ಕೊಯಂಬತ್ತೂರಿನಲ್ಲಿ ಕಾರು ಸ್ಫೋಟ ; ಆತ್ಮಹತ್ಯಾ ದಾಳಿಗೆ ಯೋಜಿಸಿದ್ದನೇ ಜಯೇಶಾ ಮುಬೀನ್ ? ಉಗ್ರವಾದಿ ಕೃತ್ಯದ ಪ್ರಬಲ ಶಂಕೆ, ದೇವಸ್ಥಾನ ಸ್ಫೋಟಕ್ಕೆ ಸಂಚು !

25-10-22 02:56 pm       HK News Desk   ಕ್ರೈಂ

ಅ.23ರ ಭಾನುವಾರ ನಸುಕಿನಲ್ಲಿ ಕೊಯಂಬತ್ತೂರು ನಗರದ ಕೊಟ್ಟಾಯಮೇಡು ಎಂಬಲ್ಲಿ ಮಾರುತಿ 800 ಕಾರು ಸ್ಫೋಟಗೊಂಡಿತ್ತು.

ಕೊಯಂಬತ್ತೂರು, ಅ.25: ಅ.23ರ ಭಾನುವಾರ ನಸುಕಿನಲ್ಲಿ ಕೊಯಂಬತ್ತೂರು ನಗರದ ಕೊಟ್ಟಾಯಮೇಡು ಎಂಬಲ್ಲಿ ಮಾರುತಿ 800 ಕಾರು ಸ್ಫೋಟಗೊಂಡಿತ್ತು. ಮೊದಲಿಗೆ, ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಡೆದಿರುವ ಆಕಸ್ಮಿಕ ಘಟನೆ ಎಂದೇ ಹೇಳಲಾಗಿತ್ತು. ಆದರೆ, ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಭಯಾನಕ ವಿಚಾರಗಳು ಬಯಲಿಗೆ ಬರುತ್ತಿವೆ. ಘಟನೆಯಲ್ಲಿ ಜಮೇಶಾ ಮುಬೀನ್ ಎಂಬಾತ ಮೃತಪಟ್ಟಿದ್ದು, ಅಲ್ಲಿನ ದೇವಸ್ಥಾನ ಒಂದಕ್ಕೆ ಆತ್ಮಹತ್ಯಾ ದಾಳಿಗೆ ಸಂಚು ರೂಪಿಸಿದ್ದನೇ ಅನ್ನುವ ಸಂಶಯ ಕೇಳಿಬಂದಿದೆ.

ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟದಂತೆ ಕಂಡಿದ್ದರೂ, ಕಾರಿನಲ್ಲಿ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿರುವುದು ಸಹಜ ಘಟನೆಯಲ್ಲ ಎನ್ನುವುದಕ್ಕೆ ಸಾಕ್ಷಿ ಎನ್ನಲಾಗುತ್ತಿದೆ. 2019ರಲ್ಲಿ ಶ್ರೀಲಂಕಾದ ಚರ್ಚ್ ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಜಯೇಶಾ ಮುಬೀನ್ ನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಐಸಿಸ್ ಪ್ರೇರಿತನಾಗಿರುವುದು, ಜಾಲತಾಣದಲ್ಲಿ ಐಸಿಸ್ ಪ್ರೇರಿತ ವಿಚಾರಗಳನ್ನು ಹಂಚಿಕೊಂಡಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದರು. ಅಲ್ಲದೆ, ಉಗ್ರವಾದಿ ಲಿಂಕ್ ಇರುವ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದರು.

Five arrested in Coimbatore blast case where suspected ISIS suicide bomber  Jamesha Mubin died inside car that exploded near temple

ಇದೀಗ ಜಯೇಶಾ ಜೊತೆಗೆ ಹತ್ತಿರದ ನಂಟು ಹೊಂದಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ತಾಲ್ಕಾ(25), ಮಹಮ್ಮದ್ ಅಜರುದ್ದೀನ್(23), ಮಹಮ್ಮದ್ ರಿಯಾಜ್(27), ಫಿರೋಜ್ ಇಸ್ಮಾಯಿಲ್(27), ಮಹಮ್ಮದ್ ನವಾಜ್ ಇಸ್ಮಾಯಿಲ್ (27) ಬಂಧಿತರು. ಭಾನುವಾರ ನಸುಕಿನ 4 ಗಂಟೆಗೆ ಸ್ಫೋಟ ನಡೆದಿತ್ತು. ಆದರೆ ಮುನ್ನಾದಿನ ರಾತ್ರಿ 11.30ರ ವೇಳೆಗೆ ಜಯೇಶಾ ಮುಬೀನ್ ಮನೆಯಿಂದ ಗೋಣಿ ಚೀಲದಲ್ಲಿ ಭಾರದ ವಸ್ತುವೊಂದನ್ನು ಒಯ್ಯುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಅದರಲ್ಲಿ ಭಾಗಿಯಾದವರು ಎನ್ನಲಾದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಜಯೇಶಾ ಮುಬೀನ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಎರಡು ಗ್ಯಾಸ್ ಸಿಲಿಂಡರ್ ಗಳಿದ್ದವು. ಅದರಲ್ಲಿ ಒಂದು ಬ್ಲಾಸ್ಟ್ ಆಗಿದೆ. ಮತ್ತೊಂದು ಬ್ಲಾಸ್ಟ್ ಆಗದೇ ಉಳಿದುಕೊಂಡಿದೆ. ಅದಲ್ಲದೆ, ಅಲ್ಯುಮಿನಿಯಂ ಪೌಡರ್, ಪೊಟ್ಯಾಶಿಯಂ ನೈಟ್ರೇಟ್, ಸಲ್ಫೇಟ್ ಪುಡಿಗಳು ಪತ್ತೆಯಾಗಿದ್ದು, ಪ್ರಬಲ ಸ್ಫೋಟಕ ತಯಾರಿಗಾಗಿ ಜಯೇಶಾ ಮುಬೀನ್ ಇವನ್ನು ರೆಡಿ ಮಾಡಿಕೊಂಡಿದ್ದ ಅನ್ನುವುದಕ್ಕೆ ಪುಷ್ಟಿ ನೀಡುತ್ತಿದೆ. ಜಯೇಶಾ ಮುಬೀನ್ ಉಕ್ಕಡಂ ನಿವಾಸಿ. ಕೋಮು ಗಲಭೆಗೆ ಕಾರಣವಾಗಿದ್ದ ಪ್ರದೇಶವೂ ಹೌದು.. ಅದೇ ಏರಿಯಾದ ಕೋಟೈ ಈಶ್ವರ ದೇವಸ್ಥಾನದ ಮುಂಭಾಗದಲ್ಲಿಯೇ ಕಾರು ಸ್ಫೋಟಗೊಂಡಿದೆ. ಹೀಗಾಗಿ ಜಯೇಶಾ ಮುಬೀನ್ ದೇವಸ್ಥಾನದ ಮುಂದೆ ಪ್ರಬಲ ಬ್ಲಾಸ್ಟ್ ನಡೆಸುವುದಕ್ಕಾಗಿ ಯೋಜಿಸಿದ್ದನೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tamil Nadu cops probe terror angle after cylinder blast in Coimbatore  leaves 1 dead - India Today

ಆತ್ಮಹತ್ಯಾ ದಾಳಿಗೆ ಸಂಚು ನಡೆಸಿದ್ದನೇ ?

ಘಟನೆಯಲ್ಲಿ ಮೃತಪಟ್ಟಿರುವ ಜಯೇಶಾ ಮುಬೀನ್ ಆತ್ಮಹತ್ಯಾ ದಾಳಿಗೆ ಸಂಚು ರೂಪಿಸಿದ್ದನೇ ಎನ್ನುವ ಶಂಕೆಯೂ ವ್ಯಕ್ತವಾಗಿದೆ. ಇಂಥ ಶಂಕೆಗೆ ಕಾರಣವಾಗಿದ್ದು, ಆತ ಮುನ್ನಾದಿನ ಮೊಬೈಲಿನಲ್ಲಿ ಹಾಕ್ಕೊಂಡಿದ್ದ ಸ್ಟೇಟಸ್. ನೀವೇನಾದ್ರೂ ನನ್ನ ಸಾವಿನ ಸುದ್ದಿ ಕೇಳಿದರೆ, ನನ್ನ ತಪ್ಪುಗಳನ್ನು ಮನ್ನಿಸಿಬಿಡಿ. ಅಚಾತುರ್ಯಗಳನ್ನು ಮರೆತು ಬಿಡಿ. ನನಗಾಗಿ ಪ್ರಾರ್ಥಿಸಿ, ಅಲ್ಲದೆ, ಜನ ಹಿತಕ್ಕಾಗಿ ಕೈಜೋಡಿಸಿ ಎಂದು ಬರೆದುಕೊಂಡಿದ್ದ. ಹೀಗಾಗಿ ಜಯೇಶಾ ಮುಬೀನ್, ಈಶ್ವರ ದೇವಸ್ಥಾನದಲ್ಲಿ ಬೆಳಗ್ಗಿನ ಹೊತ್ತಲ್ಲಿ ಜನ ಸೇರುವ ಸಂದರ್ಭದಲ್ಲಿ ಆತ್ಮಹತ್ಯಾ ದಾಳಿಗೆ ಯೋಜಿಸಿದ್ದನೇ ಅನ್ನುವ ಸಂಶಯವೂ ಮೂಡಿದೆ. ಏನೋ ಎಡವಟ್ಟಾಗಿ ಅದಕ್ಕೂ ಮೊದಲೇ ಕಾರು ಸ್ಫೋಟಗೊಂಡಿತ್ತು ಅನ್ನುವ ಶಂಕೆಯನ್ನು ಪೊಲೀಸರು ಹೇಳುತ್ತಿದ್ದಾರೆ.

ಕಾರು ಮುಬೀನ್ ಗೆ ಸೇರಿದ್ದಾಗಿತ್ತು. ಆದರೆ ಇದಕ್ಕೂ ಹಿಂದೆ 8-9 ಜನರ ಕೈದಾಟಿ ಮುಬೀನ್ ಕೈಸೇರಿತ್ತು. ಹಳೆಯ ಕಾರಿನಲ್ಲಿ ದೇವಸ್ಥಾನದ ಮುಂಭಾಗಕ್ಕೆ ಬಂದಿರುವುದು, ನಸುಕಿನ 4 ಗಂಟೆ ವೇಳೆಗೆ ಅಲ್ಲಿಗೆ ಆಗಮಿಸಿದ್ದು, ಕಾರಿನಲ್ಲಿ ಸ್ಫೋಟಕ ಸಾಮಗ್ರಿ ಪತ್ತೆಯಾಗಿರುವುದು ಉಗ್ರವಾದಿ ನಂಟಿನ ಬಗ್ಗೆ ಬೆಳಕು ಹರಿಸಿದೆ. ಅಲ್ಲದೆ, ನಾನಾ ರೀತಿಯ ಶಂಕೆಗಳಿಗೆ ಕಾರಣವಾಗಿದ್ದು ಜನದಟ್ಟಣೆ ಏರ್ಪಡುವ ಸಂದರ್ಭದಲ್ಲಿ ಸ್ಫೋಟಿಸಲು ಯೋಜನೆ ಹಾಕಿದ್ದನೇ ಅಥವಾ ತನ್ನನ್ನು ತಾನು ಸ್ಫೋಟಿಸಿ ಒಂದಷ್ಟು ಜನರನ್ನು ಕೊಲ್ಲುವ ಯೋಜನೆ ಹಾಕಿದ್ದನೇ ಎಂಬ ಶಂಕೆಯೂ ಮೂಡಿದೆ. ಘಟನೆ ಬಗ್ಗೆ ತಮಿಳುನಾಡು ಪೊಲೀಸರ ಜೊತೆಗೆ ಎನ್ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

Exclusive | Coimbatore Blast Definite Act of Terror by Fidayeen:  Intelligence Sources to News18

Exclusive | Coimbatore Blast Definite Act of Terror by Fidayeen:  Intelligence Sources to News18

ಇದೇನು ಆತ್ಮಹತ್ಯಾ ದಾಳಿ ಘಟನೆ ಅಲ್ಲ  

ಘಟನೆ ಬಗ್ಗೆ ತಮಿಳುನಾಡು ಡಿಜಿಪಿ ಶೈಲೇಂದ್ರ ಬಾಬು ಹೇಳಿಕೆ ನೀಡಿದ್ದು, ಜಯೇಶಾ ಮುಬೀನ್ ಯಾವುದಾದ್ರೂ ನಿರ್ದಿಷ್ಟ ಸಂಘಟನೆಗೆ ಸೇರಿದ್ದನೇ ಅನ್ನುವುದು ತಿಳಿದಿಲ್ಲ. ಆದರೆ ಎನ್ಐಎ ನಿಗಾ ಇಟ್ಟಿದ್ದ ಕೆಲವರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದ. ಇದೇನು ಆತ್ಮಹತ್ಯಾ ದಾಳಿ ಅಲ್ಲ. ಕಾರಿನಲ್ಲಿ ಸ್ಫೋಟಕ ವಸ್ತು ಇದ್ದುದರಿಂದ ಒಂದಕ್ಕೊಂದು ಘರ್ಷಿಸಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ. ಆತನ ಮೊಬೈಲ್ ಕರೆಗಳನ್ನು ಆಧರಿಸಿ, ಯಾರ ಜೊತೆಗೆ ಸಂಪರ್ಕದಲ್ಲಿದ್ದ ಅನ್ನುವ ನೆಲೆಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಜಯೇಶಾ ಕಾರಿನಲ್ಲಿ ಸ್ಫೋಟಕ ಸಾಮಗ್ರಿ ಇಟ್ಟುಕೊಂಡು ಯಾವುದೋ ಉದ್ದೇಶ ಇಟ್ಟುಕೊಂಡು ತೆರಳುತ್ತಿದ್ದ. ಕಾರನ್ನು ದೇವಸ್ಥಾನದ ಮುಂಭಾಗದಲ್ಲಿ ಪಾರ್ಕ್ ಮಾಡಿದ್ದಾಗಲೇ ಸ್ಫೋಟ ಆಗಿದೆ. 2019ರಲ್ಲಿ ಶ್ರೀಲಂಕಾದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಜಯೇಶಾ ಮುಬೀನ್ ಮನೆಯಲ್ಲಿ ಶೋಧ ನಡೆಸಿದ್ದರು. ಆತನ ಹಿನ್ನೆಲೆ, ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.

A 25-year-old man died on October 22 in Coimbatore, Tamil Nadu, after an LPG cylinder in a vehicle exploded in the communally sensitive Kottaimedu region. A Jamesha Mubin of Kottaipudur, near GM Nagar in Ukkadam, has been identified as the deceased who triggered the Coimbatore blast. There was an explosion at about 4 am in a Maruti car just opposite the Kottai Eswaran temple in the Ukkadam area of Coimbatore. Two gas cylinders, marbles, and nails were found.