ಬ್ರೇಕಿಂಗ್ ನ್ಯೂಸ್
25-11-22 11:11 pm Bengaluru Correspondent ಕ್ರೈಂ
ಬೆಂಗಳೂರು, ನ.25: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್, ವಿವಾದಿತ ಇಸ್ಲಾಮಿಕ್ ಪ್ರವಚನಕಾರ ಝಾಕೀರ್ ನಾಯ್ಕ್ ಭಾಷಣದ ವಿಡಿಯೋಗಳಿಂದ ಪ್ರಭಾವಿತನಾಗಿದ್ದ ಎಂದು ಉನ್ನತ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ, ಝಾಕಿರ್ ನಾಯ್ಕ್ ವಿಡಿಯೋಗಳನ್ನು ಇತರರಿಗೆ ಹಂಚುತ್ತಿದ್ದ, ಅದೇ ವಿಡಿಯೋ ಮುಂದಿಟ್ಟು ತನ್ನ ಸಹವರ್ತಿಗಳನ್ನು ತೀವ್ರವಾದಿಗಳನ್ನಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಮೊಹಮ್ಮದ್ ಶಾರೀಕ್ ಮೊಬೈಲ್ ಪರಿಶೀಲನೆ ವೇಳೆ ಝಾಕೀರ್ ನಾಯ್ಕ್ ಭಾಷಣದ ವಿಡಿಯೋಗಳು ಪತ್ತೆಯಾಗಿವೆ. ಅಲ್ಲದೆ, ಇತ್ತೀಚೆಗೆ ಶಿವಮೊಗ್ಗದಲ್ಲಿ ಬಾಂಬ್ ಟ್ರಯಲ್ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಝ್ ಮುನೀರ್, ಸಯ್ಯದ್ ಯಾಸೀನ್ ಮತ್ತು ಜಬೀವುಲ್ಲಾನಿಗೂ ಶಾರೀಕ್, ಝಾಕೀರ್ ನಾಯ್ಕ್ ವಿಡಿಯೋಗಳನ್ನು ಕಳಿಸಿಕೊಟ್ಟು ಪ್ರೇರಣೆ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಬಾಂಬ್ ತಯಾರಿ ಬಗ್ಗೆ ಪಿಡಿಎಫ್ ಫೈಲ್ ಗಳು, ಇಸ್ಲಾಮಿಕ್ ತೀವ್ರವಾದ ಕುರಿತ ವಿಡಿಯೋಗಳು ಮತ್ತು ಆಡಿಯೋಗಳನ್ನು ಶಾರೀಕ್ ತನ್ನ ಸಹವರ್ತಿಗಳಿಗೆ ಕಳಿಸಿಕೊಡುತ್ತಿದ್ದ. ಆಮೂಲಕ ಯುವಕರನ್ನು ತೀವ್ರವಾದದತ್ತ ಆಕರ್ಷಿಸುವಂತೆ ಮಾಡುತ್ತಿದ್ದ. ತೀರ್ಥಹಳ್ಳಿ, ಶಿವಮೊಗ್ಗ, ಭದ್ರಾವತಿ ಭಾಗದ ಮುಸ್ಲಿಂ ಯುವಕರನ್ನು ಹೆಚ್ಚಾಗಿ ತನ್ನ ತೀವ್ರವಾದ ಗುಂಪಿಗೆ ಬರುವಂತೆ ಪ್ರೇರೇಪಿಸುತ್ತಿದ್ದ. ಆಮೂಲಕ ಐಸಿಸ್ ನೆಟ್ವರ್ಕ್ ಬೆಳೆಸಲು ಪ್ರಯತ್ನ ಪಡುತ್ತಿದ್ದ.
ಶಾರೀಕ್ ಮೊಬೈಲ್ ನಲ್ಲಿ ಝಾಕೀರ್ ನಾಯ್ಕ್ ವಿಡಿಯೋಗಳು ಹೆಚ್ಚು ಕಂಡುಬಂದಿದ್ದು, ಅದನ್ನು ಭಾರತದ ವಿರುದ್ಧ ಯುವಕರನ್ನು ಪ್ರೇರೇಪಿಸಲು ಬಳಸುತ್ತಿದ್ದ ಎನ್ನುವ ಶಂಕೆ ಪೊಲೀಸರಲ್ಲಿದೆ. ಇದಲ್ಲದೆ, ಇಸ್ಲಾಮಿಕ್ ಸ್ಟೇಟ್ ರೂಪಿಸುವ ಐಸಿಸ್ ಸಿದ್ಧಾಂತವನ್ನು ಪ್ರಚುರಪಡಿಸುತ್ತಿದ್ದ. ಐಸಿಸ್ ನೆಟ್ವರ್ಕ್, ಭಯೋತ್ಪಾದನೆಯ ಮೂಲಕ ಯುವಕರನ್ನು ದೇಶದ ವಿರುದ್ಧ ಹೋರಾಡುವಂತೆ ಪ್ರೇರೇಪಣೆ ನೀಡುತ್ತಿದ್ದ. ಜನರ ನಡುವೆ ಹೆಚ್ಚು ಬಳಕೆಯಲ್ಲಿಲ್ಲದ ಟೆಲಿಗ್ರಾಮ್, ವೈರ್, ಸಿಗ್ನಲ್, ಇನ್ ಸ್ಟಾ ಗ್ರಾಮ್ ರೀತಿಯ ಏಪ್ ಗಳಲ್ಲಿ ತನ್ನ ಸಹವರ್ತಿ ಯುವಕರ ಜೊತೆ ಐಸಿಸ್ ಬಗ್ಗೆ ಚರ್ಚಿಸುತ್ತಿದ್ದ. ಅಲ್ಲದೆ, ಜಿಹಾದ್ ನಡೆಸುವ ಬಗ್ಗೆ ಯುವಕರಿಗೆ ತರಬೇತಿ ನೀಡುತ್ತಿದ್ದ ಎಂಬ ಮಾಹಿತಿಗಳನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ.
ಕಳೆದ ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ವಿಚಾರದಲ್ಲಿ ಗುಂಪು ಘರ್ಷಣೆ ನಡೆದಿತ್ತು. ಕೋಮು ವೈಷಮ್ಯದಿಂದಾಗಿ ಚೂರಿ ಇರಿತ, ಗಲಭೆ ಘಟನೆಗಳು ನಡೆದಿದ್ದವು. ಪ್ರೇಮ್ ಸಿಂಗ್ ಎಂಬಾತನಿಗೆ ಚೂರಿ ಇರಿತ ನಡೆಸಿದ್ದ ಪ್ರಕರಣದಲ್ಲಿ ಪೊಲೀಸರು ಮಹಮ್ಮದ್ ಜಬೀವುಲ್ಲಾನನ್ನು ಬಂಧಿಸಿದ್ದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ವಿಷಯಗಳು ಹೊರಬಂದಿದ್ದವು. ಮಾಝ್ ಮುನೀರ್ ಮತ್ತು ಮೊಹಮ್ಮದ್ ಶಾರೀಕ್ ಸಂಪರ್ಕದ ಬಗ್ಗೆ ಮಾಹಿತಿಗಳನ್ನು ಬಾಯಿಬಿಟ್ಟಿದ್ದ. ಮಾಝ್ ಮತ್ತು ಯಾಸಿನನ್ನು ಬಂಧಿಸಿದಾಗ, ಶಿವಮೊಗ್ಗದ ತುಂಗಾ ತೀರದಲ್ಲಿ ಮತ್ತು ಬಂಟ್ವಾಳದ ನೇತ್ರಾವತಿ ನದಿ ತೀರದಲ್ಲಿ ಬಾಂಬ್ ಗಳನ್ನು ಸ್ಫೋಟಿಸುವ ಪ್ರಯೋಗ ನಡೆಸಿದ್ದಾಗಿ ಹೇಳಿದ್ದರು. ಅಲ್ಲದೆ, ತಮ್ಮನ್ನು ತೀವ್ರವಾದಕ್ಕೆ ಗುರಿಪಡಿಸಿದ್ದ ಮೊಹಮ್ಮದ್ ಶಾರೀಕ್ ಇದಕ್ಕೆಲ್ಲ ಕಾರಣ ಎಂದು ಹೇಳಿದ್ದರು. ಅಷ್ಟರಲ್ಲಿ ಶಾರೀಕ್ ತಪ್ಪಿಸಿಕೊಂಡಿದ್ದು, ತಮಿಳುನಾಡು, ಕೇರಳದಲ್ಲಿ ಅವಿತುಕೊಂಡಿದ್ದ. ಇದೀಗ ಸ್ವತಃ ಬಾಂಬ್ ಸ್ಫೋಟಿಸಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
The main accused in the Mangaluru blast case Mohammed Shariq was influenced by Islamic preacher Zakir Naik's videos and shared them with others, top police sources told India Today. Police sources said that the accused used to share Zakir Naik's videos with Maz Muneer, Yasin, Zabi and others to radicalise them. Shariq was the handler of Maz Muneer, Yasin and Zabi. Shivamogga Police officials confirmed that Shariq used to share PDFs, videos and audio to radicalise them. Most of the videos of ISIS and influential Muslim leaders, including Zakir Naik, were shared by the accused, police sources said.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm