ಬ್ರೇಕಿಂಗ್ ನ್ಯೂಸ್
14-11-22 04:36 pm HK News Desk ಕ್ರೈಂ
ನವದೆಹಲಿ, ನ.14: ಮನುಷ್ಯ ಕೆಲವೊಮ್ಮೆ ಅತ್ಯಂತ ಕ್ರೂರಿಯಾಗುತ್ತಾನೆ. ಸಮಯಕ್ಕೆ ತಕ್ಕಂತೆ ಆತನ ದುಷ್ಟತನವೂ ಹೊರಗೆ ಬರುತ್ತದೆ. ಇಲ್ಲೊಬ್ಬ ದುಷ್ಟ ತಾನು ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗಲು ಒತ್ತಾಯ ಮಾಡಿದಳು ಎಂಬ ಕಾರಣಕ್ಕೆ ಆಕೆಯನ್ನು ಕೊಂದು ಬರೋಬ್ಬರಿ 35 ತುಂಡುಗಳನ್ನಾಗಿಸಿ ಎಸೆದು ಬಿಟ್ಟ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಆತನ ಹೆಸರು ಅಫ್ತಾಬ್ ಅಮೀನ್ ಪೂನಾವಾಲ. ಆಕೆಯ ಹೆಸರು ಶ್ರದ್ಧಾ. ಇಬ್ಬರು ಕೂಡ ಪ್ರೀತಿಸುತ್ತಿದ್ದು, ಹುಡುಗಿ ತನ್ನ ಮನೆಯವರ ಮಾತು ಕೇಳದೆ ಅಫ್ತಾಬ್ ಜೊತೆಗೇ ಬಾಳುತ್ತೇನೆಂದು ಮನೆ ಬಿಟ್ಟು ಬಂದಿದ್ದಳು. ಕಳೆದ ಮೇ ತಿಂಗಳಲ್ಲಿ ಮುಂಬೈನಿಂದ ದೆಹಲಿಗೆ ಆಗಮಿಸಿದ್ದು, ಮದುವೆಯಾಗದೇ ಸಹ ಜೀವನ ಆರಂಭಿಸಿದ್ದರು. ಆದರೆ ಹುಡುಗಿ ಪ್ರತಿ ಬಾರಿ ತನ್ನನ್ನು ಮದುವೆಯಾಗುವಂತೆ ಅಫ್ತಾಬ್ ನಲ್ಲಿ ಒತ್ತಾಯ ಮಾಡುತ್ತಿದ್ದಳು. ಮೇ 18ರಂದು ಇವರ ನಡುವೆ ಇದೇ ವಿಚಾರಕ್ಕೆ ಜಗಳವಾಗಿದ್ದು, ಅಫ್ತಾಪ್ ಶ್ರದ್ಧಾಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಆನಂತರ, ಆಕೆಯ ಶವವನ್ನು 35 ತುಂಡುಗಳನ್ನಾಗಿಸಿ ಹೊಸತಾಗಿ ಫ್ರಿಡ್ಜ್ ಖರೀದಿಸಿ ಅದರಲ್ಲಿ ತುಂಬಿಸಿಟ್ಟಿದ್ದ. ದಿನವೂ ರಾತ್ರಿ ವೇಳೆ ಕೆಲವು ತುಂಡುಗಳನ್ನು ಪ್ಯಾಕ್ ಮಾಡಿ, ದೆಹಲಿಯ ಹಲವು ಕಡೆ ಎಸೆದು ಬಂದಿದ್ದ.
ಇತ್ತೀಚೆಗೆ ನವೆಂಬರ್ 8ರಂದು ಶ್ರದ್ಧಾಳ ತಂದೆ, ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ನಿವಾಸಿ ವಿಕಾಸ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಮಗಳು ಮೇ ತಿಂಗಳಿನಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ಅಫ್ತಾಬ್ ಜೊತೆಗೆ ಪ್ರೀತಿ ಹೊಂದಿದ್ದು ಆತನ ಜೊತೆಗೆ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದರು. ಪೊಲೀಸರು ಆರೋಪಿ ಅಫ್ತಾಬ್ ನನ್ನು ದೆಹಲಿಯಲ್ಲಿ ಬಂಧಿಸಿ ಬೆಂಡೆತ್ತಿದಾಗ ನಿಜ ವಿಷಯ ಬಾಯಿಬಿಟ್ಟಿದ್ದಾನೆ.
ಶ್ರದ್ಧಾ ಮುಂಬೈನಲ್ಲಿ ಕಾಲ್ ಸೆಂಟರಿನಲ್ಲಿ ಕೆಲಸಕ್ಕಿದ್ದಾಗ ಅಫ್ತಾಬ್ ಪರಿಚಯ ಆಗಿದ್ದು ಪ್ರೀತಿಗೆ ತಿರುಗಿತ್ತು. ಪ್ರೀತಿಯ ನೆಪದಲ್ಲಿ ಮನೆಯವರ ಎಚ್ಚರಿಕೆಯನ್ನೂ ಲೆಕ್ಕಿಸದೆ ಶ್ರದ್ಧಾ ಆತನ ಜೊತೆಗೆ ಪರಾರಿಯಾಗಿದ್ದಳು. ಆನಂತರ, ದೆಹಲಿಗೆ ಹೋಗಿ ಛಾತ್ರಾಪುರ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಈ ವಿಷಯ ತಿಳಿದಿದ್ದ ಹುಡುಗಿ ತಂದೆ ವಿಕಾಸ್, ದೆಹಲಿಗೆ ಹುಡುಕಿಕೊಂಡು ಬಂದಿದ್ದರು. ಮಗಳು ಸಿಗದೇ ಇದ್ದಾಗ ದೆಹಲಿಯ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಶವಕ್ಕಾಗಿ ದೆಹಲಿಯ ಹಲವೆಡೆ ಹುಡುಕಾಡಿದ್ದು ಕಾಡು ಇದ್ದ ಪ್ರದೇಶದಲ್ಲಿ ಕೆಲವು ಕಡೆ ಎಲುಬು ಮಾತ್ರ ಸಿಕ್ಕಿದೆ. ನಾಲ್ಕು ತಿಂಗಳು ಕಳೆದಿರುವುದರಿಂದ ಶವ ಸಿಗುವ ಸಾಧ್ಯತೆ ಇಲ್ಲದಂತಾಗಿದೆ.
This incident would have sent shivers down our spines had it happened anywhere in the world. However, it happened in the national capital Delhi. A predator who, believe it or balk, was also a lover to a 27-year-old woman, killed her, chopped her into 35 pieces and scattered the body parts across Delhi.Police identified the accused as Aftab Amin Poonawalla. He had been in a live-in relationship with the victim, 27-year-old Shraddha. Five months after he committed the barbaric act, the man has been held.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 05:39 pm
Mangalore Correspondent
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm