ಕಳೆದು ಹೋದ ಮೊಬೈಲ್ ಹುಡುಕಿಕೊಡಲು 5 ಸಾವಿರ ಕೊಡು ಎಂದು ಡಿಮಾಂಡ್  ; ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಪೊಲೀಸ್ ಸಿಬ್ಬಂದಿ ! 

29-10-22 08:35 pm       HK News Desk   ಕ್ರೈಂ

ಕಳೆದು ಹೋಗಿದ್ದಂತ ತಮ್ಮ ಮೊಬೈಲ್ ಹುಡುಕಿ ಕೊಡುವಂತೆ ಠಾಣೆಗೆ ದೂರು ನೀಡಲು ಹೋಗಿದ್ದ ವ್ಯಕ್ತಿಗೆ ಪೋಲಿಸ್  ಕಾನ್ ಸ್ಟೇಬಲ್ ಓರ್ವ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. 

ಚಿತ್ರದುರ್ಗ,ಅ.29: ಕಳೆದು ಹೋಗಿದ್ದಂತ ತಮ್ಮ ಮೊಬೈಲ್ ಹುಡುಕಿ ಕೊಡುವಂತೆ ಠಾಣೆಗೆ ದೂರು ನೀಡಲು ಹೋಗಿದ್ದ ವ್ಯಕ್ತಿಗೆ ಪೋಲಿಸ್  ಕಾನ್ ಸ್ಟೇಬಲ್ ಓರ್ವ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದು ಹೋದ ಮೊಬೈಲ್ ಹುಡುಕಿ ಕೊಡುವಂತೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಆದ್ರೇ ಇದೇ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಹರೀಶ್ ಎಂಬುವರು ಕಳೆದು ಹೋದಂತ ಮೊಬೈಲ್ ಹುಡುಕಿ ಕೊಡಲು 5 ಸಾವಿರ ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.

ಮೊಬೈಲ್ ಕಳೆದುಕೊಂಡಿದ್ದಂತ ವ್ಯಕ್ತಿ, ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈಗಾಗಲೇ 3 ಸಾವಿರ ಹಣವನ್ನು ಅಡ್ವಾನ್ಸ್ ಆಗಿ  ಸಿಬ್ಬಂದಿ  ಹರೀಶ್ ಸ್ವೀಕರಿಸಿದ್ದ. ಬಾಕಿ 2 ಸಾವಿರ ರೂ ಪಡೆಯುತ್ತಿದ್ದಾಗ ಡಿವೈಎಸ್ಪಿ ಜಿ ಮಂಜುನಾಥ್ ನೇತೃತ್ವದಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸಿಬ್ಬಂದಿಯನ್ನು ಅಮಾನತುಗೊಳಿಸಿ ಜೈಲಿಗೆ ತಳ್ಳಿದ್ದಾರೆ.

Chitradurga Police constable demands 5 thousabd to search stolen mobile, Caught red handed by lokayukta.