ವೇಶ್ಯಾವಾಟಿಕೆಗೆ ನಿರಾಕರಿಸಿದ್ದಕ್ಕೆ ಯುವತಿ ಕೊಲೆ ; ಋಷಿಕೇಶದಲ್ಲಿ ಭಾರೀ ಪ್ರತಿಭಟನೆ, ರೆಸಾರ್ಟಿಗೆ ಬೆಂಕಿ, ಬಿಜೆಪಿ ಮುಖಂಡನ ಪುತ್ರ ಅರೆಸ್ಟ್ !  

24-09-22 04:16 pm       HK News Desk   ಕ್ರೈಂ

ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡನ ಪುತ್ರನಿಗೆ ಸೇರಿದ ರೆಸಾರ್ಟಿನಲ್ಲಿ 19 ವರ್ಷದ ರಿಸೆಪ್ಶನಿಸ್ಟ್ ಯುವತಿ ಕೊಲೆಯಾದ ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಋಷಿಕೇಶ, ಸೆ.24: ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡನ ಪುತ್ರನಿಗೆ ಸೇರಿದ ರೆಸಾರ್ಟಿನಲ್ಲಿ 19 ವರ್ಷದ ರಿಸೆಪ್ಶನಿಸ್ಟ್ ಯುವತಿ ಕೊಲೆಯಾದ ಪ್ರಕರಣ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಋಷಿಕೇಶದಲ್ಲಿ ಜನರು ಭಾರೀ ಪ್ರತಿಭಟನೆ ನಡೆಸಿದ್ದು, ಅಕ್ರಮ ರೆಸಾರ್ಟಿಗೆ ಬೆಂಕಿ ಹಾಕಿದ್ದಾರೆ. ಇದೇ ವೇಳೆ, ಯುವತಿಯ ಕೊಲೆಗೆ ರೆಸಾರ್ಟ್ ಗ್ರಾಹಕರ ಜೊತೆ ವೇಶ್ಯಾವಾಟಿಕೆಗೆ ನಿರಾಕರಿಸಿದ್ದೇ ಕಾರಣ ಎನ್ನುವ ಮಾತು ಕೇಳಿಬಂದಿದೆ.

ಇದರ ಬೆನ್ನಲ್ಲೇ ಬಿಜೆಪಿಯಿಂದ ಆರೋಪಿಯ ತಂದೆಯನ್ನು ಉಚ್ಚಾಟನೆ ಮಾಡಿದ್ದರೆ, ಮತ್ತೊಂದೆಡೆ ರೆಸಾರ್ಟನ್ನು ನೆಲಸಮ ಮಾಡಲು ಸಿಎಂ ಪುಷ್ಕರ್ ಸಿಂಗ್ ಧಾಮಿ ಆದೇಶ ಮಾಡಿದ್ದಾರೆ. ಇದೇ ವೇಳೆ, ಏಳು ದಿನಗಳಿಂದ ನಾಪತ್ತೆಯಾಗಿದ್ದ ಯುವತಿಯ ಶವ ರೆಸಾರ್ಟ್ ಪಕ್ಕದಲ್ಲಿಯೇ ಕಾಲುವೆಯಲ್ಲಿ ಪತ್ತೆಯಾಗಿದೆ. ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಅಂಕಿತ್ ಗುಪ್ತ ಮತ್ತು ಸೌರಭ್ ಭಾಸ್ಕರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲಿಗೆ ಅಪಹರಣ ಎಂದು ದಾಖಲಿಸಲಾಗಿದ್ದ ಪ್ರಕರಣವನ್ನು ಈಗ ಕೊಲೆಯಾಗಿ ಪರಿವರ್ತನೆ ಮಾಡಲಾಗಿದೆ.

Ankita Bhandari murder case: Body recovered from barrage in Rishikesh; CM  Pushkar Singh Dhami orders SIT probe | Dehradun News - Times of India

ಯುವತಿಯನ್ನು ರೆಸಾರ್ಟಿನಲ್ಲಿ ಗ್ರಾಹಕರ ಜೊತೆ ಸಹಕರಿಸುವಂತೆ ಮತ್ತು ವೇಶ್ಯಾವಾಟಿಕೆಗೆ ಬಲವಂತ ಪಡಿಸಲಾಗಿತ್ತು ಎನ್ನುವ ಆರೋಪಗಳು ಕೇಳಿಬಂದಿವೆ. ರಿಸೆಪ್ಶನಿಸ್ಟ್ ಆಗಿದ್ದ ಯುವತಿಯನ್ನು ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ತನ್ನ ಸೋದರನೊಂದಿಗೆ ಮಲಗುವಂತೆ ಒತ್ತಾಯ ಪಡಿಸಿದ್ದ. ಅಲ್ಲದೆ, ಗ್ರಾಹಕರಿಗೆ ವಿಶೇಷ ಸೇವೆ ನೀಡುವಂತೆ ಬಲವಂತ ಪಡಿಸುತ್ತಿದ್ದ. ಇದರಿಂದ ನೊಂದಿದ್ದ ಯುವತಿ ಅಂಕಿತ್ ಭಂಡಾರಿ ಮತ್ತು ಪುಲ್ಕಿತ್ ಆರ್ಯ ನಡುವೆ ಜಗಳ ಆಗಿತ್ತು. ಇದೇ ವಿಚಾರದಲ್ಲಿ ಗಲಾಟೆ ನಡೆದು ಯುವತಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.

Ankita Bhandari murder case: Uttarakhand BJP leader Vinod Arya expelled  after son's arrest - India News

ಘಟನೆ ಬಗ್ಗೆ ತನಿಖೆ ನಡೆಸಲು ಡಿಐಜಿ ರೇಣುಕಾ ದೇವಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಅಲ್ಲದೆ, ಅಕ್ರಮವಾಗಿ ಕಟ್ಟಲಾಗಿರುವ ರೆಸಾರ್ಟನ್ನು ಶುಕ್ರವಾರ ರಾತ್ರಿ ನೆಲಸಮ ಮಾಡಲಾಗಿದೆ. ಹೀನಾಯ ಕೃತ್ಯವನ್ನು ನಾವು ಒಪ್ಪುವುದಿಲ್ಲ. ಕಠಿಣ ಶಿಕ್ಷೆಯನ್ನೇ ಜಾರಿಗೊಳಿಸುತ್ತೇವೆ ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

Uttarakhand Receptionist Ankita Bhandari Killed Attack On BJP MLA Car SIT  Probe And Bulldozer At Resort Ankita Murder - 1BY1 News

ಪ್ರಮುಖ ಆರೋಪಿ ಪುಲ್ಕಿತ್ ಆರ್ಯನ ತಂದೆ ವಿನೋದ್ ಆರ್ಯ ಹರಿದ್ವಾರದ ಬಿಜೆಪಿ ಮುಖಂಡರಾಗಿದ್ದು, ಈ ಹಿಂದೆ ಸಚಿವರಾಗಿಯೂ ಕೆಲಸ ಮಾಡಿದ್ದರು. ಅಲ್ಲದೆ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದರು. ಪುಲ್ಕಿತ್ ಆರ್ಯನ ಇನ್ನೊಬ್ಬ ಸೋದರ ಅಂಕಿತ್ ಆರ್ಯ, ಉತ್ತರಾಖಂಡ ಓಬಿಸಿ ಮೋರ್ಚಾ ವೆಲ್ಫೇರ್ ಕಮಿಷನ್ ಮಾಜಿ ಉಪಾಧ್ಯಕ್ಷರಾಗಿದ್ದರು. ಕೃತ್ಯದ ಹಿನ್ನೆಲೆಯಲ್ಲಿ ತಂದೆ ವಿನೋದ್ ಆರ್ಯ ಮತ್ತು ಮಗ ಅಂಕಿತ್ ಆರ್ಯ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

Uttarakhand : Murder of resort receptionist missing for five days, son of  former minister of state arrested on charges – News Cubic Studio

ಕೊಲೆಯಾದ ಅಂಕಿತಾ ಭಂಡಾರಿಯ ಗೆಳೆಯ ಪುಷ್ಪ್ ದೀಪ್ ಹೇಳುವ ಪ್ರಕಾರ, ಕೊಲೆಯಾಗುವುದಕ್ಕೂ ಮುನ್ನ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮಹತ್ವದ ಕೆಲಸಕ್ಕಾಗಿ ಅಂಕಿತ್ ಭಂಡಾರಿಯನ್ನು ರಿಷಿಕೇಶಕ್ಕೆ ಕರೆದೊಯ್ದಿದ್ದ. ಈ ಬಗ್ಗೆ ಅಂಕಿತಾ ತನ್ನಲ್ಲಿ ಹೇಳಿಕೊಂಡಿದ್ದಳು ಸೆ.18ರಂದು ಕರೆ ಮಾಡಿದಾಗ ಆಕೆಯ ಮೊಬೈಲ್ ಸ್ವಿಚ್ ಆಫ್ ಬರುತ್ತಿತ್ತು. ಬಳಿಕ ಪುಲ್ಕಿತ್ ಗೆ ಕರೆ ಮಾಡಿದಾಗ, ಅವಳು ತನ್ನ ಕೊಠಡಿಯಲ್ಲಿ ಮಲಗಿದ್ದಾಳೆಂದು ಹೇಳಿದ್ದ ಎಂಬುದಾಗಿ ತಿಳಿಸಿದ್ದಾರೆ.

Ankita Bhandari murder case: Angry villagers set accused's resort on fire  after body found near canal; SIT probe ordered

ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದವರು ರೊಚ್ಚಿಗೆದ್ದು ರೆಸಾರ್ಟಿಗೆ ಬೆಂಕಿ ಕೊಟ್ಟಿದ್ದರು. ಸ್ಥಳಕ್ಕೆ ಬಂದ ಸ್ಥಳೀಯ ಬಿಜೆಪಿ ಶಾಸಕಿ ರೇಣು ಬಿಶ್ತ್ ಅವರ ಕಾರಿಗೂ ಬೆಂಕಿ ಹಾಕಿದ್ದಾರೆ. ಅಲ್ಲದೆ, ಕಲ್ಲೆಸೆದು ರೆಸಾರ್ಟ್ ಹಾನಿ ಮಾಡಿದ್ದಾರೆ. ಇದರ ಬೆನ್ನಲ್ಲೇ ರೆಸಾರ್ಟ್ ನೆಲಸಮ ಮಾಡುವುದಕ್ಕೆ ಮುಖ್ಯಮಂತ್ರಿ ಆದೇಶ ಮಾಡಿದ್ದು, ರಾತ್ರೋರಾತ್ರಿ ಜೆಸಿಬಿ ತರಿಸಿ ರೆಸಾರ್ಟ್ ಕಟ್ಟಡವನ್ನು ಒಡೆದು ಹಾಕಲಾಗಿದೆ.

The body of Ankita Bhandari, a 19-year-old receptionist who went missing on the premises of a private resort owned by BJP leader's son Pulkit Arya, was found near Chilla power house in Uttarakhand's Rishikesh on Saturday. Three people, including Pulkit Arya, were arrested in the case on Friday, after which civic authorities carried out demolition at the resort overnight following the orders of Uttarakhand Chief Minister Pushkar Singh Dhami.