ಹಿಂದು ಬಾಲಕಿಯ ಅತ್ಯಾಚಾರ, ಮುಸ್ಲಿಂ ಆಗಲು ಒತ್ತಡ ಹೇರಿದ್ದ ದುರುಳ, ಮತಾಂತರ ನಿಷೇಧ ಕಾಯ್ದೆಯಡಿ ಕೇಸು

24-11-22 10:52 am       Bangalore Correspondent   ಕ್ರೈಂ

13 ವರ್ಷದ ಬಾಲಕಿಯನ್ನು ಬಲವಂತದಿಂದ ಅತ್ಯಾಚಾರಗೈದು ಬ್ಲಾಕ್ಮೇಲ್ ಮಾಡಿದ್ದಲ್ಲದೆ, ಮತಾಂತರ ಆಗುವಂತೆ ಒತ್ತಡ ಹೇರಿದ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಮತ್ತು ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ನ.24: 13 ವರ್ಷದ ಬಾಲಕಿಯನ್ನು ಬಲವಂತದಿಂದ ಅತ್ಯಾಚಾರಗೈದು ಬ್ಲಾಕ್ಮೇಲ್ ಮಾಡಿದ್ದಲ್ಲದೆ, ಮತಾಂತರ ಆಗುವಂತೆ ಒತ್ತಡ ಹೇರಿದ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಮತ್ತು ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮಂಡ್ಯದಲ್ಲಿ 13 ವರ್ಷದ ಹಿಂದು ಬಾಲಕಿಯನ್ನು ಮುಸ್ಲಿಂ ಯುವಕ ಯೂನುಸ್ ಪಾಷ ಎಂಬಾತ ಅತ್ಯಾಚಾರಗೈದಿದ್ದಲ್ಲದೆ, ಅಶ್ಲೀಲ ವಿಡಿಯೋ ಮಾಡಿಟ್ಟು ಬ್ಲಾಕ್ಮೇಲ್ ಮಾಡಿದ್ದ ಘಟನೆ ನಡೆದಿತ್ತು. ಹೆತ್ತವರು ಶಿರ್ಡಿ ಪ್ರವಾಸ ಹೋಗಿದ್ದಾಗ ಬಾಲಕಿ ತನ್ನ ಅಜ್ಜಿಯ ಜೊತೆಗೆ ವಾಸ ಇದ್ದಳು. ಈ ವೇಳೆ, ಅಜ್ಜಿಗೆ ನಿದ್ದೆ ಮಾತ್ರೆ ಕೊಟ್ಟು ಬಲವಂತದಿಂದ ಅತ್ಯಾಚಾರ ಕೃತ್ಯ ಎಸಗಿದ್ದ.

Blackmailing Classmate : सहपाठी ने छात्रा का बनाया अश्लील वीडियो, दो साल से  कर रहा ब्लैकमेल - ncr Blackmailing classmate for two years by making  obscene video

ಆರೋಪಿ ಇದಕ್ಕೂ ಮೊದಲೇ ಬಾಲಕಿಗೆ ಮೊಬೈಲ್ ತೆಗೆಸಿಕೊಟ್ಟಿದ್ದು, ಅದರ ಸಲುಗೆಯಲ್ಲಿ ವಿಡಿಯೋ ಕರೆ ಮಾಡಿ ಖಾಸಗಿ ಅಂಗಗಳನ್ನು ತೋರಿಸುವಂತೆ ಹೇಳುತ್ತಿದ್ದ. ಖಾಸಗಿ ಅಂಗ ತೋರಿಸಿದ್ದಾಗ ಅದನ್ನು ಸ್ಕ್ರೀನ್ ಶಾಟ್ ಮೂಲಕ ರೆಕಾರ್ಡ್ ಮಾಡಿಟ್ಟು ಬಳಿಕ ಅದೇ ವಿಡಿಯೋ ಮುಂದಿಟ್ಟು ಬ್ಲಾಕ್ಮೇಲ್ ಮಾಡಿದ್ದಾನೆ. ಅಲ್ಲದೆ, ನ.12ರಂದು ಆಕೆಯ ಹೆತ್ತವರು ಇಲ್ಲದೇ ಇದ್ದಾಗ ರಾತ್ರಿ ವೇಳೆ ಅಜ್ಜಿಯ ಊಟದಲ್ಲಿ ನಿದ್ದೆ ಮಾತ್ರೆ ಬೆರಸಿ ಕೊಡುವಂತೆ ಒತ್ತಡ ಹೇರಿದ್ದ. ಇಲ್ಲದಿದ್ದರೆ ವಿಡಿಯೋ ಹೊರಗೆ ಬಿಡುತ್ತೇನೆಂದು ಬೆದರಿಸಿದ್ದ. ಇದರಿಂದ ಬಾಲಕಿ ಅಜ್ಜಿಗೆ ನಿದ್ದೆ ಮಾತ್ರೆ ಕೊಟ್ಟಿದ್ದು ಅದೇ ರಾತ್ರಿ ಯುವಕ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ನೀನು ಮುಸ್ಲಿಂ ಆಗಿ ಮತಾಂತರ ಆದಲ್ಲಿ ನಿನ್ನನ್ನು ಮದುವೆಯಾಗುತ್ತೇನೆ ಎಂದೂ ನಂಬಿಸಿದ್ದಾನೆ.

Love Jihad in Uttar Pradesh Salman raped Girl Posing as Shyam then forcibly  taught Nikah at knife point - यूपी में लव जिहाद! श्याम बनकर सलमान ने किया  रेप, फिर चाकू की

ಆನಂತರ, ನ.18ರಂದು ಹೆತ್ತವರು ಶಿರ್ಡಿ ಪ್ರವಾಸದಿಂದ ಮರಳಿದ್ದು ಬಾಲಕಿ ಖಿನ್ನಳಾಗಿದ್ದನ್ನು ನೋಡಿ ವಿಚಾರಿಸಿದ್ದಾರೆ. ಈ ವೇಳೆ, ತಂದೆಯ ಬಳಿ ಆಗಿರುವ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ತಂದೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈ ನಡುವೆ, ಬಾಲಕಿ ಮುಸ್ಲಿಂ ಆಗಿ ಮತಾಂತರ ಆದಲ್ಲಿ ಮದುವೆಯಾಗುವುದಾಗಿ ಒತ್ತಡ ಹೇರುತ್ತಿದ್ದ ಕಾರಣಕ್ಕೆ ಪೊಲೀಸರು ಆರೋಪಿ ವಿರುದ್ಧ ಇತ್ತೀಚೆಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದ್ದ ಲವ್ ಜಿಹಾದ್ ವಿರುದ್ಧದ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಯೂನುಸ್ ಪಾಷಾಗೆ ಈಗಾಗಲೇ ಮದುವೆಯಾಗಿದ್ದು ಒಂದು ಮಗುವನ್ನು ಹೊಂದಿದ್ದಾನೆ. 

A man has been charged under the anti-conversion law and the Protection of Children from Sexual Offences (POCSO) Act by the police in Karnataka for allegedly blackmailing a 13-year-old girl with compromising pictures and forcing her to convert to Islam and marry him.