ಸುರತ್ಕಲ್ ನಲ್ಲಿ ಚಿಟ್ ಫಂಡ್ ಹೆಸರಲ್ಲಿ ಮೋಸ ; ಎರಡು ಕೋಟಿಗೂ ಹೆಚ್ಚು ದೋಖಾ ಬಗ್ಗೆ ದೂರು  

27-09-22 05:29 pm       Mangalore Correspondent   ಕ್ರೈಂ

ಚಿಟ್ ಫಂಡ್ ಹೆಸರಲ್ಲಿ ಹಣ ಪಡೆದು ಹತ್ತು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾಗಿ ಇಬ್ಬರು ಮಹಿಳೆಯರ ಸಹಿತ ಮೂವರ ವಿರುದ್ಧ ವ್ಯಕ್ತಿಯೊಬ್ಬರು ನಗರದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಂಗಳೂರು, ಸೆ.27: ಚಿಟ್ ಫಂಡ್ ಹೆಸರಲ್ಲಿ ಹಣ ಪಡೆದು ಹತ್ತು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾಗಿ ಇಬ್ಬರು ಮಹಿಳೆಯರ ಸಹಿತ ಮೂವರ ವಿರುದ್ಧ ವ್ಯಕ್ತಿಯೊಬ್ಬರು ನಗರದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಶೋಕ ಭಟ್, ವಿದ್ಯಾ ಮತ್ತು ಪ್ರಿಯಾಂಕ ಭಟ್ ಎಂಬವರು ಸುರತ್ಕಲ್ ನಲ್ಲಿ ಫೈನಾನ್ಸ್ ಹೆಸರಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದರು. ದೂರುದಾರರಿಂದ ಪ್ರತಿ ದಿನ 1500 ರೂ.ನಂತೆ ಚಿಟ್ ಫಂಡ್ ಹೆಸರಲ್ಲಿ ಸಂಗ್ರಹ ಮಾಡುತ್ತಿದ್ದರು. ಹತ್ತು ಲಕ್ಷ ರೂಪಾಯಿ ಮೊತ್ತದ ಚಿಟ್ ಫಂಡ್ ಎಂದು ಹೇಳಿದ್ದರು.

Chit fund scam: Having lost life-long savings, investors wait in agony for  their money

ಹತ್ತು ಲಕ್ಷ ರೂ. ಮೊತ್ತದ ಚಿಟ್ ಫಂಡ್ ಆರೋಪಿಗಳು ಹಣ ಸಂಗ್ರಹಿಸುತ್ತಿದ್ದರು. ತಿಂಗಳಲ್ಲಿ ಒಮ್ಮೆ ಸುರತ್ಕಲ್ ಬಳಿಯ ಇಡ್ಯಾದಲ್ಲಿರುವ ಕಚೇರಿಗೆ ತೆರಳಿ ದೂರುದಾರರು ಪಾಸ್ ಬುಕ್ ಅಪ್ಡೇಟ್ ಮಾಡುತ್ತಿದ್ದರು. ಆದರೆ 2021ರ ಮಾರ್ಚ್ ತಿಂಗಳಲ್ಲಿ ಚಿಟ್ ಫಂಡ್ ಕಚೇರಿಯನ್ನು ದಿಢೀರ್ ಮುಚ್ಚಲಾಗಿತ್ತು.

ಹಣ ಕೇಳಿದ್ದಕ್ಕೆ ಸ್ವಲ್ಪ ತಡವಾಗಿ ಹಣ ಹಿಂತಿರುಗಿಸುತ್ತೇವೆ ಎಂದು ಹೇಳುತ್ತಾ ಬಂದಿದ್ದರು. ಆದರೆ ಈತನಕವೂ ಹಣ ನೀಡದೆ ಸತಾಯಿಸಿದ್ದಾರೆ. ಇದೇ ರೀತಿ ಸುರತ್ಕಲ್ ಪರಿಸರದ ಹಲವಾರು ಮಂದಿ ಹಣ ಕಳಕೊಂಡಿದ್ದು ಎರಡು ಕೋಟಿಗೂ ಹೆಚ್ಚು ವಂಚನೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೈಬರ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

A man has filed complaint against three people accusing them of cheating Rs 10 lac due to him. In the complaint filed with CEN police, the complainant, victim of fraud said that Ashok Bhat, Vidya and Priyanka Bhat, who were doing chit fund business through a finance company at Idya village of Surathkal, had not given Rs 10 lac that is due to him.