್ ಆಗಿ ಅಂಗಡಿಯೊಳಗೆ ಪ್ರವೇಶಿಸಿದ ಪಾರಿವಾಳವು ಸುಮಾರು 1 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ತನ್ನ ಕೊಕ್ಕಿನಲ್ಲಿ ಸಿಕ್ಕಿಸಿಕೊಂಡು ಹೊರಗೆ ಹಾರಿದುದರಿಂದ ಅಂಗಡಿ ಮಾಲೀಕರು ಮತ್ತು ಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ.
ಕ್ಷಣಾರ್ಧದಲ್ಲಿ ಈ ವಿಷಯ ಇಡೀ ಮಾರುಕಟ್ಟೆಯಲ್ಲೇ ಹರಡಿದ್ದು, ಅಂಗಡಿಯ ಎದುರು ಜನಸ್ತೋಮವೇ ಸೇರಿತು. ಪರಿಸ್ಥಿತಿಯಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಪಾರಿವಾಳದ ಚಲನವಲನವನ್ನು ಆತಂಕದಿಂದ ಗಮನಿಸುತ್ತಿದ್ದರು. ಹಾರಿಹೋದ ಪಾರಿವಾಳ ಸಮೀಪದ ಮಾರುಕಟ್ಟೆಯ ಛಾವಣಿಯ ಮೇಲೆ ಕುಳಿತುಕೊಂಡು ದೀರ್ಘ ಸಮಯ ಅಲ್ಲಿಯೇ ಉಳಿದಿದ್ದು, ಕೆಳಗಿದ್ದ ಜನರ ಚಟುವಟಿಕೆಯನ್ನು ಶಾಂತವಾಗಿ ಗಮನಿಸುತ್ತಿದ್ದ ದೃಶ್ಯ ಕಂಡುಬಂತು.
ಅಂಗಡಿ ಮಾಲೀಕರು ಹಾಗೂ ಇತರ ವ್ಯಾಪಾರಿಗಳು ಏನು ಕ್ರಮ ಕೈಗೊಳ್ಳಬೇಕು ಎಂಬ ಗೊಂದಲದಲ್ಲೇ ಕೆಲಕಾಲ ಕಾಲ ಕಳೆಯಬೇಕಾಯಿತು. ಹಲವು ಪ್ರಯತ್ನಗಳು ನಡೆದರೂ ಪಾರಿವಾಳವನ್ನು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಪಾರಿವಾಳ ಮತ್ತೊಮ್ಮೆ ಹಾರಿದ ವೇಳೆ, ಅದರ ಕೊಕ್ಕಿನಲ್ಲಿ ಇದ್ದ ಚಿನ್ನದ ಸರ ಜಾರಿ ಕೆಳಗೆ ಬಿದ್ದಿದೆ.
ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಸುರಕ್ಷಿತವಾಗಿ ಮರಳಿ ದೊರಕುತ್ತಿದ್ದಂತೆ ಅಂಗಡಿ ಮಾಲೀಕರು ನಿಟ್ಟುಸಿರು ಬಿಟ್ಟಿದ್ದು, ಸ್ಥಳದಲ್ಲಿದ್ದ ಜನರೂ ನಿರಾಳರಾದರು. ಈ ವಿಚಿತ್ರ ಮತ್ತು ಅಪರೂಪದ ಘಟನೆ ಮಾರುಕಟ್ಟೆಯಲ್ಲಿ ಕೆಲಕಾಲ ಚರ್ಚೆಯ ವಿಷಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿ ವೈರಲ್ ಆಗುತ್ತಿದೆ.
In a bizarre incident in Rajasthan’s Degana town, a pigeon flew into a jewellery shop and picked up a gold chain worth ₹1 lakh in its beak, leaving locals stunned. The bird later dropped the chain from a nearby rooftop, bringing relief to the shop owner. The unusual episode has since gone viral on social media.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am