ಲೋಕಾಯುಕ್ತ ಸೋಗಿನಲ್ಲಿ ತಾಲೂಕು ಕಚೇರಿಗೆ ಎಂಟ್ರಿ, ತಹಸೀಲ್ದಾರ್ ವಿಚಾರಣೆ ! ಐಡಿ ಕೇಳಿದಾಗ ಓಟಕ್ಕಿತ್ತ ನಕಲಿ ಅಧಿಕಾರಿ 

23-09-22 02:08 pm       HK News Desk   ಕ್ರೈಂ

ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ ನಡೆಸಿದ ವ್ಯಕ್ತಿಯೊಬ್ಬ ಟಿಪ್ ಟಾಪ್ ಆಗಿ ಬಂದು ತಹಶೀಲ್ದಾರ್ ಅವರನ್ನೇ ವಿಚಾರಣೆಗೊಳಪಡಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ತಹಸೀಲ್ದಾರ್ ಪೊಲೀಸ್ ದೂರು ನೀಡಿದ್ದಾರೆ. 

ಚಿಕ್ಕಬಳ್ಳಾಪುರ, ಸೆ.23: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ತಾಲ್ಲೂಕು ಕಚೇರಿಗೆ ದಾಳಿ ನಡೆಸಿದ ವ್ಯಕ್ತಿಯೊಬ್ಬ ಟಿಪ್ ಟಾಪ್ ಆಗಿ ಬಂದು ತಹಶೀಲ್ದಾರ್ ಅವರನ್ನೇ ವಿಚಾರಣೆಗೊಳಪಡಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ತಹಸೀಲ್ದಾರ್ ಪೊಲೀಸ್ ದೂರು ನೀಡಿದ್ದಾರೆ. 

ಫೈಲ್ ಹಿಡಿದು ಬಂದಿದ್ದ ವ್ಯಕ್ತಿ ಧಿಮಾಕಿನ ಶೈಲಿಯಲ್ಲಿ ತಹಶೀಲ್ದಾರನ್ನು ವಿಚಾರಣೆ ನಡೆಸಿದ್ದು ಲೋಕಾಯುಕ್ತರ ರೀತಿ ಪೋಸು ನೀಡಿದ್ದ. ಆದರೆ ವ್ಯಕ್ತಿಯ ಚಲನವಲನದಿಂದ ಅನುಮಾನಗೊಂಡ ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಲೋಕಾಯುಕ್ತ ಅಧಿಕಾರಿ ಎನ್ನುವ ಬಗ್ಗೆ ಐಡಿ ತೋರಿಸುವಂತೆ ಹೇಳಿದ್ದಾರೆ. ದಾಖಲೆ ಕೇಳುತ್ತಿದ್ದಂತೆ ನಕಲಿ ಅಧಿಕಾರಿ ಹೊರಗೆ ಓಡಿದ್ದು ತಪ್ಪಿಸಿಕೊಂಡಿದ್ದಾನೆ. 

Delhi Police bust interstate gang of cyber frauds, arrest five - India News

ತಹಶೀಲ್ದಾರ್ ಗಣಪತಿ ಶಾಸ್ತ್ರಿ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಫೈಲ್ ನಲ್ಲಿ ಯಾವುದೋ ದಾಖಲೆ ಹಿಡ್ಕೊಂಡು ಬಂದಿದ್ದು ಬೆದರಿಸಿ ಹಣ ವಸೂಲಿಗಾಗಿ ಬಂದಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ. ಕೈಯಲ್ಲಿ ಫೈಲ್ ಹಿಡಿದು ಏನೋ ಅಕ್ರಮದ ಬಗ್ಗೆ ದಾಖಲೆ ತೋರಿಸಿ ‌ಬೆದರಿಸುವ ತಂತ್ರ ಮಾಡಿದ್ದ. ಆದರೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಪಡೆದು ತಹಶೀಲ್ದಾರ್ ಹುದ್ದೆ ಗಿಟ್ಟಿಸಿಕೊಂಡಿದ್ದ ಗಣಪತಿ ಶಾಸ್ತ್ರಿ ಇದರಿಂದ ಧೃತಿಗೆಡದೆ ನಕಲಿ ಅಧಿಕಾರಿಯನ್ನೇ ಪ್ರಶ್ನಿಸಿದ್ದಾರೆ. 

ಅಧಿಕಾರಿಯನ್ನು ಬೆದರಿಸಿ ಹಣ ಕೀಳಬಹುದೆಂದು ಬಂದಿದ್ದ ವ್ಯಕ್ತಿಯೇ ಕೊನೆಗೆ ಪೇಚಿಗೆ ಸಿಲುಕಿದ್ದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿದೆ. ತಹಶೀಲ್ದಾರ್ ಗಣಪತಿಶಾಸ್ತ್ರಿ ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Chikkaballapur Man Poses as Lokayukta officer and investigates Thalisadar, runs when asked to show his ID card.