ಬ್ರೇಕಿಂಗ್ ನ್ಯೂಸ್
31-10-22 07:41 pm HK News Desk ಕ್ರೈಂ
ತಿರುವನಂತಪುರಂ, ಅ.31 : ಆಕೆಗೆ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಮಿಲಿಟರಿಯಲ್ಲಿ ಸೇವೆಯಲ್ಲಿದ್ದ ಯೋಧನ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಅದಕ್ಕಾಗಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ರೇಡಿಯೋಲಜಿ ವಿದ್ಯಾರ್ಥಿ ಶೆರಾನ್ (23) ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕಾಗಿತ್ತು. ಈ ಬಗ್ಗೆ ನಾನಾ ಕತೆಗಳನ್ನು ಹೇಳಿ, ನಾಟಕ ಮಾಡಿ ಆತನ ಮನವೊಲಿಸಲು ಪ್ರಯತ್ನ ಪಟ್ಟಿದ್ದಾಳೆ. ಆದರೆ ಯಾವುದೂ ಸಫಲವಾಗದೇ ಇದ್ದಾಗ ಸ್ಲೋ ಪಾಯ್ಸನ್ ಹಾಕಿದ್ದಾಳೆ.
ಹೌದು.. ಇಂಗ್ಲಿಷ್ ಎಂಎ ಓದುತ್ತಿದ್ದ ಗ್ರೀಷ್ಮಾ ಎಂಬ 22ರ ಹರೆಯದ ಯುವತಿ, ತಾನು ಪ್ರೀತಿಸುತ್ತಿದ್ದ ಶೇರಾನ್ ಎಂಬ 23 ವರ್ಷದ ಯುವಕನಿಗೆ ವಿಷ ಕೊಟ್ಟು ಸಾಯಿಸಿದ್ದಾಳೆ ಎನ್ನುವ ಆಘಾತಕಾರಿ ವಿಚಾರವನ್ನು ತಿರುವನಂತಪುರದ ಕ್ರೈಂ ಬ್ರಾಂಚ್ ಪೊಲೀಸರು ಹೊರಗೆಡವಿದ್ದಾರೆ. ಶೇರಾನ್ ವಾಂತಿ ಮಾಡುತ್ತಿದ್ದ ಕಾರಣಕ್ಕೆ ತಿರುವನಂತಪುರದ ಆಸ್ಪತ್ರೆಗೆ ದಾಖಲಾಗಿದ್ದ. ವಿಷ ತಿಂದಿದ್ದಾನೆಯೇ, ಏನು ಸಮಸ್ಯೆ ಎಂಬ ಬಗ್ಗೆ ಅರಿವಿಲ್ಲದ ಕಾರಣ ವೈದ್ಯರು ಪರೀಕ್ಷೆ ನಡೆಸುತ್ತಿದ್ದರು. ವಾರ ಕಾಲ ಆಸ್ಪತ್ರೆಯಲ್ಲಿದ್ದ ಶೇರಾನ್ ಅ.25ರಂದು ಬಹು ಅಂಗಾಂಗ ವೈಫಲ್ಯಗೊಂಡು ಸಾವು ಕಂಡಿದ್ದ. ಘಟನೆ ಬಗ್ಗೆ ವೈದ್ಯರಿಗೂ ಆತಂಕ ಆಗಿತ್ತು. ಹಸಿರು ಮಿಶ್ರಿತ ವಾಂತಿ ಮಾಡುತ್ತಿದ್ದುದರಿಂದ ಏನೋ ಕಾಪರ್ ಸಲ್ಫೇಟ್ ಮಾದರಿಯ ವಿಷ ಮಿಶ್ರಣ ಆಗಿದೆ ಎನ್ನುವ ನಿರ್ಧಾರಕ್ಕೆ ಬಂದಿದ್ದರು.
ಆನಂತರ, ಫಾರೆನ್ಸಿಕ್ ತಜ್ಞರು ಕೂಡ ಶೇರಾನ್ ಶವವನ್ನು ತಪಾಸಣೆ ನಡೆಸಿದ್ದರು. ಶೇರಾನ್ ಸಾವು ಸಂಭವಿಸುತ್ತಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ನಡುವೆ, ಶೇರಾನ್ ಮತ್ತು ಗ್ರೀಷ್ಮಾ ನಡುವೆ ಪ್ರೀತಿಯ ಸಂಬಂಧ ಇದ್ದುದು ಮತ್ತು ಆಕೆಗೆ ಸೆಪ್ಟಂಬರ್ ತಿಂಗಳಲ್ಲಿ ಬೇರೊಬ್ಬ ಯುವಕನ ಜೊತೆಗೆ ಮದುವೆ ನಿಶ್ಚಯ ಆಗಿದ್ದುದು ಪೊಲೀಸರಿಗೂ ತಿಳಿದಿತ್ತು. ಪೊಲೀಸರು ಶೇರಾನ್ ಗೆಳೆಯರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ಶೇರಾನ್ ತಮ್ಮನನ್ನೂ ಕರೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಗ್ರೀಷ್ಮಾ ಮನೆಯಲ್ಲಿ ಏನೋ ಆಯುರ್ವೇದ ಕಷಾಯ ಕೊಟ್ಟಿರುವ ಬಗ್ಗೆ ಶೇರಾನ್ ತಿಳಿಸಿದ್ದಾಗಿ ಹೇಳಿದ್ದಾನೆ. ಪೊಲೀಸರು ಗ್ರೀಷ್ಮಾಳನ್ನು ವಶಕ್ಕೆ ಪಡೆದು ಡ್ರಿಲ್ಲಿಂಗ್ ಮಾಡುತ್ತಲೇ ನಿಜ ವಿಷಯ ಹೊರಬಿದ್ದಿದೆ.
ಮೊದಲ ಗಂಡ ಸಾಯುತ್ತಾನೆಂದು ನಾಟಕ
ಗ್ರೀಷ್ಮಾಗೆ ಬೇರೊಬ್ಬ ಯುವಕನ ಜೊತೆ ಮದುವೆ ಎಂಗೇಜ್ಮೆಂಟ್ ಆಗಿದ್ದರಿಂದ ಶೇರಾನ್ ಜೊತೆಗಿನ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಳು. ಇದಕ್ಕಾಗಿ ಆತನನ್ನು ಏನೇನೋ ಹೇಳಿ ನಂಬಿಸಲು ತೊಡಗಿದ್ದಾಳೆ. ನನ್ನ ಮದುವೆ ಬಗ್ಗೆ ಜ್ಯೋತಿಷಿಯಲ್ಲಿ ಕೇಳಿದ್ದು, ನನ್ನನ್ನು ಮದುವೆಯಾದ ಮೊದಲ ಗಂಡ ಕೆಲವೇ ತಿಂಗಳಲ್ಲಿ ಸಾಯುತ್ತಾನಂತೆ. ಹಾಗಾಗಿ, ನೀನು ಸ್ವಲ್ಪ ಕಾಲ ಧೈರ್ಯ ವಹಿಸು. ನಾನು ಬೇರೆ ಯುವಕನ ಜೊತೆ ಮದುವೆಯಾಗುತ್ತೇನೆ. ಆತ ಸತ್ತ ಕೂಡಲೇ ನಿನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿದ್ದಾಳೆ. ಆದರೆ ಆಕೆಯ ಮಾತನ್ನು ಕೇಳದ ಶೇರಾನ್, ತುಂಬ ಖಿನ್ನನಾಗಿದ್ದ. ಮದುವೆ ಆಗೋದಾದ್ರೇ ನಿನ್ನನ್ನೇ.. ಇಲ್ಲಾಂದ್ರೆ ಬದುಕೋದೇ ಇಲ್ಲವೆಂದು ರಂಪ ಮಾಡಿದ್ದಾನೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದ ಗ್ರೀಷ್ಮಾ, ಶೇರಾನನ್ನು ಸದ್ದಿಲ್ಲದೆ ಮುಗಿಸಿ ಬಿಡಲು ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದಾಳೆ.
ಕಾಪಿಕ್ ಎನ್ನುವ ಕೀಟನಾಶಕ ದ್ರವ್ಯವನ್ನು ಪಡೆದು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಳು. ಅ.14ರಂದು ತನ್ನ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಶೇರಾನನ್ನು ಕರೆದಿದ್ದು, ಈ ವೇಳೆ ತನಗೆ ಆಯುರ್ವೇದ ಕಷಾಯ ಇದೆಯೆಂದು ಹೇಳಿ ಭಾರೀ ಕಹಿಯಾಗಿರುವ ಬಗ್ಗೆ ಹೇಳಿದ್ದಾಳೆ. ಅದನ್ನು ಕುಡಿಯುವುದಕ್ಕೇ ಆಗುವುದಿಲ್ಲ. ನೀನು ಬೇಕಾದರೆ ಕುಡಿದು ನೋಡು ಎಂದು ಕೊಟ್ಟಿದ್ದಾಳೆ. ಆಯುರ್ವೇದ ಕಷಾಯ ಜೊತೆಗೆ ಬೆರಸಿದ್ದ ವಿಷವನ್ನು ಕುಡಿಯಲು ಕೊಟ್ಟಿದ್ದು, ಕಹಿಯಾಗಿದ್ದರೂ ಅದನ್ನು ಆಕೆಯ ಎದುರಲ್ಲಿ ಹಠಕ್ಕೆ ಬಿದ್ದು ಯುವಕ ಕುಡಿದಿದ್ದ. ತೀವ್ರ ಕಹಿಯಾಗಿದ್ದಕ್ಕೆ ಆನಂತರ ಮ್ಯಾಂಗೋ ಜ್ಯೂಸ್ ಮಾಝಾವನ್ನೂ ಗ್ರೀಷ್ಮಾ ಕುಡಿಯಲು ಕೊಟ್ಟಿದ್ದಾಳೆ. ಕೂಡಲೇ ವಾಂತಿ ಮಾಡಿದ್ದ ಶೇರಾನ್ ಬಳಿಕ ನೇರವಾಗಿ ತನ್ನ ಮನೆಗೆ ಹೋಗಿದ್ದ. ಮನೆಯಲ್ಲಿ ಈ ಬಗ್ಗೆ ಯಾವುದನ್ನೂ ಹೇಳಿರಲಿಲ್ಲ.
ಹಸಿರು ಮಿಶ್ರಿತ ವಾಂತಿ ಮಾಡುತ್ತಿದ್ದ ಶೇರಾನ್
ಹಸಿರು ಮಿಶ್ರಿತ ಬಣ್ಣದಿಂದ ವಾಂತಿ ಆಗುತ್ತಿದ್ದರೂ, ಮನೆಯಲ್ಲಿ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ನಾಲ್ಕು ದಿನಗಳ ನಂತರ ಆಸ್ಪತ್ರೆಗೆ ಯುವಕನನ್ನು ದಾಖಲು ಮಾಡಲಾಗಿತ್ತು. ಈ ವೇಳೆ, ಶೇರಾನ್ ತನ್ನ ತಮ್ಮನಲ್ಲಿ ಗ್ರೀಷ್ಮಾ ಮನೆಯಲ್ಲಿ ಏನೋ ಆಯುರ್ವೇದ ಕಷಾಯ ಕುಡಿದಿದ್ದಾಗಿ ಹೇಳಿಕೊಂಡಿದ್ದ. ಇದೇ ವಿಚಾರದ ಬಗ್ಗೆ ಶೇರಾನ್ ತಮ್ಮ ಗ್ರೀಷ್ಮಾಗೆ ಫೋನ್ ಮಾಡಿ, ದಬಾಯಿಸಿದ್ದ. ಏನು ಕುಡಿಯಲು ಕೊಟ್ಟಿದ್ದೀಯಾ ಹೇಳು.. ಏನೋ ಆಯುರ್ವೇದ ಔಷಧಿ ಕೊಟ್ಟಿದ್ದೀಯಂತೆ ಎಂದು ಕೇಳಿದ್ದಾನೆ. ಅದಕ್ಕೆ, ಏನೂ ಕುಡಿಯಲು ಕೊಟ್ಟಿಲ್ಲವೆಂದೇ ವಾದಿಸುತ್ತಿದ್ದ ಗ್ರೀಷ್ಮಾ, ಕೊನೆಗೆ ಆಯುರ್ವೇದ ಕಷಾಯ ಮಾತ್ರ ಕೊಟ್ಟಿದ್ದೆ. ಅದರಿಂದೇನೂ ಸಮಸ್ಯೆ ಆಗಲಿಕ್ಕಿಲ್ಲ ಎಂದು ಹೇಳಿದ್ದಳು. ಆದರೆ ತಾನು ಪ್ರೀತಿಸುತ್ತಿದ್ದ ಯುವಕನನ್ನು ನೋಡಲು ಆಸ್ಪತ್ರೆಗೆ ಬಂದಿರಲಿಲ್ಲ. ಪೊಲೀಸರು ಇದೇ ಶಂಕೆಯನ್ನು ಮುಂದಿಟ್ಟು ಗ್ರೀಷ್ಮಾನನ್ನು ವಿಚಾರಣೆಗೆ ಒಳಪಡಿಸಿದ್ದರು.
ಅ.21ರಂದು ಸಾಯುವುದಕ್ಕೂ ಮುನ್ನ ವೈದ್ಯರಿಗೆ ಹೇಳಿಕೆ ನೀಡಿದ್ದ ಶೇರಾನ್, ಗ್ರೀಷ್ಮಾ ಬಗ್ಗೆ ಯಾವುದೇ ಸಂಶಯ ಪಟ್ಟಿರಲಿಲ್ಲ. ಆಕೆಯ ಬಗ್ಗೆ ಸಂಶಯ ಇಲ್ಲ. ನನ್ನನ್ನು ಆಕೆ ತುಂಬ ಪ್ರೀತಿಸುತ್ತಾಳೆ ಎಂದೇ ಹೇಳಿದ್ದ. ಅದೇ ಹೇಳಿಕೆಯನ್ನು ಕೊನೆಯ ಹೇಳಿಕೆಯೆಂದು ಪರಿಗಣಿಸಿದ ಪೊಲೀಸರು ಅ.26 ಮತ್ತು 27ರಂದು ಶೇರಾನ್ ಮತ್ತು ಗ್ರೀಷ್ಮಾಳ ಗೆಳೆಯರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಗ್ರೀಷ್ಮಾ ಶೇರಾನ್ ಜೊತೆಗಿನ ಸಂಬಂಧ ಕಡಿದುಕೊಳ್ಳಲು ಬಯಸಿದ್ದಳು ಅಂತ ಕೆಲವರು ತಿಳಿಸಿದ್ದಾರೆ. ಇದನ್ನೇ ಆಧರಿಸಿ ಪೊಲೀಸರು ಗ್ರೀಷ್ಮಾಳನ್ನು ಬಂಧಿಸಿದ್ದಾರೆ.
ಕಲಿಯುವುದರಲ್ಲಿ ಟಾಪರ್ ಆಗಿದ್ದ ಗ್ರೀಷ್ಮಾ
ಬಿಎಡ್ ಕಲಿಯುತ್ತಿದ್ದಾಗ ಎರಡನೇ ರ್ಯಾಂಕ್ ಪಡೆದಿದ್ದ ಗ್ರೀಷ್ಮಾ ಕಲಿಯುವುದರಲ್ಲಿ ಮುಂದಿದ್ದಳು. ಇಂಗ್ಲಿಷ್ ಎಂಎ ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಳು. ಹೀಗಾಗಿ ಮೊದಲಿಗೆ, ಪೊಲೀಸರಿಗೂ ಆಕೆಯ ಬಗ್ಗೆ ಸಂಶಯ ಬಂದಿರಲಿಲ್ಲ. ಆಕೆಗೂ ಶೇರಾನ್ ಸಾವಿಗೂ ಸಂಬಂಧ ಇಲ್ಲವೆಂದೇ ಹೇಳುತ್ತಿದ್ದರು. ಕೊನೆಗೆ, ಆಕೆಯ ಬಗ್ಗೆಯೇ ಎಲ್ಲ ಕಡೆಯಿಂದ ಆರೋಪ ಕೇಳಿಬಂದಿತ್ತು. ಗ್ರೀಷ್ಮಾ ತನ್ನ ತಪ್ಪು ಒಪ್ಪಿಕೊಂಡಿದ್ದಲ್ಲದೆ, ಪೊದೆಗೆ ಎಸೆದಿದ್ದ ಕಾಪಿಕ್ ಎನ್ನುವ ಕೀಟನಾಶಕ ಬಾಟಲಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರೀಷ್ಮಾ ಮತ್ತು ಶೇರಾನ್ ಜೊತೆಗಿದ್ದ ಫೋಟೋ ಮತ್ತು ವಿಡಿಯೋ ಆತನ ಮೊಬೈಲಿನಲ್ಲಿತ್ತು. ಅದನ್ನು ಡಿಲೀಟ್ ಮಾಡುವಂತೆ ಹೇಳಿದ್ದರೂ, ಶೇರಾನ್ ಕೇಳಿರಲಿಲ್ಲ. ಇದಕ್ಕಾಗಿ ಶೇರಾನನ್ನು ಮುಗಿಸಲು ಗ್ರೀಷ್ಮಾ ಸಂಚು ಹೂಡಿದ್ದಳು ಎನ್ನಲಾಗುತ್ತಿದೆ. ಆದರೆ, ಈಕೆಯ ತಂತ್ರಕ್ಕೆ ಗ್ರೀಷ್ಮಾ ಮನೆಯವರು ಕೂಡ ಸಹಕಾರ ನೀಡಿದ್ದರೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
A postgraduate student from Tamil Nadu’s Ramavarman Chira, bordering Kerala, has admitted that she had poisoned her lover by mixing a toxic chemical in an ayurvedic medication, Kerala Police said on Sunday.Sharon Raj, 22, was given the copper sulphate-laced drink on October 14 and after consuming the drink, vomited and fell down unconscious. He was admitted to Parasala hospital and later to Thiruvananthapuram Medical College where he breathed his last on October 25.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm