ಆಕ್ಯೂಪಂಕ್ಚರ್‌ ನೆಪದಲ್ಲಿ ಮಹಿಳೆಯರ  ವಿಡಿಯೋ ಸೆರೆ,  ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ; ಕಾಮುಕ ನಕಲಿ ಡಾಕ್ಟರ್ ಬಂಧನ 

17-11-22 12:16 pm       Bangalore Correspondent   ಕ್ರೈಂ

ಆಕ್ಯೂಪಂಕ್ಚರ್‌ ಚಿಕಿತ್ಸೆ ನೆಪದಲ್ಲಿ ಮಹಿಳೆಯರ ಖಾಸಗಿ ಭಾಗಗಳ ವಿಡಿಯೋ, ಫೋಟೊ ತೆಗೆದುಕೊಂಡು ಲೈಂಗಿಕ ದೌರ್ಜನ್ಯ ಎಸಗುವ ನಕಲಿ ವೈದ್ಯನೊಬ್ಬನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ನ.17:  ಆಕ್ಯೂಪಂಕ್ಚರ್‌ ಚಿಕಿತ್ಸೆ ನೆಪದಲ್ಲಿ ಮಹಿಳೆಯರ ಖಾಸಗಿ ಭಾಗಗಳ ವಿಡಿಯೋ, ಫೋಟೊ ತೆಗೆದುಕೊಂಡು ಲೈಂಗಿಕ ದೌರ್ಜನ್ಯ ಎಸಗುವ ನಕಲಿ ವೈದ್ಯನೊಬ್ಬನನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

54 ವರ್ಷ ಪ್ರಾಯದ ವೆಂಕಟರಮಣ ಎಂಬ ಈ ನಕಲಿ ವೈದ್ಯ ನೋಡಲು ಹಿರಿಯ ವೈದ್ಯರಂತೆ ಕಾಣುತ್ತಿದ್ದರಿಂದ ಮಹಿಳೆಯರು ನಂಬಿಕೆಯಿಟ್ಟು ಚಿಕಿತ್ಸೆ ಬರುತ್ತಿದ್ದರು. ಈತ ಯಶವಂತಪುರದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದ. ಅಲ್ಲಿಗೆ ಆಕ್ಯೂಪಂಕ್ಚರ್‌ ಚಿಕಿತ್ಸೆಗೆ ಬರುತ್ತಿದ್ದ ಯುವತಿಯರು ಮತ್ತು ಮಹಿಳೆಯರ ಖಾಸಗಿ ಭಾಗಗಳನ್ನು ಮುಟ್ಟಿ ವಿಕೃತವಾಗಿ ವರ್ತಿಸುತ್ತಿದ್ದನಂತೆ. ಮಹಿಳೆಯರಿಗೆ ಗೊತ್ತಾಗದಂತೆ ಅವರ ವಿಡಿಯೋ, ಫೋಟೊಗಳನ್ನು ಸೆರೆ ಹಿಡಿಯುತ್ತಿದ್ದನಂತೆ.

ಈ ರೀತಿ ವಿಡಿಯೋ, ಫೋಟೊಗಳನ್ನು ಇಟ್ಟುಕೊಂಡು ಮಹಿಳೆಯರನ್ನು ಬ್ಲ್ಯಾಕ್‌ ಮಾಡುತ್ತಿದ್ದಾನೆಯೇ? ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾನೆಯೇ? ಅಥವಾ ಕೇವಲ ಈ ರೀತಿ ವಿಡಿಯೋ ಮಾಡುವ ವಿಕೃತ ಮನಸ್ಥಿತಿ ಇತ್ತೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರ ಖಾಸಗಿ ವಿಡಿಯೋ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಟ್ಟುಕೊಂಡು ಅದನ್ನು ಮತ್ತೊಬ್ಬ ಮಹಿಳೆಗೆ ಕಳುಹಿಸಿದ್ದ. ಆ ಮಹಿಳೆ ಈ ವಿಡಿಯೋ ನೋಡಿ ಆತಂಕಗೊಂಡು ಸಂತ್ರಸ್ತೆ ಮಹಿಳೆಗೆ ಮಾಹಿತಿ ನೀಡಿದ್ದರು. ಸಂತ್ರಸ್ತೆ ಪೊಲೀಸರಿಗೆ ದೂರು ನೀಡುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಹಲವು ಮಹಿಳೆಯರು ದೂರು ನೀಡಿದ್ದಾರೆ.

ಅಂದಹಾಗೆ, ಈತ ಕೇವಲ ಪಿಯುಸಿ ವಿದ್ಯಾರ್ಹತೆ ಹೊಂದಿದ್ದ. ಆಕ್ಯುಪಂಕ್ಚರ್‌ಗೆ ಸಂಬಂಧಪಟ್ಟ ತರಬೇತಿ ಪಡೆದಿದ್ದ. ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್‌ ಆಗಿ ದುಡಿದ ಇವನು ಆರ್ಯುವೇದ ವೈದ್ಯ ಪದ್ಧತಿ ಕುರಿತು ಆಸಕ್ತಿ ಹೊಂದಿದ್ದ. ಹೀಗಾಗಿ, ಆರ್ಯುವೇದ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಿದ್ದ. ಅಲ್ಲಿ ಆತ ಆಕ್ಯುಪಂಕ್ಚರ್‌ ಕುರಿತು ತಿಳಿದುಕೊಂಡಿದ್ದ.

ಬೆಂಗಳೂರಿನ ಜಯನಗರದಲ್ಲಿರುವ ಆಕ್ಯೂಪಂಕ್ಚರ್‌ ಚಿಕಿತ್ಸೆ ತರಬೇತಿ ನೀಡುವ ಸಂಸ್ಥೆಯಲ್ಲಿ ಎರಡು ವರ್ಷ ಟ್ರೇನಿಂಗ್‌ ಪಡೆದಿದ್ದ. ಸುಮಾರು ನಾಲ್ಕು ವರ್ಷಗಳ ಹಿಂದೆ ಈತ ಸ್ವಂತ ಕ್ಲಿನಿಕ್‌ ತೆರೆದಿದ್ದ. ಅಲ್ಲಿ ಮಹಿಳೆಯರ ಖಾಸಗಿ ಅಂಗಗಳನ್ನು ಮುಟ್ಟುವುದು, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಜತೆಗೆ, ವಿಡಿಯೋ ಫೋಟೊಗಳನ್ನು ತೆಗೆದಿಟ್ಟುಕೊಳ್ಳುತ್ತಿದ್ದ.

ತನ್ನ ಮೇಲೆ ದೂರು ದಾಖಲಾದ ಕೂಡಲೇ ಆತ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ. ಸಿಸಿಬಿ ಮಹಿಳಾ ಸಂರಕ್ಷಕಾ ಘಟಕವು ಆರೋಪಿಯನ್ನು ಬಂಧಿಸಿ ಕರೆತಂದಿದೆ. ಈ ಮೂಲಕ ನಕಲಿ ವೈದ್ಯನ ಕೃತ್ಯಗಳಿಗೆ ಬ್ರೇಕ್‌ ಹಾಕಲಾಗಿದೆ.

A doctor has been arrested by the Bengaluru CCB police for allegedly taking videos of undressed women under the pretext of giving treatment. The man has been identified as Dr Venkat ramana a doctor of naturopathy at a clinic in Yeshwanthpur. The police said that the doctor would take inappropriate photos and videos of women including minor girls saying that he needed the images to study the disease.