ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ  ಪಾಕ್ ಪರ ಘೋಷಣೆ ಕೂಗಿದ ಇಂಜಿನಿಯರಿಂಗ್ ಸ್ಟೂಡೆಂಟ್ಸ್ ; ಮೂವರು  ಪೋಲಿಸರ ವಶಕ್ಕೆ ! 

19-11-22 11:43 am       Bangalore Correspondent   ಕ್ರೈಂ

ನಗರದ ಖಾಸಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಕೆಲ ವಿದ್ಯಾರ್ಥಿಗಳು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವ ವಿಡಿಯೊ ವೈರಲ್‌ ಆಗಿದ್ದು, ಈ ಸಂಬಂಧ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು, ನ.19: ನಗರದ ಖಾಸಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಕೆಲ ವಿದ್ಯಾರ್ಥಿಗಳು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವ ವಿಡಿಯೊ ವೈರಲ್‌ ಆಗಿದ್ದು, ಈ ಸಂಬಂಧ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಗರದ ಮಾರತ್ತಳ್ಳಿಯ ನ್ಯೂ ಹಾರಿಜನ್ ಕಾಲೇಜಿನಲ್ಲಿ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ. ಈ ವೇಳೆ ಇದಕ್ಕೆ ಕಾಲೇಜಿನ ಇತರ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ, ಪಾಕ್‌ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದ್ದರಿಂದ ರಿಯಾ, ಆರ್ಯನ್, ದಿನಕರ್ ಎಂಬ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರ್ಯನ್‌ ಎಂಬಾತನನ್ನು ಮೊದಲಿಗೆ ಇತರ ವಿದ್ಯಾರ್ಥಿಗಳು ಥಳಿಸಿ, ಭಾರತ್‌ ಮಾತಾ ಕಿ ಜೈ, ಕರ್ನಾಟಕ ಮಾತಾ ಕಿ ಜೈ, ಜೈ ಹಿಂದ್‌ ಹಾಗೂ ಜೈ ಕರ್ನಾಟಕ ಎಂದು ಘೋಷಣೆ ಕೂಗುವಂತೆ ಹೇಳಿ, ಇನ್ನು ಮುಂದೆ ಈ ರೀತಿ ತಪ್ಪು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಚಾರಣೆ ವೇಳೆ ತಮಾಷೆಗಾಗಿ ಪಾಕ್‌ ಪರ ಜೈಕಾರ ಹಾಕಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು. ಸದ್ಯ ಮೂವರ ವಿರುದ್ಧ ಸದ್ಯ ಘಟನೆ ಸಂಬಂಧ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಸಿ 153-ಜನಾಂಗೀಯ ದ್ವೇಷಕ್ಕೆ ಪ್ರಚೋದನೆ, 505(1)B- ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡುವುದು, ದೇಶದ ವಿರುದ್ಧ ಕೆಲಸ ಮಾಡಲು ವ್ಯಕ್ತಿಯನ್ನು ಪ್ರಚೋದಿಸುವ ಆರೋಪದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

The students at a private college in Marathahalli shouted pro-Pakistan slogans and then made a video out of it. As per the visuals, one of the students standing in the midst of the crowd during the college festival can be seen shouting 'Pakistan zindabad' followed by her classmate repeating the same and the other shooting the video on the mobile.