ಒಂಟಿ ಮಹಿಳೆ ಮನೆಗೆ ನುಗ್ಗಿ ಸುಲಿಗೆ ; ಸಿಸಿಬಿ ಪೊಲೀಸರಿಂದ ಮೂವರ ಬಂಧನ, ಮಹಿಳೆ ಬಗ್ಗೆ ತಿಳಿದವರಿಂದಲೇ ಕೃತ್ಯ

16-09-22 09:33 pm       Mangalore Correspondent   ಕ್ರೈಂ

ಒಂಟಿ ಮಹಿಳೆ ವಾಸವಿದ್ದ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆ ಅದುಮಿಟ್ಟು ತಲವಾರು ತೋರಿಸಿ ಆಕೆಯಲ್ಲಿದ್ದ ಕರಿಮಣಿ ಸರ ಮತ್ತು ಎರಡು ಚಿನ್ನದ ಬಳೆಗಳನ್ನು ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳೂರು, ಸೆ.16: ಒಂಟಿ ಮಹಿಳೆ ವಾಸವಿದ್ದ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆ ಅದುಮಿಟ್ಟು ತಲವಾರು ತೋರಿಸಿ ಆಕೆಯಲ್ಲಿದ್ದ ಕರಿಮಣಿ ಸರ ಮತ್ತು ಎರಡು ಚಿನ್ನದ ಬಳೆಗಳನ್ನು ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂಡುಬಿದ್ರೆ ಬಳಿಯ ಅಶ್ವತ್ಥಪುರದ ಬೆರಿಂಜೆಗುಡ್ಡೆ ಎಂಬಲ್ಲಿ ಆಗಸ್ಟ್ 30ರಂದು ರಾತ್ರಿ 10.30 ಗಂಟೆಗೆ ಕೃತ್ಯ ನಡೆದಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಅಶ್ವತ್ಥಪುರ ನಿವಾಸಿ ದಿನೇಶ್ ಪೂಜಾರಿ(36), ಮರೋಡಿ ಗ್ರಾಮದ ಸುಕೇಶ್ ಪೂಜಾರಿ(32), ಮೂಡು ಮಾರ್ನಾಡಿನ ಹರೀಶ್ ಪೂಜಾರಿ(34) ಎಂಬವರನ್ನು ಬಂಧಿಸಿದ್ದಾರೆ.

ತಲೆಗೆ ಮಂಕಿ ಕ್ಯಾಪ್ ಧರಿಸಿಕೊಂಡು ಕೈಗೆ ಗ್ಲೌಸ್ ಹಾಕ್ಕೊಂಡಿದ್ದ ಖದೀಮರು, ಒಂಟಿಯಾಗಿ ವಾಸವಿದ್ದ ಕಮಲ ಎಂಬವರನ್ನು ತಲವಾರು ತೋರಿಸಿ ದೋಚಿದ್ದರು. ಈ ಬಗ್ಗೆ ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಸಿಸಿಬಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಬೆನ್ನು ಬಿದ್ದ ಪೊಲೀಸರು ಆರೋಪಿಗಳು ಕಳವುಗೈದ ಚಿನ್ನಾಭರಣವನ್ನು ಮಂಗಳೂರಿನ ಜುವೆಲ್ಲರಿಗೆ ಮಾರಾಟ ಮಾಡಲು ತರುತ್ತಿದ್ದಾರೆಂಬ ಮಾಹಿತಿ ಮೇರೆಗೆ ಕುಲಶೇಖರದಲ್ಲಿ ಅಡ್ಡಹಾಕಿದ್ದಾರೆ. ಚಿನ್ನಾಭರಣ ಸಹಿತ ಎರಡು ಸ್ಕೂಟರ್, ಮೂರು ಮೊಬೈಲ್ ಫೋನ್, ತಲವಾರು, ಮಂಕಿ ಕ್ಯಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯವರಾಗಿದ್ದು, ಈ ಹಿಂದೆ ಮೂಡುಬಿದ್ರೆ ಠಾಣೆ ವ್ಯಾಪ್ತಿಯಲ್ಲಿ ಅಡಿಕೆ ಕದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಸುಕೇಶ್ ಪೂಜಾರಿ ವಿರುದ್ಧ ಪೋಕ್ಸೋ ಪ್ರಕರಣವೂ ದಾಖಲಾಗಿತ್ತು. ಮಣಿಪಾಲ ಠಾಣೆಯಲ್ಲಿ ಕೊಲೆಯತ್ನ ಪ್ರಕರಣವನ್ನೂ ಎದುರಿಸುತ್ತಿದ್ದಾನೆ. ಒಂಟಿ ಮಹಿಳೆಯ ಬಗ್ಗೆ ತಿಳಿದಿದ್ದ ಆರೋಪಿಗಳು, ಈಕೆಯನ್ನು ದೋಚಿದರೆ ಯಾರು ಕೂಡ ಸಹಾಯಕ್ಕೆ ಬರಲ್ಲವೆಂದು ಪ್ಲಾನ್ ಮಾಡಿ ಸುಲಿಗೆ ಮಾಡಿದ್ದರು.

CCB police of the city arrested three men accused of barging into the house of home alone woman at Ashwathapura of Moodbidri and looting gold ornaments.The arrested accused are Dinesh Poojary (36), Sukesh Poojary (32) and Harish Poojary (34). Gold ornaments weighing 62 grams, two scooters, three mobile phone, one sword, two monkey caps are confiscated from the arrested. The total value of the confiscated goods is Rs 4.5 lac.