ನಾಲ್ವರು ಮನೆಗಳ್ಳರ ಬಂಧನ ; ಎರಡು ಕೇಜಿ ಚಿನ್ನಾಭರಣ ವಶಕ್ಕೆ, ಬೆಂಗಳೂರು, ಮೈಸೂರು, ಹಾಸನದ 12 ಪ್ರಕರಣ ಪತ್ತೆ 

28-10-22 06:08 pm       Bangalore Correspondent   ಕ್ರೈಂ

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು 98 ಲಕ್ಷ ಮೌಲ್ಯದ ಒಂದು ಕೆಜಿ 985 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. 

ಬೆಂಗಳೂರು, ಅ.28 : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು 98 ಲಕ್ಷ ಮೌಲ್ಯದ ಒಂದು ಕೆಜಿ 985 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. 

ಮಹಮ್ಮದ್ ಸದ್ದಾಂ(36), ಸಯ್ಯದ್ ತರಬೇಜ್‍ ಪಾಷಾ(32) ಮತ್ತು ಅಬೀದ್ ಅಜಂ(31) ಮತ್ತು ರಂಜಿತ್ ಸಿಂಗ್ ಬಂಧಿತರು. ಆರೋಪಿಗಳ ಬಂಧನದಿಂದ ಬೆಂಗಳೂರು, ಮೈಸೂರು ಮತ್ತು ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳ 12 ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸುಮಾರು ಐದಾರು ವರ್ಷಗಳಿಂದ ಮೂವರು ಆರೋಪಿಗಳು ಕಳ್ಳತನ ಪ್ರವೃತ್ತಿಯಲ್ಲಿ ತೊಡಗಿ ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲು ವೇಳೆ ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು.‌ ಮಹಮ್ಮದ್ ಸದ್ದಾಂ, ಸಯ್ಯದ್ ತರಬೇಜ್‍ ಪಾಷಾ ಮತ್ತು ಅಬೀದ್ ಅಜಂ ಈ ಮೂವರು ಆರೋಪಿಗಳು ಈ ಹಿಂದೆ ಸಿಟಿ ಮಾರ್ಕೆಟ್, ಡಿಜೆ ಹಳ್ಳಿ ಮತ್ತು ಹಾಸನ ಟೌನ್ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಜೈಲಿನಿಂದ ಬಿಡುಗಡೆಯಾದ ನಂತರವೂ ಮತ್ತೆ ಕಳವು ಪ್ರಕರಣದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ. 

CCB cracks down on 26 black sheep in its ranks | Deccan Herald

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಕಪಾಟಿನ ನಕಲಿ ಕೀ ಮಾಡಿಟ್ಟುಕೊಂಡು ಮಾಲೀಕರಿಗೆ ತಿಳಿಯದೆ ಕಳೆದ ಐದಾರು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ಆರೋಪಿ ರಂಜಿತ್ ಸಿಂಗ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ಮಾಲೀಕರಿಗೆ ಅನುಮಾನ ಬಂದಿದ್ದರಿಂದ ಆರೋಪಿ ಕೆಲಸ ಬಿಟ್ಟು ರಾಜಸ್ತಾನದಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ಆರೋಪಿಗಳಿಂದ ಸುಮಾರು 98 ಲಕ್ಷ ರೂ. ಬೆಲೆ ಬಾಳುವ ಒಂದು ಕೆಜಿ 980 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

Four notorious robbers having 12 cases arrested in Bangalore by CCB.