ಬ್ರೇಕಿಂಗ್ ನ್ಯೂಸ್
27-10-22 10:14 pm Mangalore Correspondent ಕ್ರೈಂ
ಉಳ್ಳಾಲ, ಅ.27: ಆತ ಹಿಂದಿನಿಂದಲೂ ಸ್ವಲ್ಪ ಸೈಕೋ ಆಗಿದ್ದ. ಪತ್ನಿ ಬಗ್ಗೆ ಸಂಶಯ ಪಡುವುದು, ಯಾರ ಜೊತೆ ಮಾತನಾಡಿದರೂ ಆತನ ಜೊತೆಗೆ ಕಟ್ಟಿಕೊಡುವುದು ನಡೆಯುವುದಿತ್ತು. ಇದೇ ವಿಚಾರದಲ್ಲಿ ಗಂಡ- ಹೆಂಡತಿ ಮಧ್ಯೆ ಜಗಳ ಕಾಮನ್ ಆಗಿತ್ತು. ಈ ಮಧ್ಯೆ ಹಲವು ಬಾರಿ ಆಕೆಯ ಅಣ್ಣನೇ ಸ್ವತಃ ತಂಗಿಯನ್ನು ಗಂಡನ ಬಿಟ್ಟು ಬರುವಂತೆ ಸಲಹೆ ಮಾಡಿದ್ದರು. ಆದರೆ ಮಕ್ಕಳು ದೊಡ್ಡವರಾಗಿದ್ದರಿಂದ ಅವರನ್ನು ಬಿಟ್ಟು ಬರುವುದು ಸರಿಯಾಗಲ್ಲ ಎಂದು ಆ ಮನೆಯಲ್ಲೇ ಇದ್ದು ಕೊರಗುತ್ತಿದ್ದರಂತೆ.
ತೊಕ್ಕೊಟ್ಟಿನ ಪಿಲಾರಿನಲ್ಲಿ ಗಂಡನಿಂದಲೇ ಕೊಲೆಯಾದ ಶೋಭಾ ಬಗ್ಗೆ ಅಲ್ಲಿ ಮರುಕ ಪಡುತ್ತಿದ್ದವರೇ ಹೆಚ್ಚು. ಸಂಬಂಧಿಕರು, ಸ್ಥಳೀಯರು ಎಲ್ಲ ಶೋಭಾ ಬಗ್ಗೆ ಅಮಾಯಕಿಯನ್ನು ಕೊಂದು ಬಿಟ್ಟ ಎಂದು ಹೇಳುತ್ತಿದ್ದರು. ಆಕೆಯ ಗಂಡ ಶಿವಾನಂದ ಪೂಜಾರಿಯ ವರ್ತನೆಗಳ ಬಗ್ಗೆ ಹೇಳಿ ಹಲುಬುತ್ತಿದ್ದರು. ಶೋಭಾ ಅಣ್ಣ ಚಂದ್ರಹಾಸ್ ಮಾತನಾಡಿ, 26 ವರುಷಗಳಿಂದ ಸೈಕೋ ಗಂಡನ ಜತೆ ನನ್ನ ತಂಗಿ ಹೇಗೆ ಜೀವನ ಕಳೆದಳೋ ಪಾಪ.. ಅನೇಕ ಬಾರಿ ಗಂಡನ ಬಿಟ್ಟು ಬಾ ಎಂದು ಹೇಳಿದ್ದೆ. ಆದರೆ, ತಂಗಿ ಗಂಡನ ಬಿಟ್ಟು ಬರಲಿಲ್ಲ. ಮನಸ್ಸು ಕಡಿದಿದ್ದರೂ, ಅದೇ ಮನೆಯಲ್ಲಿ ಇದ್ದುಕೊಂಡು ಕೊರಗುತ್ತಿದ್ದರು. ಕೊನೆಗೆ, ಇನ್ನೆಂದೂ ಬಾರದ ಲೋಕಕ್ಕೆ ಕಳಿಸಿಯೇ ಬಿಟ್ಟಿದ್ದಾನೆ ಪಾಪಿ ಎಂದು ಶಾಪ ಹಾಕಿದರು.
ಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿಯನ್ನ ಕತ್ತು ಹಿಸುಕಿ ಕೊಲೆಗೈದು, ತಾನೂ ಮನೆ ಪಕ್ಕದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಪಕ್ಕದ ಮನೆಯ ಶಕುಂತಳಾ ಶೆಟ್ಟಿ ಅವರು ಶೋಭಾ ಅವರ ಮನೆ ಪ್ರವೇಶಿಸಿದಾಗ ಬೆಡ್ ರೂಮಿನ ಮಂಚದಲ್ಲಿ ಹೆಣವಾಗಿದ್ದರು. ಬಳಿಕ ಶಿವಾನಂದ ಕೂಡ ಮರಕ್ಕೆ ನೇಣು ಬಿಗಿದುಕೊಂಡಿದ್ದು ಕಂಡುಬಂದಿದೆ.
ಪತ್ನಿಯನ್ನ ಕೊಲೆಗೈದ ಬಳಿಕ ಶಿವಾನಂದ ಪೂಜಾರಿ ಸಂಬಂಧಿ ಮಹಿಳೆಯೋರ್ವರಿಗೆ ಕರೆ ಮಾಡಿ ಮನೆಗೆ ಹೂಗಳನ್ನು ತರುವಂತೆ ಸೂಚಿಸಿ ಕರೆ ಕಟ್ ಮಾಡಿದ್ದನಂತೆ. ಗಾಬರಿಗೊಂಡ ಮಹಿಳೆ ತಕ್ಷಣ ಶೋಭಾ ಅವರ ಅಣ್ಣ ಚಂದ್ರಹಾಸ್ ಅವರಿಗೆ ವಿಷಯ ತಿಳಿಸಿದ್ದರು. ತಂಗಿಯ ಮನೆಯಲ್ಲಿ ಗಲಾಟೆ ಮಾಮೂಲಿಯಾಗಿದ್ದರಿಂದ ಚಂದ್ರಹಾಸ್ ಅಷ್ಟೊಂದು ತಲೆಕೆಡಿಸಿರಲಿಲ್ಲ. ಸತ್ಯ ವಿಚಾರ ತಿಳಿದಾಗ ತಂಗಿ ಮನೆಗೆ ಓಡೋಡಿ ಬಂದಿದ್ದಾರೆ.
ಪತ್ನಿ ಶೀಲ ಸರಿಯಿಲ್ಲವೆಂದು ಡೆತ್ ನೋಟ್
ಆತ್ಮಹತ್ಯೆಗೈದ ಶಿವಾನಂದ್ ಡೆತ್ ನೋಟ್ ಬರೆದಿಟ್ಟಿದ್ದು ಪತ್ನಿಯ ಶೀಲ ಸರಿ ಇಲ್ಲ, ನಡತೆ ಕೆಟ್ಟವಳೆಂದು ಬರೆದಿದ್ದಾನೆ. ಅದಕ್ಕೆ ಸಂಬಂಧಿ ಯುವಕನೋರ್ವನ ಭಾವಚಿತ್ರವನ್ನೂ ಲಗತ್ತಿಸಿದ್ದಾನೆ. ಅಲ್ಲದೆ ಅದೇ ಭಾವಚಿತ್ರವನ್ನ ಗೋಡೆಗೂ ಅಂಟಿಸಿದ್ದಾನೆ. ಭಾವಚಿತ್ರದಲ್ಲಿರುವ ಯುವಕ ಶೋಭಾ ಅವರ ಸಂಬಂಧಿಯಾಗಿದ್ದು ಸನ್ನಡತೆಯ ಯುವಕನೆಂದು ಮನೆ ಮಂದಿ ತಿಳಿಸಿದ್ದಾರೆ. ಶೋಭಾ ಅವರು ಗೃಹಿಣಿಯಾಗಿದ್ದು ಮನೆಯಲ್ಲೇ ಬೀಡಿ ಕಟ್ಟುತ್ತಿದ್ದರು. ಅವರ ಕಿರಿಯ ಮಗಳು ಕಾವ್ಯ ವಿವಾಹಿತಳಾಗಿದ್ದು, ಹಿರಿಯ ಮಗ ಕಾರ್ತಿಕ್ ಮಂಗಳೂರಿನ ಮಾಲ್ ಒಂದರಲ್ಲಿ ಕೆಲಸಕ್ಕಿದ್ದಾನೆ.
ಸೈಕೋ ತಂದೆ ಮಾಡಿದ ಹೀನ ಕೃತ್ಯಕ್ಕೆ ಮಕ್ಕಳು, ಸಂಬಂಧಿಕರು ಬಾಯಿಗೆ ಬಂದ ರೀತಿ ಬೈದು ತಾಯಿ ಮೃತದೇಹದ ಮುಂದೆ ಕಣ್ಣೀರಿಟ್ಟಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಎಸಿಪಿ ದಿನಕರ ಶೆಟ್ಟಿ, ಮಹಾಬಲ ಶೆಟ್ಟಿ ನೇತೃತ್ವದ ವಿಧಿ ವಿಜ್ಞಾನ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ.
ಬದುಕಿಗೇ ಮುಳ್ಳಾದ ಸಂಶಯ ಪಿಶಾಚಿ ; ಪತ್ನಿಯನ್ನ ಕತ್ತು ಹಿಸುಕಿ ಕೊಂದು ನೇಣು ಬಿಗಿದುಕೊಂಡ ಸೈಕೋ ಪತಿರಾಯ !
Ullal Husband kills wife, also kills himself, he was a psychopath says relatives in Mangalore. In a shocking incident, a man allegedly strangled his wife to death before ending his life. The incident is reported under Ullal police station limits on Thursday October 27. The deceased are identified as Shobha Poojary (45) and Shivananda Poojary (55), residents of Pilar.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm